ಬಾಲಿವುಡ್ ಹಾಡಿಗೆ ಸಕ್ಕತ್ತಾಗಿ ಸ್ಟೆಪ್ ಹಾಕಿದ ಚಂದನ್ ಶೆಟ್ಟಿ, ಕಳೆದುಹೋದ ನಿವೇದಿತಾ ಗೌಡ

 | 
Jd
 ಸ್ಯಾಂಡಲ್​ವುಡ್​ ಗಾಯಕ, ನಟ ಚಂದನ್​ ಶೆಟ್ಟಿ ಕಳೆದ ತಿಂಗಳಿನಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅದರಲ್ಲೂ ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದ ಬಳಿಕವಂತೂ ಅಭಿಮಾನಿಗಳು ಸಾಕಷ್ಟು ಮಟ್ಟದಲ್ಲಿ ಕೇರ್ ಮಾಡುತ್ತಿದ್ದಾರೆ. ಹೌದು, ಕನ್ನಡದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಬದುಕು ಅಂತ್ಯ ಕಂಡಿದೆ.
ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಸ್ಟಾರ್ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದರು. ಡಿವೋರ್ಸ್‌ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಖುದ್ದು ಚಂದನ್, ನಿವೇದಿತಾ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದೂರ ದೂರ ಆಗಿದ್ದಾರೆ. ಸದ್ಯ ನಿವೇದಿತಾ ಗೌಡ ಹಾಗೂ ಚಂದನ್​ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್ ಆಗಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಚಂದನ್​ ಶೆಟ್ಟಿ ಸಖತ್​ ವೈಲೆಂಟ್ ಆಗಿದ್ದಾರೆ.
ಇದೀಗ ಟ್ರೆಂಡಿಂಗ್ ಸಾಂಗ್​​ಗೆ ಚಂದನ್ ಶೆಟ್ಟಿ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ. ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಹುಸನ್ ತೆರಾ ತೌಬಾ ತೌಬಾ ಹಾಡಿಗೆ ಭರ್ಜರಿ ರೀಲ್ಸ್ ಮಾಡಿದ್ದಾರೆ. ಇದೇ ವಿಡಿಯೋ ನೋಡಿದ ಫ್ಯಾನ್ಸ್, ಸುಂದರ ಸಮಯ ನಿಮ್ಮೊಂದಿಗೆ ಸದಾ ಇರಲಿ, ಚಂದನ್​ ಅಂದ್ರೆ ಹೀಗೆ ಇರಬೇಕು ಖುಷಿ ಖುಷಿಯಾಗಿ. ಇನ್ನೊಬ್ಬ ಅಭಿಮಾನಿ ನಮ್ಮ ಅಣ್ಣನ ಹೊಸ ಅಧ್ಯಾ ಶುರು ಕಣ್ರೋ ಅಂತ ಕಾಮೆಂಟ್ಸ್​ ಹಾಕಿದ್ದಾನೆ.
ಚಂದನ್ ಶೆಟ್ಟಿ ಸದ್ಯ ವಿದ್ಯಾರ್ಥಿ ವಿದ್ಯಾರ್ಥಿನಿಯರೆ ಎಂಬ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಸಿನಿಮಾ ತಂಡದ ಜೊತೆ ಮಾಧ್ಯಮಗಳ ಮುಂದೆ ಬಂದಿದ್ದ ಚಂದನ್, ಕನ್ನಡ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದಿದ್ದಾರೆ. ಬೇರೆ ಭಾಷೆ ಸಿನಿಮಾ ನೋಡಲು ಜನರಿಗೆ ಹಣವಿರುತ್ತೆ. ಕನ್ನಡ ಸಿನಿಮಾ ನೋಡಲು ಹಣವಿರೋದಿಲ್ಲ ಎಂದು ಚಂದನ್ ಅಭಿಮಾನಿಯೊಬ್ಬರ ಪ್ರಶ್ನೆಗೆ ತಿರುಗೇಟು ನೀಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.