ಬಿಗ್ ಬಾಸ್ ಮನೆಯಲ್ಲಿ ತನಗೆ ತಾನೇ ಪೂಜೆ ಮಾಡಿಕೊಂಡ ಚೈತ್ರಾ ಕುಂದಾಪುರ, ಅಸಲಿ ಕಾರಣ ಬಯಲು

 | 
ಾ
 ಬಿಜೆಪಿ, ಹಿಂದೂ ಪರ ಫೈರ್ ಬ್ರ್ಯಾಂಡ್ ಭಾಷಣಕಾರ್ತಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಆಗಾಗ ಧ್ಯಾನ, ಪೂಜೆ ಮಾಡುವ ಚೈತ್ರಾ ಕುಂದಾಪುರ ಬುಧವಾರದ ಸಂಚಿಕೆಯಲ್ಲಿ ಎಲ್ಲರ ಕಣ್ಣರಳಿಸಿದ್ದಾರೆ.ಬಿಗ್ ಬಾಸ್’ ಮನೆಯಲ್ಲಿರುವ ದೇವಿಯ ಪಕ್ಕದಲ್ಲಿ ನಿಂತು, ಕನ್ನಡಿ ನೋಡಿಕೊಂಡು, ಗಂಟೆ ಬಾರಿಸುತ್ತಾ, ತಮಗೆ ತಾವೇ ಊದುಬತ್ತಿ ಬೆಳಗಿಕೊಂಡು ಪೂಜೆ ಮಾಡಿಕೊಂಡಿದ್ದಾರೆ ಚೈತ್ರಾ ಕುಂದಾಪುರ. ಇದನ್ನ ಕಂಡ ಶಿಶಿರ್‌ ಶಾಸ್ತ್ರಿ ಅಕ್ಷರಶಃ ನಿಬ್ಬೆರಗಾಗಿದ್ದಾರೆ.
ಶಿಶಿರ್ ಶಾಸ್ತ್ರಿ ಮಾತ್ರವಲ್ಲ.. ಚೈತ್ರಾ ಕುಂದಾಪುರ ತಮಗೆ ತಾವೇ ಪೂಜೆ ಮಾಡಿಕೊಂಡಿದ್ದನ್ನ ಕಂಡು ನೆಟ್ಟಿಗರಿಗೂ ಆಶ್ಚರ್ಯವಾಗಿದೆ. ಇದು ಯಾವ ರೀತಿಯ ಪೂಜೆ? ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಚೈತ್ರಾ ಕುಂದಾಪುರ ಸ್ಫೂರ್ತಿ ಪಡೆದ್ರಾ?, ಐ ಆಮ್ ಗಾಡ್‌, ಗಾಡ್ ಈಸ್‌ ಗ್ರೇಟ್‌, ಲೇಡಿ ಉಪೇಂದ್ರ ಅಂತೆಲ್ಲಾ ನೆಟ್ಟಿಗರು ಚೈತ್ರಾ ಕುಂದಾಪುರ ಅವರನ್ನ ಟ್ರೋಲ್ ಮಾಡುತ್ತಿದ್ದಾರೆ.
ಚೈತ್ರಾ ಕುಂದಾಪುರ ದೈವ ಭಕ್ತೆ. ಅದರಲ್ಲೂ ದೇವಿ ಮೇಲೆ ಚೈತ್ರಾ ಕುಂದಾಪುರಗೆ ಅತೀವ ನಂಬಿಕೆ ಇದೆ. ಅಸಲಿಗೆ, ‘ಬಿಗ್ ಬಾಸ್‌’ ಕಡೆಯಿಂದ ತಮಗೆ ಕರೆ ಬಂದಾಗ.. ತಮ್ಮ ಮನೆಯಲ್ಲಿನ ದೇವಿ ಮೇಲೆ ಬೆಳಕು ಬಿತ್ತಂತೆ. ಅದನ್ನ ಕಂಡು ದೇವಿಯೇ ಸೂಚನೆ ಕೊಟ್ಟಿದ್ದಾಳೆ ಅಂತ್ಹೇಳಿ ‘ಬಿಗ್ ಬಾಸ್‌’ ಕಾರ್ಯಕ್ರಮಕ್ಕೆ ಬರಲು ಚೈತ್ರಾ ಕುಂದಾಪುರ ಒಪ್ಪಿಕೊಂಡರಂತೆ.
ಇನ್ನೂ ನವರಾತ್ರಿ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಉಪವಾಸ ಮಾಡುತ್ತಿದ್ದರಂತೆ. ಆದರೆ, ಕಳೆದ ವರ್ಷ ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ಚೈತ್ರಾ ಕುಂದಾಪುರ ಜೈಲು ಸೇರಿದ್ದರು. ಆಗ, ಉಪವಾಸ ಮಾಡಲಾಗದೆ ‘ನಾನು ಎಲ್ಲವನ್ನೂ ಕಳ್ಕೊಂಡೆ. 
ನಾನು ನಿಜವಾಗಿಯೂ ತಪ್ಪು ಮಾಡಿಲ್ಲ ಅಂತ ನಿನಗೆ ಗೊತ್ತಿದ್ದರೆ, ಮತ್ತೆ ನನಗೆ ವೇದಿಕೆ ಬೇಕು’ ಅಂತ ದೇವಿ ಬಳಿ ಚೈತ್ರಾ ಕುಂದಾಪುರ ಪ್ರಾರ್ಥಿಸಿದ್ದರಂತೆ. ಅದರಂತೆ ಹೆಣ್ಣು ದೇವಿಯ ಸಮಾನ ಹಾಗಾಗಿ ಈ ಪೂಜೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.