ಸಿನಿಮಾಗಳಲ್ಲಿ ಅವಕಾಶ ಇಲ್ಲದೇ ಗಾರೆ ಕೆಲಸಕ್ಕೆ ಮರಳಿದ ಗಿಚ್ಚಿಗಿಲಿಗಿಲಿ ಚಂದ್ರಪ್ರಭಾ, ಇಂತಹ ಸ್ಥಿತಿ ಯಾರಿಗೂ ಬೇಡ

 | 
Bs

      ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತಮ್ಮ ಹಾಸ್ಯದ ಮೂಲಕ ಗುರತಿಸಿಕೊಂಡಿರುವ ಚಂದ್ರಪ್ರಭ, ಹಲವು ರಿಯಾಲಿಟಿ ಶೋಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅವಕಾಶಗಳ ಕೊರತೆಯಿಂದಾಗಿ ಚಂದ್ರಪ್ರಭ ಮತ್ತೆ ಗಾರೆ ಕೆಲಸಕ್ಕೆ ಮರಳಿದ್ದಾರೆ.

     ಹೌದು ಚಂದ್ರಪ್ರಭ ʻಕಲರ್ಸ್‌ ಕನ್ನಡʼ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ʻಗಿಚ್ಚಿ ಗಿಲಿಗಿಲಿʼಯಲ್ಲಿ ಭಾಗವಹಿಸಿದ್ದರು. ʻಮಜಾಭಾರತʼ ರಿಯಾಲಿಟಿ ಶೋ ಮೂಲಕವೂ ಖ್ಯಾತಿ ಪಡೆದುಕೊಂಡಿದ್ದರು. 
     ಕಿರುತೆರೆಗೆ ಬರುವ ಮುನ್ನ ಚಂದ್ರಪ್ರಭ ಗಾರೆ ಕೆಲಸ ಮಾಡುತ್ತಿರದ್ದರು. ಇದೀಗ ಅವಕಾಶಗಳ ಕೊರತೆಯಿಂದಾಗಿ ಮತ್ತೆ ಗಾರೆ ಕೆಲಸಕ್ಕೆ ಅವರು ಮರಳಿದ್ದಾರೆ.ರಿಯಾಲಿಟಿ ಶೋಗಳ ಮೂಲಕ ಸಖತ್‌ ಫೇಮಸ್‌ ಆದವರು ಚಂದ್ರಪ್ರಭ. ಇತ್ತೀಚೆಗೆ ಅದ್ಧೂರಿ ಮನೆ ಕಟ್ಟಿ ಗೃಹ ಪ್ರವೇಶ ಮಾಡಿದ್ದರು. ಇದೀಗ ಅವಕಾಶಗಳಿಲ್ಲದೇ ಗಾರೆ ಕೆಲಸ ಮಾಡುತ್ತಿದ್ದಾರೆ. 
     ಈ ಬಗ್ಗೆ ಮಾತನಾಡಿ, “ಗಾರೆ ಕೆಲಸ ಮಾಡ್ತಿದ್ದು ಸಿನಿಮಾಗೆ ಬಂದಿದ್ದೆ, ಈಗ ಮತ್ತೆ ಗಾರೆ ಕೆಲಸ ಮಾಡ್ತಿದ್ದೇನೆ. ಸುಮಾರು 17 ವರ್ಷ ಆಗಿತ್ತು ಗಾರೆ ಕೆಲಸ ಮಾಡಿ. ಇದೀಗ 2 ತಿಂಗಳಿನಿಂದ ನಾನು ಮತ್ತೆ ಗಾರೆ ಕೆಲಸ ಮಾಡ್ತಿದ್ದೇನೆ” ಎಂದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಚಂದ್ರಪ್ರಭ ಹೇಳಿಕೊಂಡಿದ್ದಾರೆ.