ಬಿಗ್ ಬಾಸ್ ರಜತ್ ಸಹಾಯ ನೆನೆದು ಕಾಲಿಗೆ ಬಿದ್ದು ಗಿಫ್ಟ್ ಕೊಟ್ಟ ಚೈತ್ರ ಕುಂದಾಪುರ

 | 
ಹಗ೮
ಬಿಗ್‌ ಬಾಸ್‌ ಚೈತ್ರಾ ಕುಂದಾಪುರ ಅವರು 12 ವರ್ಷಗಳ ಕಾಲ ಪ್ರೀತಿಸಿದ ಹುಡುಗನನ್ನು, ಕುಟುಂಬದ ಸಾಕ್ಷಿಯಾಗಿ ಮದುವೆಯಾಗಿದ್ದಾರೆ. ಬಿಗ್‌ ಬಾಸ್‌ ಮನೆಯಲ್ಲಿದ್ದಾಗ ಪ್ರೀತಿ ಗುಟ್ಟು ಬಿಟ್ಟುಕೊಟ್ಟರೂ ಕೂಡ ಅವರು ಮದುವೆ ದಿನದವರೆಗೂ ಮೌನವಾಗಿಯೇ ಇದ್ದರು. ಈಗ ಅವರು ಎಲ್ಲರ ಸಮ್ಮುಖದಲ್ಲಿ ತಾಳಿ ಕಟ್ಟಿಸಿಕೊಂಡಿದ್ದಾರೆ.
ಮದುವೆ ಟೈಮ್‌ನಲ್ಲಿ ಬಹುತೇಕ ಹೆಣ್ಣು ಮಕ್ಕಳು ಭಾವುಕರಾಗುತ್ತಾರೆ. ಇನ್ನು ತಾಳಿ ಕಟ್ಟುವ ಸಮಯದಲ್ಲಿ ಮದುವೆ ಆಗ್ತಿದ್ದೀನಿ ಎನ್ನುವ ಖುಷಿ, ಬೇರೆಯವ್ರ ಮನೆಗೆ ಹೋಗ್ತಿದ್ದೀನಿ ಅಂತ ದುಃಖ ಎರಡೂ ಒಮ್ಮೆಲೆ ಬರುವುದು ಸಹಜ. ಚೈತ್ರಾ ಕೂಡ ಸಿಕ್ಕಾಪಟ್ಟೆ ಭಾವುಕರಾಗಿದ್ದು, ಪ್ರೀತಿಸಿದ ಹುಡುಗನತ್ತ ನಾವು ಗೆದ್ದಿದ್ದೇವೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಅಂದಹಾಗೆ ಬಿಗ್‌ ಬಾಸ್‌ ಮನೆಯಲ್ಲಿ ಅಣ್ಣ-ತಂಗಿ ಎಂದು ಬಾಸ್‌ ಎಂದು ಸಿಕ್ಕಾಪಟ್ಟೆ ಜಗಳ ಆಡಿದ್ದ ರಜತ್‌, ಚೈತ್ರಾ ಕುಂದಾಪುರ ಜುಗಲ್‌ಬಂಧಿ ನೋಡೋದೆ ಚೆಂದ ಆಗಿತ್ತು. ಈಗ ಅವರು ಚೈತ್ರಾ ಮದುವೆಗೆ ಬಂದು ಅಣ್ಣನ ಶಾಸ್ತ್ರವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ತಂಗಿಗೆ ಉಡುಗೊರೆ ಕೂಡ ನೀಡಿದ್ದಾರೆ. ನಿಜಕ್ಕೂ ಇದು ಬಹಳ ಅಪರೂಪದ ಗಳಿಗೆ ಎನ್ನಬಹುದು.ಅಂದಹಾಗೆ ಕುಂದಾಪುರದಲ್ಲಿ ಮದುವೆ ಆಗಿದೆ. ಸಾಂಪ್ರದಾಯಿಕವಾಗಿ ಇವರಿಬ್ಬರು ಪ್ರಿ ವೆಡ್ಡಿಂಗ್‌ ವಿಡಿಯೋ ಮಾಡಿಸಿಕೊಂಡಿದ್ದಾರೆ. ಶ್ರೀಕಾಂತ್‌ ಕಶ್ಯಪ್‌ ಅವರು ದೈವಭಕ್ತರು. ಇನ್ನು ಸಾಕಷ್ಟು ಹೋಮ-ಹವನಗಳಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
ಈ ಹಿಂದೆ ವಿಡಿಯೋ ಎಡಿಟರ್‌ ಆಗಿದ್ದ ಅವರು ಹವ್ಯಾಸಿ ಖಗೋಳಶಾಸ್ತ್ರಜ್ಞ ಎಂದು ಕೂಡ ಹೇಳಲಾಗಿದೆ. ಶ್ರೀಕಾಂತ್‌ ಬಗ್ಗೆ ಚೈತ್ರಾ ಅವರೇ ಇನ್ನಷ್ಟು ಮಾಹಿತಿ ನೀಡಬೇಕಿದೆ. ಕಿಚ್ಚ ಸುದೀಪ್‌ ಅವರು ಚೈತ್ರಾರ ಗುಣ ನೋಡಿ ದೊಡ್ಮನೆಯ ಫಿನಾಲೆಯಲ್ಲಿ ಯಾವಾಗಲೂ ದೇವರು ಅಂತ ಹೇಳ್ತೀರಾ. ದೈವಭಕ್ತರನ್ನು ಮದುವೆ ಆಗಿ ಎಂದು ಹೇಳಿದ್ದರು. ಚೈತ್ರಾ ಲವ್‌ ಬಗ್ಗೆ ಗೊತ್ತಿದ್ದು ಈ ಮಾತು ಹೇಳಿದ್ರೋ ಅಥವಾ ಗೊತ್ತಿಲ್ಲದೆ ಹೇಳಿದ್ರೋ ಗೊತ್ತಿಲ್ಲ. ಆದರೀಗ ಇದು ನಿಜವಾಗಿದೆ
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.