ದುಡ್ಡಿನ ಸುರಿಮಳೆಯಲ್ಲಿ ಆಟವಾಡುತ್ತಿರುವ ಚಂದನ್ ಹಾಗೂ ಕವಿತಾ ಗೌಡ; ಮತ್ತೊಂದು ಹೋಟೆಲ್ ಓಪನ್
ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಮತ್ತು ಕವಿತಾ ತಮ್ಮ ಹೋಟೆಲ್ ಒಂದನ್ನು ಶುರು ಮಾಡಿದ್ದಾರೆ. ಮೈಸೂರು ರೋಡ್ ಮಂಡಿಪೇಟೆ ಪಲಾವ್ ಎಂಬ ಹೆಸರನ್ನು ಇಟ್ಟಿದ್ದು ಹೋಟೆಲ್ ಫೋಟೊವನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಜೋಡಿ ಸಾಕಷ್ಟು ಮನೆಮಾತಾಗಿತ್ತು. ಸೀರಿಯಲ್, ಸಿನಿಮಾ, ನಟನೆಯಲ್ಲಿ ಬ್ಯುಸಿಯಿರುವ ಜೋಡಿ ಇದೀಗ ಹೋಟೆಲ್ ಉದ್ಯಮದತ್ತ ಮುಖ ಮಾಡಿದೆ.
ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು. ಒಬ್ಬರನೊಬ್ಬರು ಪ್ರೀತಿಸಿ, ಹಸೆಮಣೆ ಏರಿದ್ದ ಜೋಡಿ ನಟನೆ ಮತ್ತು ಉದ್ಯಮ ಎರಡಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಸಾಗುತ್ತಿದ್ದಾರೆ. ಈ ಹಿಂದೆ ಅಷ್ಟೇ ಜೋಡಿ ಮನೆಯ ಗೃಹ ಪ್ರವೇಶದ ಫೋಟೊಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿತ್ತು.
ಕವಿತಾ ಗೌಡ ಕೆಲ ವರ್ಷಗಳ ಕಾಲ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿ, ನಂತರ ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಿದ್ದರೂ ಕೂಡ ಚಂದನ್ ಹಾಗೂ ಕವಿತಾ ಗೌಡ ನಡುವೆ ಇದ್ದ ಸ್ನೇಹ ದೂರ ಆಗದೆ ಅದು ಇನ್ನಷ್ಟು ಹತ್ತಿರ ಆಗಿ ಪ್ರೀತಿಯಾಗಿ ಬೆಳೆಯಿತು. ಕುಟುಂಬದವರನ್ನು ಒಪ್ಪಿಸಿ ಚಂದನ್ ಹಾಗೂ ಕವಿತಾ ಮದುವೆಯಾಗಿದ್ದಾರೆ.
ಬೆಳಗ್ಗೆ 4 ಗಂಟೆಗೆ ನಿಮಗೆ ತಿನ್ನಲು ನಿಮಗೆ ಬಿರ್ಯಾನಿ ರೆಡಿ ಇರುತ್ತದೆ. ನೀವು ರಾತ್ರಿ ಇಡೀ ಪಾರ್ಟಿ ಮಾಡಿ ಬಂದು ಇಲ್ಲಿ ಫುಡ್ ಎಂಜಾಯ್ ಮಾಡಬಹುದು. ರಾತ್ರಿ 12 ಗಂಟೆಯಿಂದಲೇ ಇಲ್ಲಿ ಅಡುಗೆ ಶುರುವಾಗುತ್ತದೆ. ನಾನು ಇಲ್ಲಿಗೆ ಬೆಳಗ್ಗೆ 3 ಗಂಟೆಗೆ ಬಂದು ನಿಮಗಾಗಿ ಕಾಯುತ್ತಿರುತ್ತೇನೆ ಎಂದು ಚಂದನ್ ತಮ್ಮ ರೆಸ್ಟೋರೆಂಟ್ ಬಗ್ಗೆ ಹೇಳಿಕೊಂಡಿದ್ದಾರೆ. ಇವರದು ಒಟ್ಟೂ 3 ಹೊಟೇಲ್ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.