ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಜೋಡಿ, ಹಷಿ೯ಕಾ ಪೂಣಚ್ಚ ಹಾಗೂ ಭುವನ್ ಗೆ ಶುಭ ಹಾರೈಸಿದ ಗಣ್ಯರು

 | 
Bx

 ಕೆಲ ದಿನಗಳ ಹಿಂದೆ ನಟ ಅಂಬರೀಷ್, ಸುಮಲತಾ ದಂಪತಿ ಪುತ್ರ ಅಭಿಷೇಕ್ ಅವರು ಅವಿವಾ ಬಿದ್ದಪ್ಪ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ ಅವರು ಕೊಡಗಿನಲ್ಲಿ ಮದುವೆಯಾಗಿದ್ದಾರೆ. ಶಾಸ್ತ್ರೋಕ್ತವಾಗಿ, ಅದ್ದೂರಿಯಾಗಿ ಈ ಜೋಡಿ ಮದುವೆ ಆಗಿದೆ.

ಈ ಮದುವೆಯಲ್ಲಿ ಮೆಹೆಂದಿ ಶಾಸ್ತ್ರ ಎಲ್ಲವೂ ಸುಂದರವಾಗಿ ನಡೆದಿದೆ. ಹರ್ಷಿಕಾ ಅವರು ಸರಳವಾಗಿ ಮೆಹೆಂದಿ ಹಾಕಿಸಿಕೊಂಡಿದ್ದಾರೆ. ಇನ್ನು ಭುವನ್ ಪೊನ್ನಣ್ಣ ಅವರು ಮದುವೆಗೂ ಮುನ್ನ ಭಾವಿ ಪತ್ನಿಯ ಕೈಯಿಂದ ಅವರ ತೋಟದ ಮನೆಯ ಪ್ರವೇಶ ಮಾಡಿಸಿದ್ದಾರೆ. ಮದುವೆಗೂ ಮುನ್ನ ಈ ಜೋಡಿ ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ.ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ ಅವರು ಹೊಸ ಸಿನಿಮಾ ಕೂಡ ಮಾಡುತ್ತಿದ್ದು, ಒಂದಾದ ಮೇಲೆ ಒಂದರಂತೆ ಸಿಹಿ ಸುದ್ದಿಗಳನ್ನು ನೀಡುತ್ತಿದ್ದಾರೆ.

ಎರಡೂ ಕುಟುಂಬಗಳ ಆಪ್ತರು, ಸ್ನೇಹಿತರು, ಸಿನಿಮಾ ಮಂದಿಯ ಸಮ್ಮುಖದಲ್ಲಿ ಕೊಡಗಿನ ವಿರಾಜಪೇಟೆಯ ಅಮ್ಮತ್ತಿಯ ಕೊಡವ ಸಮಾಜದಲ್ಲಿ ಕೊಡವ ಸಂಪ್ರದಾಯದಂತೆ ವಿವಾಹ ಕಾರ್ಯ ನೆರವೇರಿದೆ.

ಹರ್ಷಿಕಾ-ಭುವನ್ ಮದುವೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ, ಬಿಎಸ್‌ವೈ, ಮುರುಗೇಶ್ ನಿರಾಣಿ, ದೊಡ್ಡಣ್ಣ, ಸುಧಾಕರ್, ಅನುಪ್ರಭಾಕರ್ ದಂಪತಿ, ತಬಲಾ ನಾಣಿ ಸೇರಿದಂತೆ ಹಲವರು ಭಾಗಿಯಾಗಿ ಶುಭಹಾರೈಸಿದ್ದರು.ಚಂದನವನದ ನವ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ನೂರು ಕಾಲ ಜೊತೆಯಾಗಿ ಸುಖವಾಗಿ ಬಾಳಲಿ ಎಂದು ವಿಶ್ ಮಾಡ್ತಿದ್ದಾರೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.