ಮುದ್ದಾದ ಪತ್ನಿ ಬಿಟ್ಟು ಹೋದ ಬಳಿಕ ದಿನವಿಡೀ ಕಣ್ಣಿರು ಹಾಕುತ್ತಿರುವ ಚಹಾಲ್
Jan 12, 2025, 17:08 IST
|

ಚಹಾಲ್ ಮತ್ತು ಧನಶ್ರೀ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್ ಫಾಲೋ ಮಾಡಿದ್ದಾರೆ. ಅಲ್ಲದೆ ಚಹಾಲ್ ಅವರು ಧನಶ್ರೀ ಅವರೊಂದಿಗಿನ ಎಲ್ಲಾ ಫೋಟೋಗಳ ಇನ್ಸ್ಟಾ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ತನ್ನ ಪೋಸ್ಟ್‌ನಲ್ಲಿ, ಚಹಾಲ್ ತನ್ನನ್ನು ಉತ್ತಮ ಆಟಗಾರ, ಉತ್ತಮ ಮಗ, ಉತ್ತಮ ಸಹೋದರ ಮತ್ತು ಉತ್ತಮ ಸ್ನೇಹಿತ ಎಂದು ಬಣ್ಣಿಸಿದ್ದಾರೆ ಆದರೆ ಅವರು ತಮ್ಮನ್ನು ತಾವು ಉತ್ತಮ ಪತಿ ಎಂದು ಬಣ್ಣಿಸಿಲ್ಲ.
ಯುಜ್ವೇಂದ್ರ ಚಹಾಲ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, ನನಗೆ ಅಚಲವಾದ ಪ್ರೀತಿ ಮತ್ತು ಬೆಂಬಲವನ್ನು ತೋರಿಸಿದ ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಅವರಿಲ್ಲದಿದ್ದರೆ ನಾನು ಇಷ್ಟು ದೂರ ಪ್ರಯಾಣಿಸಲು ಸಾಧ್ಯವಾಗುತ್ತಿರಲಿಲ್ಲ. ಆದಾಗ್ಯೂ ಈ ಪ್ರಯಾಣ ಇನ್ನೂ ಮುಗಿದಿಲ್ಲ!!! ನನ್ನ ದೇಶ, ನನ್ನ ತಂಡ ಮತ್ತು ನನ್ನ ಅಭಿಮಾನಿಗಳಿಗೆ ಇನ್ನೂ ಅನೇಕ ನಂಬಲಾಗದ ಓವರ್‌ಗಳು ಉಳಿದಿವೆ!!! ನಾನು ಆಟಗಾರನಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ. ನಾನು ಒಬ್ಬ ಮಗ, ಸಹೋದರ ಮತ್ತು ಸ್ನೇಹಿತ ಕೂಡ. ಇತ್ತೀಚೆಗೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಜನರ ಕುತೂಹಲವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಇತ್ತೀಚಿಗೆ ನಾನು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಕೆಲವು ವಿಷಯಗಳ ಬಗ್ಗೆ ಮಾತನಾಡುವುದನ್ನು ನೋಡಿದ್ದೇನೆ, ಅದು ನಿಜವಾಗಿರಬಹುದು ಅಥವಾ ಇಲ್ಲದಿರಬಹುದು ಎಂದು ಬರೆದಿದ್ದಾರೆ.
ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ನೋವುಂಟು ಮಾಡಿದೆ’ ಎಂದು ಚಹಾಲ್ ಬರೆದಿದ್ದಾರೆ, ಒಬ್ಬ ಮಗ, ಸಹೋದರ ಮತ್ತು ಸ್ನೇಹಿತನಾಗಿ ಕೇಳುತ್ತೇನೆ ಈ ಊಹಾಪೋಹಗಳನ್ನು ಹರಡಬೇಡಿ, ನಾನು ಮತ್ತು ನನ್ನ ಕುಟುಂಬಕ್ಕೆ ನೋವುಂಟು ಮಾಡಬೇಡಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ನನ್ನ ಮನೆಯವರು ಯಾವಾಗಲೂ ಹೇಳುತ್ತಿದ್ದರು.
ಅವರು ನನಗೆ ಶಾರ್ಟ್‌ಕಟ್‌ಗಳ ಬದಲು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಕಲಿಸಿದರು, ನಾನು ಯಾವಾಗಲೂ ನಿಮ್ಮ ಪ್ರೀತಿ ಮತ್ತು ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತೇನೆ ಎಂದು ಚಹಾಲ್ ಬರೆದುಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023