ಹನಿಮೂನ್ ಮುಗಿಸಿ ಬೆಡ್ ರೂಮ್ ವಿಡಿಯೋ ಹಂಚಿಕೊಂಡ ಚಂದನ ಅನಂತಕೃಷ್ಣ
| Dec 20, 2024, 13:41 IST
ಇತ್ತಿಚೆಗೆ ಮದುವೆಯಾದ ಚಂದನ ಅವರು ಇದೀಗ ತನ್ನ ಗಂಡನ ಜೊತೆ ಹನಿಮೂನ್ ಗೆ ತೆರಳಿರುವ ವಿಡಿಯೋವೊಂದು ಜಾಲತಾಣದಲ್ಲಿ ಹಾಕಿದ್ದರು. ಈ ವಿಡಿಯೋದಲ್ಲಿ ತನ್ನ ರೆಸಾರ್ಟ್ ಪರಿಚಯ ಮಾಡಿದ್ದಾರೆ.
ಹನಿಮೂನ್ ಹೋದ ಜಾಗದಲ್ಲಿರುವ ಪರಿಸರ ಹಾಗೂ ಅಲ್ಲಿನ ವ್ಯವಸ್ಥೆ ಜೊತೆಗೆ ಆಹಾರದ ಬಗ್ಗೆಯೂ ವಿಡಿಯೋದಲ್ಲಿ ತೋರಿಸಿದ್ದಾರೆ. ಇನ್ನು ಪೋಷಕರು ಒಪ್ಪಿಕೊಂಡ ಹುಡುಗನನ್ನೇ ಮದುವೆಯಾದ ಚಂದನ ಅವರು ಮೂಲ ಕುಂದಾಪುರದ ಹುಡುಗಿ.
ಕನ್ನಡ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಯಾಗಿ ಕೂಡ ಭಾಗವಹಿಸಿದ್ದರು. ಚಂದನ ಹಾಗೂ ಶೈನ್ ಶೆಟ್ಟಿ ಅವರ ಒಡನಾಟ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿತ್ತು.
ಹಾಗಾಗಿ ಈ ಇಬ್ಬರ ನಡುವಿನ ಬಿಗ್ ಬಾಸ್ ಆಟವನ್ನು ವೀಕ್ಷಕರು ಎಂಜಾಯ್ ಮಾಡುತ್ತಿದ್ದರು. ಇನ್ನು ಚಂದನ ಅವರು ಬಿಗ್ ಬಾಸ್ ಬಳಿಕ ಸ್ವಲ್ಪ ಸಮಯ ಕನ್ನಡದ ಧಾರಾವಾಹಿ ಮೂಲಕ ಖ್ಯಾತಿ ಪಡೆದು ನಂತರ ಮನೆಮಂದಿ ಒಪ್ಪಿಕೊಂಡು ಹುಡುಗನ ಜೊತೆ ಮದುವೆ ಮಾಡಿಕೊಂಡಿದ್ದಾರೆ.