ರಾತ್ರೋರಾತ್ರಿ ಕಾರ್ಕಳದ ಪರಶುರಾಮನ ಕಂಚಿನ ಮೂರ್ತಿ ಮಾಯ, ಭಕ್ತರು ಕಂಗಾಲು

 | 
Bbg

ಮೊದಲಿನಿಂದಲೂ ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಪರಶುರಾಮ ಥೀಮ್ ಪಾಕ್೯ ಕಾಮಗಾರಿ ಶುರುವಾದಾಗಿನಿಂದಲೂ  ಸದ್ದು ಮಾಡುತ್ತಿದ್ದು, ಬುಧವಾರವಷ್ಟೇ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಧಪಟ್ಟಂತೆ ಸಲ್ಲಿಸದ್ದ ಅರ್ಜಿಯನ್ನು ವಜಾಗೊಳಿಸಿದ್ದ ಬೆನ್ನಲ್ಲೇ ಪರಶುರಾಮ ನಾಪತ್ತೆಯಾಗಿದೆ.

ಬೈಲೂರಿನ ಬೆಟ್ಟದ ಮೇಲೆ ನಿಂತಿದ್ದ ಪರಶುರಾಮನ ಮೂರ್ತಿಯು ಕಾಣುತ್ತಿಲ್ಲ, ಕೊಡಲಿಯೂ ಕಾಣುತ್ತಿಲ್ಲ, ಬಿಲ್ಲು ಸಹ ಕಾಣುತ್ತಿಲ್ಲ ಹಾಗಾದ್ರೆ ರಾತ್ರೋ ರಾತ್ರಿ ಈ ಪರಶುರಾಮನ ಕಳ್ಳತನ ಮಾಡಲಾಯಿತಾ? ಅಥವಾ ಅಲ್ಲಿಂದ ಆ ಮೂರ್ತಿಯನ್ನೇ ತೆರವು ಮಾಡಲಾಯಿತಾ? ಮತ್ತೆ ಹೇಗೆ ನಾಪತ್ತೆಯಾಗಲು ಸಾಧ್ಯ ಎಂದು ಇದಕ್ಕೆಲ್ಲ ಉತ್ತರ ಸಿಗಬೇಕಾಗಿದೆ.

ಇದು ಸಂಪೂರ್ಣ ನಕಲಿ ಎಂದು ಈಗ ನೂರಕ್ಕೆ ನೂರರಷ್ಟು ಸತ್ಯ ಕಾಣುತ್ತಿದ್ದು, ಜನರನ್ನು ನಂಬಿಸಿ, ಧಾರ್ಮಿಕವಾಗಿ ಎಲ್ಲರನ್ನು ವಂಚನೆಗೊಳಿಸಲಾಗಿದೆ. ಇದು ಕಾರ್ಕಳ ಶಾಸಕರ ದ್ರೋಹದ ಕಥೆಯಾಗಿದ್ದು, ನಕಲಿ ಪರಶುರಾಮನ ಪ್ರತಿಮೆಯನ್ನ ಸ್ಥಾಪನೆ ಮಾಡಿ ಇದು ಕಂಚಿನ ಮೂರ್ತಿ ಎಂದು ಹೇಳಿ ಸಾರ್ವಜನಿಕರಿಗೆ ವಂಚನೆ ಮಾಡಲಾಗಿದ್ದು, ಕಂಚಿನ ಪ್ರತಿಮೆಯನ್ನು ಸ್ಥಾಪಿಸುವವರೆಗೂ ಧರಣಿಯನ್ನು ಮತ್ತು ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದು ಅಲ್ಲಿಯ ಗ್ರಾಮಸ್ಥರು ತಿಳಿಸಿದ್ದಾರೆ.

ಅಷ್ಟಕ್ಕೂ ಉಡುಪಿ ಮತ್ತು ಕಾರ್ಕಳದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ಸುಮಾರು 15 ಕೋಟಿ ವೆಚ್ಚದಲ್ಲಿ 33 ಅಡಿಯ ಪರಶುರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು. ಜನವರಿ 28, 2023 ರಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯವರು ಉದ್ಘಾಟಿಸಿದ್ದರು. 

ಈ ಪರಶುರಾಮ ಪ್ರತಿಮೆ ರಾಜ್ಯ ಮತ್ತು ರಾಷ್ಟ್ರದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಿದ್ದು, ಥೀಮ್ ಪಾರ್ಕ್‌ನಲ್ಲಿ ಭಜನಾ ಮಂದಿರ, ಮ್ಯೂಸಿಯಂ, ತೆರೆದ ಆಂಫಿಥಿಯೇಟರ್, ಪರಶುರಾಮನ ಜೀವನವನ್ನು ಚಿತ್ರಿಸುವ ರೇಖಾಚಿತ್ರಗಳು, ಆಡಿಯೊ ವಿಶುವಲ್ ಗ್ಯಾಲರಿ ಮತ್ತು ರೆಸ್ಟೋರೆಂಟ್ ಕೂಡ ಇಲ್ಲಿತ್ತು. ಆದರೆ ಅಲ್ಲಿನ ಆಕರ್ಷಣಾ ಕೇಂದ್ರ ಬಿಂದು ಪರಶುರಾಮನ ಮೂರ್ತಿಯೇ ಕಾಣೆಯಾಗಿರುವುದು ನಿಜಕ್ಕೂ ವಿಷಾದಕರ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.