ದಿಡೀರ್ ಲೈವ್ ಬಂದು ಕಣ್ಣೀರಿಟ್ಟ ಚಂದನ್, ಡಿ,ವೋರ್ಸ್ ಗೆ ಕಾರಣ ಯಾರು ಗೊತ್ತಾ

 | 
Gui

ಸಂಗೀತ ನಿರ್ದೇಶಕ ಹಾಗೂ ರಾಪರ್‌ ಚಂದನ್‌ ಶೆಟ್ಟಿ  ಹಾಗೂ ನಿವೇದಿತಾ ಗೌಡ ತಮ್ಮ 4 ವರ್ಷಗಳ ದಾಂಪತ್ಯವನ್ನು ಕೊನೆ ಮಾಡಿದ್ದಾರೆ. ಇವರಿಗೆ ಒಂದೇ ದಿನದಲ್ಲಿ ಇಂದು ವಿಚ್ಛೇದನ ದೊರೆತಿದೆ. ಫ್ಯಾಮಿಲಿ ಕೋರ್ಟ್‌ನಲ್ಲಿ  ಗುರುವಾರ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಇವರಿಗೆ ಕೋರ್ಟ್‌ ಇಂದು ವಿಚ್ಛೇದನ ಮಂಜೂರು ಮಾಡಿದೆ. 

ಇದರ ಬೆನ್ನಲ್ಲಿಯೇ ಇವರು ವಿಚ್ಛೇದನವಾಗಿದ್ದು ಹೌದೋ ಇಲ್ಲವೋ ಎನ್ನುವ ಗೊಂದಲಗಳಿದ್ದವು. ಒಂದೇ ದಿನದಲ್ಲಿ ವಿಚ್ಛೇದನ ಹೇಗೆ ಸಾಧ್ಯ ಎನ್ನುವ ಪ್ರಶ್ನೆಗಳ ನಡುವೆ ಮಾಜಿ ದಂಪತಿಗಳು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಇದನ್ನು ಖಚಿತಪಡಿಸಿದ್ದಾರೆ. ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಇಬ್ಬರೂ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ತಮ್ಮ ನಾಲ್ಕು ವರ್ಷದ ದಾಂಪತ್ಯ ಪರಸ್ಪರ ಒಪ್ಪಿಗೆಯ ಮೇರೆಗೆ ಅಂತ್ಯವಾಗಿದೆ.

 ಹೌದು, ಚಂದನ್ ಶೆಟ್ಟಿ ಅವರಿಗಿಂತ ಸಾಮಾಜಿಕ ಜಾಲತಾಣದಲ್ಲಿ ತುಸು ಹೆಚ್ಚೇ ಸಕ್ರಿಯವಾಗಿರುವ ನಿವೇದಿತಾ, ಕಳೆದ ಕೆಲ ದಿನಗಳಿಂದ ಒಂದಾದ ಮೇಲೊಂದು ರೀಲ್ಸ್‌ಗಳನ್ನ ಹಂಚಿಕೊಳ್ಳುತ್ತಾನೇ ಬರ್ತಾ ಇದ್ದರು. ಹೀಗೆ ನಿವೇದಿತಾ ಗೌಡ ರೀಲ್ಸ್ ಮಾಡಿದಾಗೆಲ್ಲ, ಅನೇಕರು ಇವರ ಬಟ್ಟೆಯ ಬಗ್ಗೆ ಅಪಸ್ವರ ತೆಗೆಯುತ್ತಿದ್ದರು. ತುಂಡುಡುಗೆ ಧರಿಸಿ ಹೀಗೆಲ್ಲ ರೀಲ್ಸ್ ಮಾಡಬೇಡಿ ಎಂಬ ಮನವಿಯನ್ನೂ ಮಾಡಿಕೊಳ್ಳುತ್ತಿದ್ದರು.

ಈದೀಗ ಲೈವ್ ಬಂದಿರುವ ಚಂದನ್ ಶೆಟ್ಟಿ ನಮ್ಮಿಬ್ಬರ ನಿರ್ಣಯವನ್ನು ಗೌರವಿಸಿ . ಕೆಲವೊಮ್ಮೆ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿದಮೇಲೆ ಅದನ್ನು ಜೀರ್ಣಿಸಿಕೊಳ್ಳಬೇಕು. ಅದಕ್ಕಾದರೂ ನನಗೆ ನಿಮ್ಮ ಬೆಂಬಲ ಬೇಕು. ಎಲ್ಲವೂ ಸರಿ ಅಗುತ್ತದೆ ಎಂಬ ನಂಬಿಕೆ ಇತ್ತು. ಇದೀಗ ಎಲ್ಲವೂ ಚೂರಾಗಿ ಹೋಗಿದೆ. ಒಂದಿಷ್ಟೂ ಸೂಚನೆ ಇಲ್ಲದೆ ಎಲ್ಲವೂ ನಡೆದಿದೆ. ನನಗೆ ನಿಮ್ಮ ಬೆಂಬಲ ಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.