ಶಾಲಾ ಮಕ್ಕಳಿಗೆ ಬಂಪರ್ ಅವಕಾಶ, ಇನ್ನುಮುಂದೆ ವಿಮಾನದ ಮೂಲಕ ಪ್ರವಾಸ ಮಾಡಲು ತೀರ್ಮಾನ
ಸರಕಾರಿ ಶಾಲೆನಾ ಅಲ್ಲೇನಿದೆ? ಕಟ್ಟಡ ಸರಿಯಿಲ್ಲ. ಶಿಕ್ಷಕರಿಲ್ಲ. ಮಕ್ಕಳಿಗೆ ಶಿಸ್ತು ಕಲಿಸುವುದಿಲ್ಲ ಎಂದೆಲ್ಲ ಹೇಳಿ ಅವಹೇಳನ ಮಾಡಿ ನಗುತ್ತಿದ್ದ ಜನರೇ ಈ ಲೇಖನ ನಿಮಗಾಗಿ. ಹೌದು ಮಕ್ಕಳನ್ನು ಪ್ರವಾಸಕ್ಕೆ ಬಸ್ಸು ಅಥವಾ ರೈಲಿನಲ್ಲಿ ಕರೆದುಕೊಂಡು ಹೋಗುವುದು ಸಾಮಾನ್ಯ.
ಆದರೆ ಈ ಮುಖ್ಯೋಪಾಧ್ಯಾಯರು ಮಕ್ಕಳನ್ನು ಪ್ರವಾಸಕ್ಕೆ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳನ್ನು ವಿಮಾನದಲ್ಲಿ ದೆಹಲಿಗೆ ಪ್ರವಾಸಕ್ಕೆಂದು ಕರೆದುಕೊಂಡು ಹೋಗಿದ್ದಾರೆ.
ಮುಖ್ಯೋಪಾಧ್ಯಾಯ ಮಹಾಂತೇಶ್ವರ ಕಟ್ಟಿಮನಿ ಅವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಕಲಬುರಗಿಯಿಂದ ಮುಂಬೈಗೆ ರೈಲಿನಲ್ಲಿ ಹೋಗಿದ್ದಾರೆ. ಮುಂಬೈನಿಂದ ದೆಹಲಿಗೆ ವಿಮಾನದಲ್ಲಿ ಹೋಗಿದ್ದಾರೆ. ಮುಖ್ಯೋಪಾಧ್ಯಾಯ ಮಹಾಂತೇಶ್ವರ ಕಟ್ಟಿಮನಿ ಮಕ್ಕಳಿಂದ ಅಲ್ಪ ಹಣ ಸಂಗ್ರಹಿಸಿ, ಉಳಿದ ಹಣವನ್ನು ತಮ್ಮ ಕೈಯಿಂದ ಹಾಕಿದ್ದಾರೆ. ದೆಹಲಿಯಲ್ಲಿ ಸಂಸತ್ ಭವನ, ಕೆಂಪುಕೋಟೆ, ರಾಷ್ಟ್ರಪತಿ ಭವನ, ಇಂಡಿಯಾ ಗೇಟ್ ನೋಡಿ ಶಾಲಾ ಮಕ್ಕಳು ಸಂಭ್ರಮಿಸಿದ್ದಾರೆ.
ಇನ್ನು ವಿಮಾನ ಪ್ರಯಾಣದಿಂದ ಶಾಲಾ ಮಕ್ಕಳಿಗೆ ಸಂತಸವಾಗಿದೆ. ವರ್ಷಕ್ಕೊಮ್ಮೆ ಬರುವ ಪ್ರವಾಸ ಮಕ್ಕಳ ಮುಖದಲ್ಲಿ ಮಾತ್ರವಲ್ಲ ಪಾಲಕರ ಮುಖದಲ್ಲಿ ಕೂಡ ಹರ್ಷ ಮೂಡಿಸಿದೆ. ಇನ್ನು ಈ ಕುರಿತಾಗಿ ಮಾದ್ಯಮದಲ್ಲಿ ಸುದ್ದಿ ಪ್ರಕಟಿಸಿ ಪಬ್ಲಿಕ್ ಟಿವಿ ರಂಗಣ್ಣ ಅವರು ಮುಖ್ಯೋಪಾಧ್ಯಾಯ ಮಹಾಂತೇಶ್ವರ ಕಟ್ಟಿಮನಿ ಅವರನ್ನು ಹಾಡಿ ಹೊಗಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.