ಮದುವೆ ಮೊದಲ‌ ರಾತ್ರಿ ‌ಮುಗಿಸಿ ಹೊರಗಡೆ ಬಂದ ಚೈತ್ರ ವಾಸುದೇವನ್

 | 
Nj
ನಿರೂಪಕಿ ಚೈತ್ರಾ ವಾಸುದೇವನ್ ಅವರು ಉದ್ಯಮಿ ಜಗದೀಪ್.ಎಲ್ ಎಂಬುವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡು ಕಡೆಯ ಕುಟುಂಬಸ್ಥರು ಸೇರಿದಂತೆ, ಆಪ್ತರು, ಸ್ನೇಹಿತರು ಸಮ್ಮುಖದಲ್ಲಿ ಮದುವೆ ಅದ್ಧೂರಿಯಾಗಿ ನಡೆದಿದೆ.ಆ್ಯಂಕರ್ ಚೈತ್ರಾ ವಾಸುದೇವನ್ ಅವರಿಗೆ ಇದು 2ನೇ ಮದುಗೆ ಆಗಿದೆ. ನಿರೂಪಕಿ ಮತ್ತು ಈವೆಂಟ್ ಆರ್ಗನೈಸರ್ ಆಗಿರುವ ಚೈತ್ರಾ ವಾಸುದೇವನ್, ಹಲವು ಸೆಲೆಬ್ರಿಟಿಗಳ ಮದುವೆ ಹಾಗೂ ಇತರ ಕಾರ್ಯಕ್ರಮಗಳನ್ನು ಕೂಡ ಅದ್ಧೂರಿಯಾಗಿ ಆಯೋಜಿಸಿದ್ರು. ಚಿತ್ರರಂಗದಲ್ಲೂ ಭಾರೀ ಜನಪ್ರಿಯತೆ ಪಡೆದಿದ್ದಾರೆ
ಮದುವೆ ಬಳಿಕ ಮಾತಾಡಿದ ನಟಿ ಚೈತ್ರಾ ವಾಸುದೇವನ್​ ಅವರು ನಮಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ರು. ಸೀರೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚೈತ್ರಾ,  ಮದುವೆಯಲ್ಲಿ ನಾನು ಧರಿಸಿದ ಸೀರೆಯ ಬೆಲೆ 2 ಲಕ್ಷ ರೂಪಾಯಿ ಎಂದು ಹೇಳಿದ್ದಾರೆ. ನಿರೂಪಕಿ ಆಗಿ ವೇದಿಕೆ ಮೇಲೆ ಬರುವಾಗಲೂ ನಾನು ಭಿನ್ನವಾದ ಕಾಸ್ಟ್ಯೂಮ್ ಹಾಕುತ್ತೇನೆ. ಅದನ್ನು ಜನರು ಇಷ್ಟಪಟ್ಟು ಗುರುತಿಸುತ್ತಾರೆ. ಇದು ನನಗೆ ಸ್ಪೆಷಲ್ ದಿನ. ಹಾಗಾಗಿ ಸ್ಪೆಷಲ್ ಆಗಿ ರೆಡಿ ಆಗಿದ್ದೇನೆ ಎಂದ್ರು. 
ಚೈತ್ರಾ ವಾಸುದೇವನ್ ಅವರು ಉದ್ಯಮಿ ಜಗದೀಪ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಸ್ನೇಹಿತನ ಮಗುವಿನ ಬರ್ತ್ಡೇಗಾಗಿ ಜಗದೀಪ್ ಅವರು ಚೈತ್ರಾಗೆ ಕಾಲ್ ಮಾಡಿದ್ರು. ಆ ಮೇಲೆ ಒಮ್ಮೆ ಮೀಟ್ ಆದಾಗ ಇಬ್ಬರು ಒಂದೇ ಜಿಮ್ ನಲ್ಲಿ ವರ್ಕೌಟ್ ಮಾಡೋದು ಎನ್ನುವುದು ತಿಳಿದು ಶಾಕ್ ಆಗುತ್ತಾರೆ. ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಕ್ಲೋಸ್ ಆಗ್ತಾರೆ. ಮೊದಲ ಭೇಟಿಯಲ್ಲೇ ಚೈತ್ರಾಗೆ, ಜಗದೀಪ್ ಪ್ರಪೋಸಲ್ ಮಾಡಿದ್ರಂತೆ. ಆದರೆ ತಕ್ಷಣಕ್ಕೆ ಒಪ್ಪಿಕೊಳ್ಳದ ಚೈತ್ರಾ ಸಮಯ ತೆಗೆದುಕೊಂಡಿದ್ದರು. 
ಚೈತ್ರಾ ಸಮಯ ತೆಗೆದುಕೊಂಡಿದ್ದನ್ನ ಯೋಚಿಸದೇ ಜಗದೀಪ್, ಚೈತ್ರಾ ಅವರ ಅಪ್ಪ ಅಮ್ಮ ಬಳಿ ಈ ಕುರಿತು ಮಾತಾಡಿದ್ದರು. ಚೈತ್ರಾ ಗ್ರೀನ್ ಸಿಗ್ನಲ್ ಕೊಡ್ತಿದ್ದಂತೆ ಜಗದೀಪ್ ಅದ್ಧೂರಿಯಾಗಿ ಹಸೆಮಣೆ ಏರಿದ್ರು.ಸುಮಾರು 2 ಲಕ್ಷ ರೂಪಾಯಿ ಬೆಲೆ ಬಾಳುವ ಮದುವೆಯ ಸೀರೆಯಲ್ಲಿ ಚೈತ್ರಾ ವಾಸುದೇವನ್​ ಅವರು ಮಿರ ಮಿರ ಮಿಂಚಿದ್ದಾರೆ. ಇನ್ನೂ ಚೈತ್ರಾ ಅವರ ಅದ್ಧೂರಿ ಮದುವೆಗೆ ಕಿರುತೆರೆ, ಹಿರಿತೆರೆಯ ಗಣ್ಯರು ಬಂದು ನೂತನ ವಧು-ವರರನ್ನು ಆಶೀರ್ವದಿಸಿದ್ದಾರೆ. ಅವರ ತಾಯಿಗೆ ಕಣ್ಣೀರು ತುಂಬಿದೆ.
ಸದ್ಯ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೈತ್ರಾ ವಾಸುದೇವನ್​ ಮದುವೆಗೆ ಲವ್ಲಿ ಸ್ಟಾರ್ ಪ್ರೇಮ್ ದಂಪತಿ, ನಟಿ ಅಮೂಲ್ಯ ದಂಪತಿ, ನಿರಂಜನ್ ದೇಶಪಾಂಡೆ ದಂಪತಿ, ಸೋನಲ್ ಮೊಂಥೆರೋ, ಶ್ವೇತಾ ಚೆಂಗಪ್ಪ, ಮಾಳವಿಕಾ ಅವಿನಾಶ್, ನಟ ಶ್ರೀಮುರಳಿ, ಧ್ರುವ ಸರ್ಜಾ, ಕಿರುತೆರೆ ನಟಿ ಕಾವ್ಯ ಗೌಡ ದಂಪತಿ, ಅನು ಪ್ರಭಾಕರ್, ನಟಿ ಕಾರುಣ್ಯ ರಾಮ್ ಹಾಗೂ ಅವರ ತಾಯಿ ಸೇರಿದಂತೆ ಸಾಕಷ್ಟು ನಟ ಹಾಗೂ ನಟಿಯರು ಕೂಡ ಆಗಮಿಸಿ ನೂತನ ದಂಪತಿಗೆ ವಿಶ್​ ಮಾಡಿದ್ದಾರೆ.