ಅತಿ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಚೈತ್ರ ಕುಂದಾಪುರ, ಹುಡುಗ ಮಾತ್ರ ಬೆಣ್ಣೆ

 | 
Js
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ನಂತರ ಮದುವೆಗೆ ಸಜ್ಜಾಗಿದ್ದಾರೆ. ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ವರನ ಫೋಟೋವನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಬಿಗ್ ಬಾಸ್ ಮತ್ತು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋಗಳಲ್ಲಿ ಚೈತ್ರಾ ಅವರ ಜನಪ್ರಿಯತೆ ಹೆಚ್ಚಾಗಿದೆ.
ಅಷ್ಟಕ್ಕೂ ಚೈತ್ರಾ ಕುಂದಾಪುರ ಅವರು ‘ಬಿಗ್ ಬಾಸ್’ ಮನೆಗೆ ಹೋದಾಗಲೇ ಮದುವೆ ಬಗ್ಗೆ ಮೌನ ಮುರಿದಿದ್ದರು. ‘ನನಗೆ ಈಗಾಗಲೇ ಹುಡುಗ ಫಿಕ್ಸ್ ಆಗಿದ್ದಾನೆ. ಬಿಗ್ ಬಾಸ್​ನಿಂದ ಹೋದ ತಕ್ಷಣ ಮದುವೆ’ ಎಂದಿದ್ದರು. ಬಿಗ್ ಬಾಸ್ ಮುಗಿದು ಐದು ತಿಂಗಳ ಬಳಿಕ ಚೈತ್ರಾ ಕುಂದಾಪುರ ಅವರು ವಿವಾಹಕ್ಕೆ ಸಿದ್ಧರಾಗಿದ್ದಾರೆ. ಅವರು ಕೈಗೆ ಮೆಹಂದಿ ಹಾಕಿಕೊಂಡಿದ್ದಾರೆ. ಶೀಘ್ರವೇ ಅವರ ವಿವಾಹ ಕಾರ್ಯ ನೆರವೇರುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಪೂರ್ಣಗೊಂಡ ಬಳಿಕವೇ ಚೈತ್ರಾ ವಿವಾಹ ಆಗುತ್ತಿದ್ದರೇನೋ. ಆದರೆ, ಆ ಸಮಯದಲ್ಲಿ ಅವರಿಗೆ ಬೇರೆ ಆಫರ್ ಬತು. ಅದುವೇ ‘ಬಾಯ್ಸ್ vs ಗರ್ಲ್ಸ್’. ಈ ರಿಯಾಲಿಟಿ ಶೋನಲ್ಲಿ ಚೈತ್ರಾ ಮಿಂಚಿದರು. ಇಲ್ಲಿಗೆ ಹೋದ ಬಳಿಕ ಅವರು ಗ್ಲಾಮರ್ ಗೊಂಬೆ ಆಗಿ ಬಿಟ್ಟರು. ಈಗ ಚೈತ್ರಾ ಕುಂದಾಪುರ ಅವರ ವಿವಾಹ ಆಗುವ ದಿನ ಸಮೀಪಿಸಿದೆ.
ಚೈತ್ರಾ ತಾವು ಯಾರನ್ನು ವಿವಾಹ ಆಗುತ್ತಿದ್ದೇನೆ ಎಂಬ ವಿಚಾರವನ್ನು ಈವರೆಗೆ ರಿವೀಲ್ ಮಾಡಿಲ್ಲ. ಅದನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಈಗ ಅವರ ಮದುವೆ ಕಾರ್ಯ ನಡೆದರೆ ಆ ಬಳಿಕ ಹಂಚಿಕೊಳ್ಳೋ ಫೋಟೋದಿಂದ ಪತಿಯ ವಿಚಾರ ರಿವೀಲ್ ಆಗಲಿದೆ. ಚೈತ್ರಾ ಮದುವೆಗಾಗಿ ಫ್ಯಾನ್ಸ್ ಕಾದಿದ್ದಾರೆ.ಚೈತ್ರಾ ಕುಂದಾಪುರ ಅವರು ವಿವಾಹಕ್ಕಾಗಿ ಮೆಹಂದಿ ಶಾಸ್ತ್ರ ಮಾಡಿಕೊಂಡಿದ್ದಾರೆ. ಕೈ ತುಂಬ ಮೆಹಂದಿ ಹಾಕಿಕೊಂಡು, ಮದುವೆಗೆ ರೆಡಿ ಆಗಿದ್ದಾರೆ. ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಹುಡುಗನ ಮುಖ ರಿವೀಲ್ ಮಾಡಲು ಕೋರುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub