ಗಗನ ಡ್ರೋನ್ ರೊಮ್ಯಾಂಟಿಕ್ ಅವತಾರಕ್ಕೆ ಫಿದಾ ಆದ ರಚ್ಚು, ಪ್ರತಾಪ್ ಮೇಲೆ‌‌ ಬುಲ್ ಬುಲ್ ಕಣ್ಣು

 | 
 Nki
ಕನ್ನಡದ ಬಿಗ್​ಬಾಸ್​ ಸೀಸನ್ 10 ರನ್ನರ್ ಅಪ್​ ಆಗಿದ್ದ ಡ್ರೋನ್​ ಪ್ರತಾಪ್​ ಸಖತ್​ ಸುದ್ದಿಯಲ್ಲಿದ್ದಾರೆ. ಬಿಗ್​ಬಾಸ್​ ಬೆನ್ನಲ್ಲೇ ಡ್ರೋನ್ ಪ್ರತಾಪ್ ಅವರು ಭರ್ಜರಿ ಬ್ಯಾಚುಲರ್ಸ್ ಶೋಗೆ ಎಂಟ್ರಿ ಕೊಟ್ಟು ಕಮಾಲ್​ ಮಾಡುತ್ತಿದ್ದಾರೆ. ಹೌದು, ಡ್ರೋನ್​ ಪ್ರತಾಪ್​ಗೆ ಜೋಡಿಯಾಗಿ ಆಯ್ಕೆಯಾಗಿದ್ದಾರೆ ಮಹಾನಟಿ ಗಗನಾ.
ಡ್ರೋನ್ ಪ್ರತಾಪ್ ಇನ್ನು ಸಿಂಗಲ್ ಆಗಿದ್ದಾರೆ. ಗರ್ಲ್‌ಫ್ರೆಂಡ್ ಏನೂ ಇಲ್ಲ. ಆ ರೀತಿ ಸುದ್ದಿನೂ ಇಲ್ಲ ಬಿಡಿ. ಆದರೆ, ಕ್ರೇಜಿ ಸ್ಟಾರ್ ರವಿಚಂದ್ರನ್ ಶೋಗೆ ಬಂದ್ಮೇಲೆ ಲವ್ ಆಗೋದಿಲ್ವೇ? ಜೊತೆಗೊಬ್ಬಳು ಜೋಡಿ ಆಗೋದಿಲ್ವೇ? ಮಹಾನಟಿ ಶೋದಲ್ಲಿ ಭಾರೀ ಸದ್ದು ಮಾಡಿರೋ ನಟಿ ಗಗನ ಇಲ್ಲಿ ಡ್ರೋನ್ ಪ್ರತಾಪ್‌ಗೆ ಜೋಡಿ ಆಗಿದ್ದಾರೆ. ಅವರಿಬ್ಬರ ಜೋಡಿ ಜನರ ಮೋಡಿ ಮಾಡ್ತಿದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಬ್ಯಾಚುಲರ್ಸ್ ತಮ್ಮ ತಮ್ಮ ಪಾಟ್ನರ್​ಗೆ ಸರ್​ಪ್ರೈಸ್​ ಕೊಡಬೇಕು ಅಂತ ಜಡ್ಜಸ್​ ಹೇಳಿದ್ದರು. ಹೀಗಾಗಿ ಬ್ಯಾಚುಲರ್ಸ್ ಎಲ್ಲ ತಮ್ಮ ಪಾಟ್ನರ್​ನಳಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ. ಆದ್ರೆ ಡ್ರೋನ್​ ಪ್ರತಾಪ್​ ಅವರು ಈ ರೀತಿಯ ಸರ್​ಪ್ರೈಸ್​ ಮೇಲೆ ಸರ್​ಪ್ರೈಸ್​ಗಳನ್ನು ಕೊಡುತ್ತಾರೆ ಅಂತ ಯಾರು ಸಹ ಊಹೆ ಮಾಡಿಕೊಂಡಿರಲಿಲ್ಲ. ಮೊದಲು ಪಾಟ್ನರ್ ಗಗನಾಳನ್ನ ಹೆಲಿಕಾಪ್ಟರ್​ನಲ್ಲಿ 1000 ಅಡಿ ಎತ್ತರಕ್ಕೆ ಕರೆದುಕೊಂಡು ಹೋಗಿದ್ದಾರೆ. ಸಾವಿರ ಅಡಿ ಎತ್ತರಕ್ಕೆ ಹೋಗಿದ್ದಲ್ಲದೇ ಅಲ್ಲಿಯೇ ಗಗನಾಗೆ ಅರಿಶಿನ-ಕುಂಕುಮ ಕೊಟ್ಟಿದ್ದಾರೆ.
ಇನ್ನೂ ಈ ವಾರ ಗಗನ ಜೊತೆ ಹೆಜ್ಜೆ ಹಾಕಿ ನಾವ್ಯಾವ ಡ್ಯಾನ್ಸರ್ ಗೂ ಕಡಿಮೆ ಇಲ್ಲ ಎಂದು ಕುಣಿದು ತೋರಿಸಿದ್ದಾರೆ. ಇನ್ನು ಇವರಿಬ್ಬರೂ ಸಖತ್ ಆಗಿ ಕುಣಿದಿದ್ದಾರೆ ಎಂದೂ ಅಂತ ಹಾಡಿ ಹೊಗಳಿದ್ದಾರೆ. ಇದಾದ ಬಳಿಕ ಬುಲ್ ಬುಲ್ ರಚಿತಾ ರಾಮ್ ಅವರು ಪ್ರತಾಪ್​ ಅವರನ್ನು ಕರೆದು ಹಗ್​ ಮಾಡಿ ತುಂಬಾ ತುಂಬಾ ಖುಷಿ ಆಯ್ತು ಎಂದು ಹಾಡಿ ಹೊಗಳಿದ್ದಾರೆ. ತದ ನಂತರದಲ್ಲಿ ಗಿಲ್ಲಿ ಬಂದು ನಗೆ ಮೂಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub