ಉಪ್ಪಿ ತಲೆ ಖಾಲಿತಲೆ ಎಂದ ಚೇತನ್; ರಾಜ್ಯದ ಜನರನ್ನು ಮೂರ್ಖರಾಗಿ ಮಾಡುತ್ತಿದ್ದಾರೆ

ಪ್ರಜಾಕೀಯದ ಕೆಲಸಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಉಪೇಂದ್ರ ಅವರು ಕಳೆದ ಕೆಲವು ದಿನಗಳಿಂದ ಒಂದರ ಹಿಂದೆ ಒಂದರಂತೆ ವಿವಾದಕ್ಕೆ ಸಿಲುಕುತ್ತಿದ್ದಾರೆ. ಉಪೇಂದ್ರ ಅವರ ವಿರುದ್ಧ ನಟ ಚೇತನ್ ಆಕ್ರೋಶ ವ್ಯಕ್ತಪಸಿದ್ದಾರೆ. ಉಪೇಂದ್ರ ಅವರ ಹೆಸರನ್ನು ಉಲ್ಲೇಖಿಸದೆ ತಮ್ಮ ಸಿಟ್ಟು ಹೊರ ಹಾಕಿದ್ದಾರೆ ಚೇತನ್.
ಪ್ರಜಾಕೀಯದ ಮೂಲಕ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹೊರಟಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಜಾತಿ ವಿಚಾರವಾಗಿ ಕೆಲ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಉಪೇಂದ್ರ ಅವರು ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ. ಆ ವಿಡಿಯೋದಲ್ಲಿ ಜಾತಿ ಎನ್ನುವ ಪದ ಬಳಸುವುದು ತಪ್ಪು ಎಂದಿದ್ದಾರೆ. ಜಾತಿ ವಿಚಾರವಾಗಿ ಉಪೇಂದ್ರ ಅವರು ಕೊಟ್ಟಿರುವ ಪ್ರತಿಕ್ರಿಯೆ ಕುರಿತಾಗಿ ಚೇತನ್ ಸಿಟ್ಟಿಗೆದ್ದಿದ್ದಾರೆ.
ಉಪೇಂದ್ರ ಅವರ ಹೆಸರು ತೆಗೆದುಕೊಳ್ಳದೆ ಚೇತನ್ ಅವರು ಒಂದು ವಿಡಿಯೋ ಮೂಲಕ ಬುದ್ಧಿಮಾತು ಹೇಳಿದ್ದಾರೆ.ಒಬ್ಬ ಸೆಲೆಬ್ರಿಟಿಯ ವೈಚಾರಿಕತೆಯ ಕೊರತೆಯ ಮಾತುಗಳನ್ನು ಕೇಳಿ ಆಶ್ಚರ್ಯವಾಗಿದೆ. ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡಿದರೆ ಜೀವಂತವಾಗಿ ಉಳಿಯುತ್ತೆ. ಅದರ ಬಗ್ಗೆ ಮಾತನಾಡದಿದ್ದರೆ ಅದು ಹೋಗುತ್ತದೆ. ಇದು ಹೇಳಿರುವುದು ಎಷ್ಟು ಹಾಸ್ಯಾಸ್ಪದ ಎಂದಿದ್ದಾರೆ ಚೇತನ್.
ಜಾತಿ ಮೀರಿ, ಧರ್ಮ ಮೀರಿ ಪಕ್ಷ ಕಟ್ಟುವುದಾಗಿ ಹೇಳುತ್ತಿರುವ ನೀವು, ಕರ್ನಾಟಕದ ಹೋರಾಟದ ಚರಿತ್ರೆ ಒಮ್ಮೆ ಓದಿಕೊಳ್ಳಿ. ಬಸವಾದಿ ಶರಣದ ಚರಿತ್ರೆ ಓದಿ. ಇವರೆಲ್ಲ ಏನೇನು ಸಾಧನೆ ಮಾಡಿದ್ದಾರೆ ಓದಿಕೊಳ್ಳಿ. ನಿಮಗೆ ಪುಸ್ತಕ ಬೇಕೆಂದರೆ ಹೇಳಿ ನಾನೇ ನಿಮಗೆ ಕೊಡುತ್ತೇನೆ. ಹಾಗೆಯೇ ನಮ್ಮ ಸಂವಿಧಾನ ಓದಿಕೊಂಡು ನಿಜವಾದ ಬುದ್ಧಿವಂತರಾಗಿ ಎಂದು ಖಾರವಾಗಿ ನುಡಿದಿದ್ದಾರೆ ಚೇತನ್.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.