ಇದುವರೆಗೂ ಒಂದೇ ಒಂದು ಡೇಟಿಂಗ್ ಇಲ್ಲದೆ ಮುದುಕಿ ತರ ಆಗಿದೆ, ಚೈತ್ರ ಆಚಾರ್

ಕೆಲವೊಮ್ಮೆ ಚಿತ್ರ ವಿಚಿತ್ರ ಡ್ರೆಸ್ ಧರಿಸಿಯೋ , ಇಲ್ಲವೇ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ನಟಿ ಅಂದ್ರೆ ಅದು ಚೈತ್ರಾ ಆಚಾರ್ ಮಹಿರಾ, ಅ ದೃಶ್ಯ, ಗಿಲ್ಕಿ, ತಲೆ ದಂಡ ಸಿನಿಮಾದಲ್ಲಿ ನಟಿಸಿರುವ ಚೈತ್ರಾ ಆಚಾರ್ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ತಂದುಕೊಟ್ಟಿದ್ದು ಟೋಬಿ ಸಿನಿಮಾ ಮತ್ತು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ನಟಿ ಚೈತ್ರಾ ಇನ್ನೂ ಸಿಂಗಲ್ ಅಂದ್ರೆ ಯಾರೂ ನಂಬುವುದಿಲ್ಲ.
ಅಷ್ಟಕ್ಕೂ ಅವರು ಯಾಕೆ ಸಿಂಗಲ್? ಯಾವ ಆಲೋಚನೆಯಲ್ಲಿ ಸಿಂಗಲ್ ಆಗಿರಬೇಕು ನಿರ್ಧರಿಸಿದ್ದಾರೆ ಎಂದು ಹಂಚಿಕೊಂಡಿದ್ದಾರೆ.ಸದ್ಯ ಜೀವನದಲ್ಲಿ ನಾನು ಸಿಂಗಲ್ ಆಗಿದ್ದೀನಿ. ಸಾಕಷ್ಟು ಕ್ರಶ್ ಸ್ಟೋರಿಗಳು ಬರುತ್ತಿರುತ್ತದೆ. ಆದರೆ ಸಿಂಗಲ್ ಆಗಿರಬೇಕು ಎಂದು ನಾನು ನಿರ್ಧರಿಸಿದ್ದೀನಿ ಏಕೆಂದರೆ ಕೆಲಸದ ಮೇಲೆ ಸಂಪೂರ್ಣ ಗಮನ ಹರಿಸಬೇಕು ಎಂದು. ನಾನು ನೋಡಲು ಮಾಡರ್ನ್ ಹುಡುಗಿ ಆಗಿದ್ದರೂ ಕೂಡ ಸಖತ್ ಹಳೆ ಕಾಲದ ಅಜ್ಜಿ ರೀತಿಯಲ್ಲಿ ಯೋಚನೆ ಮಾಡುತ್ತೀನಿ.
ಹೀಗಾಗಿ ಡೇಟಿಂಗ್ ಆಪ್‌ಗಳ ಬಗ್ಗೆ ನನಗೆ ಅರ್ಥವೇ ಆಗುವುದಿಲ್ಲ ಅದರಲ್ಲೂ ಟಿಂಡರ್, ಬಂಬಲ್ ತಲೆಗೆ ಹೋಗುವುದಿಲ್ಲ. ಆನ್‌ಲೈನ್‌ನಲ್ಲಿ ವ್ಯಕ್ತಿನ ಭೇಟಿ ಮಾಡಿ ಲವ್ ಹೇಗೆ ಅವರ ಮೇಲೆ ಲವ್ ಆಗುತ್ತದೆ ಎಂದು ನನಗೆ ಅರ್ಥ ಆಗುವುದಿಲ್ಲ. ನಾನು ವ್ಯಕ್ತಿ ವ್ಯಕ್ತಿ ಭೇಟಿ ಮಾಡಿದಾಗ ಮಾತನಾಡಿ ಇಷ್ಟ ಪಡುವ ವ್ಯಕ್ತಿ. ನನಗೆ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಮದುವೆ ಬಗ್ಗೆ ಪ್ರಶ್ನೆಗಳು ಬರುತ್ತದೆ ಆದರೆ ತಮಾಷೆಯಗಿ ಓದಲು ಅಷ್ಟೇ ಚಂದ. ವೈಯಕ್ತಿಕವಾಗಿ ಮೆಸೇಜ್ ಮಾಡಿದಾಗ ಚೆನ್ನಾಗಿ ಮೆಸೇಜ್ ಮಾಡ್ತಾರೆ ಆದರೆ ಕಾಮೆಂಟ್ ಮಾಡಿದಾಗ ನೆನೆಗಟಿವ್ ಹಾಕ್ತಾರೆ ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಚೈತ್ರಾ ಮಾತನಾಡಿದ್ದಾರೆ.
ಟ್ರೋಲ್ ಮಾಡುವವರು ಯಾವತ್ತೂ ಫೇಮಸ್ ಆಗಲ್ಲ ಟ್ರೋಲ್ ಆಗುವವರು ಬೇಗ ಫೇಮಸ್ ಆಗುತ್ತಾರೆ. ನೀನು ಎಲ್ಲೋ 5 ಸಾವಿರ-20 ಸಾವಿರ ರೂಪಾಯಿ ಸಂಬಳ ತೆಗೆದುಕೊಂಡು ಬೇರೆ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡ್ಕೊಂಡು ನೀವು ಎಷ್ಟು ಫೇಮಸ್ ಮಾಡ್ತಿದ್ದೀರಾ ಗೊತ್ತಾ?ಇಲ್ಲಿ ಯೋಚನೆ ಮಾಡಿ ಫ್ರೀ ಪ್ರಚಾರ ಪಡೆದುಕೊಂಡು ಲಕ್ಷಗಟ್ಟಲೆ ದುಡಿಯುತ್ತಿದ್ದಾರೆ. ಯಾರೋ ಕಾಮೆಂಟ್ ಮಾಡಿರುವುದಕ್ಕೆ ನಾನು ಪ್ರತಿಕ್ರಿಯೆ ಕೊಟ್ಟುಬಿಟ್ಟರೆ ಅವನಿಗೆ ಫ್ರೀ ಪಬ್ಲಿಸಿಟಿ ಸಿಗುತ್ತದೆ.
ನನ್ನ ಫೋಟೋ ಬಂದು ಕಾಮೆಂಟ್ ಮಾಡುವವರು ಏನೋ ಶಾಸ್ತ್ರ ಸಂಪ್ರದಾಯ ಸಂಸ್ಕೃತಿ ಅಂತ ಮಾತನಾಡುತ್ತಿದ್ದಾರೆ ಅವರು ಮಾತು ಕೇಳೋಣ ಅಂತ ಪ್ರೊಪೈಲ್ ನೋಡಿಬಿಟ್ಟರೆ ಅಷ್ಟೇ. ಜನರು ಬಂದು ಕಾಮೆಂಟ್ ಮಾಡುವುದು ಒಂದು ಟ್ರೋಲ್ ಮಾಡುವ ರೀತಿ ಒಂದು.ಫೋಟೋ ಇನ್‌ಸೈಟ್ ನೋಡಿದರೆ ಅವರು ಮಾಡಿರುವ ಕೆಲಸ ಗಮನಕ್ಕೆ ಬರುತ್ತದೆ. ನಾನು ಆ ಫೋಟೋ ಹಾಕಿದಾಗ ಕೇವಲ 12 ಸಾವಿರ ಫಾಲೋವರ್ಸ್ ಇದ್ರು ಆದರೆ 3 ಮಿಲಿಯನ್ ಜನರು ಅಕೌಂಟ್ ಹುಡುಗಿ ಆ ಫೋಟೋ ನೋಡಿದ್ದಾರೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.