ಮುಖ್ಯಮಂತ್ರಿ ಚಂದ್ರು ಹಣೆಬರಹ ಬಿಚ್ಚಿಟ್ಟ ಸೊಸೆ
Mar 11, 2025, 19:38 IST
|

ಮುಖ್ಯಮಂತ್ರಿ ಚಂದ್ರು ಕನ್ನಡಿಗರಿಗೆ ಚಿರಪರಿಚಿತರು. ನೂರಾರು ಸಿನಿಮಾ, ಸೀರಿಯಲ್ಗಳಲ್ಲಿ ನಟಿಸಿ ಮನೆಮಾತಾದವರು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್ನಲ್ಲಿ ದೇಸಾಯಿ ಪಾತ್ರ ಮಾಡುತ್ತಿದ್ದಾರೆ. ಆದರೆ ಇವರ ಪತ್ನಿ ಪದ್ಮಾ ಚಂದ್ರು ಅವರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದೀಗ ಪದ್ಮಾ ಅವರು ತಮ್ಮ ಜೀವನದ ಹಲವು ಘಟನೆಗಳ ಬಗ್ಗೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ್ದಾರೆ. ತಮ್ಮ ಕುಟುಂಬದ ಹಲವು ವಿಷಯಗಳನ್ನು ಇಲ್ಲಿ ಅವರು ತೆರೆದಿಟ್ಟಿದ್ದಾರೆ.
ಅಂದಹಾಗೆ ಈ ದಂಪತಿಗೆ ಇಬ್ಬರು ಗಂಡು ಮಕ್ಕಳು. ಆದರೆ ಕಿರಿಯ ಪುತ್ರ ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿರುವ ಬಗ್ಗೆ ನೋವು ತೋಡಿಕೊಂಡಿದ್ದಾರೆ ಪದ್ಮಾ. ಇನ್ನು ಹಿರಿಯ ಮಗ ಸೊಸೆ ತಮಗೆ ಬೇಕಾದ ಹಾಗೆ ಇದ್ದಾರೆ. ಅದರಲ್ಲು ಸೊಸೆಗೆ ಮಾವ ಮುಖ್ಯಮಂತ್ರಿ ಚಂದ್ರು ಅನ್ನೋದೇ ಗೊತ್ತಿರಲಿಲ್ಲ ಎಂದು ನಗೆ ಬೀರಿದ್ದಾರೆ.
ತಮ್ಮ ಮಗ ಮತ್ತು ಸೊಸೆಯ ಬಗ್ಗೆ ಸಿಕ್ಕಾಪಟ್ಟೆ ನೋವು ಹಾಗೂ ಸಿಟ್ಟಿನಿಂದ ಪದ್ಮಾ ಅವರು ಮಾತನಾಡಿದ್ದಾರೆ. ಮಗ ಯಾವಳನ್ನೋ ಕಟ್ಟಿಕೊಂಡ. ಅವಳ ಜಾತಕ ನೋಡಿದಾಗ, ಅತ್ತೆಗೆ ಸಾವು ಎಂದು ಇತ್ತು. ಅಣ್ಣ-ತಮ್ಮಂದಿರು ಚೆನ್ನಾಗಿ ಇರಲ್ಲ ಎಂದು ಇತ್ತು. ಅದಕ್ಕಾಗಿಯೇ ಅವಳ ಜೊತೆ ಮದುವೆಯಾಗುವುದು ಬೇಡ ಎಂದೇ ಹೇಳಿದೆವು. ಆದರೆ ಆತ ಅದನ್ನು ಕೇಳಲೇ ಇಲ್ಲ. ನಾವು ಬೇಕೋ, ಅವಳು ಬೇಕೋ ಎಂದು ಕೇಳಿದಾಗ, ಅವಳೇ ಬೇಕು ಎಂದು ಅವಳ ಹಿಂದೆ ಹೋದ. ಅವಳ ಜಾತಕ ಚೆನ್ನಾಗಿದ್ರೆ ನಾವು ಮದುವೆ ಮಾಡ್ತಿದ್ವಿ.
ಆದರೆ ಹಾಗೆ ಇರಲಿಲ್ಲ. ಮಗನನ್ನು 33 ವರ್ಷ ಕಷ್ಟಪಟ್ಟು ಸಾಕಿದ್ವಿ. ವರ್ಷಾನುಗಟ್ಟಲೆ ನಿದ್ದೆ ಮಾಡದೇ ಸಾಕಿದ್ದೆ. ಅದ್ಯಾವುದೂ ಉಪಯೋಗಕ್ಕೆ ಬರಲೇ ಇಲ್ಲ. ಅವಳೇ ಬೇಕು ಎಂದು ನಮ್ಮನ್ನು ಬಿಟ್ಟು ಹೋಗೇ ಬಿಟ್ಟ ಎಂದು ಪದ್ಮಾ ಅವರು ನೋವು ತೋಡಿಕೊಂಡಿದ್ದಾರೆ.35ನೇ ವಯಸ್ಸಿಗೆ ಅವನಿಗೆ ಹಾರ್ಟ್ ಎಟ್ಯಾಕ್ ಆಯ್ತು. ಸ್ಟಂಟ್ ಹಾಕಿದ್ದಾರೆ. ನೋಡಿ ನಾವು ಏನು ಮಾಡುವುದು? ಬೇಡ ಅಂದ್ರೂ ಕೇಳಲಿಲ್ಲ ಎಂದಿದ್ದಾರೆ ಪದ್ಮಾ.
ಅವನಿಗೆ ಏನು ಆಗುವುದೋ ಎನ್ನುವ ಭಯದಲ್ಲಿ ನಾವು ಕಷ್ಟಪಟ್ಟು ಸಾಕಿದ್ವಿ. ಹೋಟೆಲ್ನಲ್ಲಿ ತಿಂದ್ರೆ ಕಷ್ಟ ಆಗುತ್ತೆ ಎಂದು ಮನೆಯಲ್ಲಿಯೇ ಅಡುಗೆ ಮಾಡಿ ಕೊಡ್ತಿದ್ದೆ. ಬೈಕ್ನಲ್ಲಿ ಹೋದ್ರೆ ಕಷ್ಟ ಆಗುತ್ತೆ ಎಂದು ಕಾರು ಕೊಡಿಸಿದ್ವಿ. ಆದರೂ ಅವನು ಹೀಗೆ ಮಾಡಿದ. ಪ್ರಾಣಕ್ಕೆ ಅಪಾಯ ಆದ್ರೆ ಯಾರು ಗತಿ ಎಂದು ಪ್ರಶ್ನಿಸಿದ್ದಾರೆ. ಮಗನ ಪ್ರಾಣ ಉಳಿದುಕೊಂಡಿರುವುದೇ ನನ್ನಿಂದ ಎಂದು ಜ್ಯೋಯಿಸರು ಹೇಳಿದ್ದರು.
ಆತನಿಗೆ ಹಾರ್ಟ್ ಎಟ್ಯಾಕ್ ಆದರೂ ಪ್ರಾಣಾಪಾಯದಿಂದ ಪಾರಾಗಿರುವುದಕ್ಕೆ ನಾನು ಮಾಡ್ತಿರೋ ಪೂಜೆಗಳೇ ಕಾರಣ ಎಂದಿದ್ದಾರೆ ಅವರ ಹಿರಿಯ ಸೊಸೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.