ಬೆಣ್ಣೆಯಂತಹ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಬ್ರೋ ಗೌಡ
Feb 16, 2025, 12:53 IST
|

ಈ ಧಾರಾವಾಹಿಯಲ್ಲಿ ತಾಯಿಯ ತಾಳಕ್ಕೆ ತಕ್ಕಂತೆ ನಡೆಯುವ ವೈಷ್ಣವ್, ಅಮ್ಮನ ಮಾತು ಕೇಳಿ ಪ್ರೀತಿಸಿದ ಹುಡುಗಿಯನ್ನು ಬಿಟ್ಟು, ಅಮ್ಮ ಹೇಳಿದ ಹುಡುಗಿಯನ್ನು ಮದುವೆಯಾದ, ಇನ್ನೇನು ಅವಳ ಜೊತೆ ಸುಂದರವಾಗಿ ಸಂಸಾರ ಆರಂಭಿಸಬೇಕು ಎಂದು ಅಂದುಕೊಳ್ಳುವಾಗಲೇ ಅಮ್ಮನ ಇನ್ನೊಂದು ಕುತಂತ್ರಕ್ಕೆ ಬಲಿಯಾಗಿ ಮತ್ತೆ ಲಕ್ಷ್ಮೀಯಿಂದ ದೂರವಾಗಿದ್ದಾರೆ.
ಅಷ್ಟೇ ಅಲ್ಲ ವೈಷ್ಣವ್ ಗೆ ಮತ್ತೊಂದು ಮದುವೆ ಮಾಡಿಸಲು ರೆಡಿಯಾಗಿದ್ದಾಳೆ ಕಾವೇರಿ. ಇದಿಷ್ಟು ಸೀರಿಯಲ್ ಗೆ ಸಂಬಂಧಿಸಿದ ವಿಷ್ಯ ಆಗಿದ್ರೆ ನಿಜ ಜೀವನದ್ದಲ್ಲೂ ಬ್ರೋ ಗೌಡ ಮದುವೆಯಾಗೋದಕ್ಕೆ ರೆಡಿಯಾಗಿದ್ದಾರೆ. ಇದನ್ನು ಸ್ವತಃ ಶಮಂತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ತಾವು ಹೊಸ ಜೀವನಕ್ಕೆ ಕಾಲಿಡುವ ಬಗ್ಗೆ ತಿಳಿಸಿದ್ದಾರೆ. ಫೆಬ್ರುವರಿ 14 ರ ವ್ಯಾಲೆಂಟೈನ್ಸ್ ಡೇ ಸಂಭ್ರಮದಂದು ಬ್ರೋ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ New Chapter Unlocked Of #brogram ಎಂದು ಬರೆದುಕೊಂಡು ಒಂದು ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ.
ಬ್ರೋ ಗೌಡ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಮೇಘನಾ. ಇವರು ಮೇಕಪ್ ಆರ್ಟಿಸ್ಟ್ (Makeup Artist)ಆಗಿದ್ದು, ಇವರಿಬ್ಬರ ಪ್ರೀತಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶಮಂತ್ ಗೌಡ, ಬ್ಲಾಕ್ ಅಂಡ್ ವೈಟ್ ಸೂಟ್ ನಲ್ಲಿ ಕಾಣಿಸಿಕೊಂಡಿದ್ರೆ, ಮೇಘನಾ ವೈಟ್ ಡ್ರೆಸ್ಸಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘನಾ ಮತ್ತು ಬ್ರೋ ಗೌಡ ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ.
ಈ ಹಿಂದೆ ಈ ಜೋಡಿ , ಜೊತೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳನ್ನು ಸಹ ಮಾಡುತ್ತಿದ್ದರು. ಇದೀಗ ಅದೇ ಹುಡುಗಿಯನ್ನು ಪ್ರೀತಿಸಿ, ಹೊಸ ಜೀವನಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ. ಈ ಜೋಡಿಗೆ ಸೋಶಿಯಲ್ ಮಿಡಿಯಾದಾದ್ಯಂತ ಅಭಿಮಾನಿಗಳು ಹಾಗೂ ಕಲಾವಿದರು, ಶುಭ ಕೋರಿದ್ದಾರೆ. ಇಬ್ಬರ ಮದುವೆ ಯಾವಾಗ ಅನ್ನೋದನ್ನು ಶಮಂತ್ ಇನ್ನೂ ರಿವೀಲ್ ಮಾಡಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025