ಮಕ್ಕಳ ಕಳ್ಳಿ ಮೋಕ್ಷಿತಾ ಪೈ ಕಡೆಯಿಂದ ಸ್ಪಷ್ಟತೆ, ತಂದೆಯ ಆಸೆಯಂತೆ ಇದೇ ವರ್ಷ ಸಿಹಿಸುದ್ದಿ

 | 
ಕದದ
ಮೋಕ್ಷಿತಾ ಪೈ ಬಿಗ್‌ಬಾಸ್‌ನ ಎಲ್ಲಾ ಸ್ಪರ್ಧಿಗಳಲ್ಲಿ ಟ್ರೋಫಿಗೆ ಹತ್ತಿರವಾಗಿದ್ದ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ. ಅವರು ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ತಕ್ಷಣ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ಮಕ್ಕಳ ಕಳ್ಳಿ ಆರೋಪಕ್ಕೆ ತಿರುಗೇಟು ಕೂಡ ಕೊಟ್ಟಿದ್ದಾರೆ. ಹಾಗಾದರೆ ಮೋಕ್ಷಿತಾ ಪೈ ಹೇಳಿದ್ದೇನು?
ಬಿಗ್‌ಬಾಸ್‌ ಮನೆಯಲ್ಲಿ ಇದ್ದ ಎಲ್ಲಾ ಸ್ಪರ್ಧಿಗಳಲ್ಲಿ ಮೋಕ್ಷಿತಾ ಪೈ ತುಂಬಾ ನೆಗಿಟಿವ್ ಆಗಿ ಮಾಧ್ಯಮಗಳಲ್ಲಿ ಸುದ್ದಿ ಆಗಿದ್ದರು. ಇದು ಮೋಕ್ಷಿತಾ ಅವರ ಕುಟುಂಬಕ್ಕೂ ಕೂಡ ತುಂಬಾ ಬೇಸರವನ್ನು ಉಂಟು ಮಾಡಿತ್ತು. ಎಲ್ಲರಿಗೂ ಗೊತ್ತಿರುವಂತೆ ಕಳೆದವಾರ ಎಲಿಮಿನೇಟ್ ಆಗಿದ್ದ ಧನ್‌ರಾಜ್‌ ಅವರು ತಮಗೆ ಬಂದಿದ್ದ ಎಲ್ಲಾ ಹಣವನ್ನೂ ಕೂಡ ಪುತ್ತೂರಿನ ಆಶ್ರಮವೊಂದಕ್ಕೆ ದಾನ ಮಾಡಿದ್ದರು.
ಇದೀಗ ಮೋಕ್ಷಿತಾ ಪೈ ಕೂಡ ಧನ್‌ರಾಜ್‌ ಅವರಂತೆ ಬಿಗ್‌ಬಾಸ್‌ ಮನೆಯಿಂದ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ತಮ್ಮನ ಹೆಸರಿನಲ್ಲಿ ಅಂಗವಿಕಲರ ಆಶ್ರಮಕ್ಕೆ ದಾನ ಮಾಡಿದ್ದಾರೆ. ಎರಡು ಲಕ್ಷ ಹಣವನ್ನು ಅಂಗವಿಕಲರ ಆಶ್ರಮಕ್ಕೆ ಮೋಕ್ಷಿತಾ ದಾನ ಮಾಡಿದ್ದಾರೆ. ಇದು ನಿಜವಾಗಿಯೂ ಅವರ ಒಳ್ಳೆತನವನ್ನು ತೋರಿಸುತ್ತದೆ.
ಇನ್ನೂ ಮೋಕ್ಷಿತಾ ಪೈ ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ಅವರ ಮೇಲೆ ಇದ್ದ ಮಕ್ಕಳ ಕಳ್ಳಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಆ ಕೇಸ್‌ಗೂ ನನಗೂ ಸಂಬಂಧವಿಲ್ಲ. ಆ ಪ್ರಕರಣ ಈಗ ಮುಗಿದು ಹೋದ ಅಧ್ಯಾಯ. ಎಲ್ಲರ ಜೀವನದಲ್ಲಿ ಒಂದು ಕಹಿ ಘಟನೆ ನಡೆದಿರುತ್ತದೆ. ಎಲ್ಲರ ಜೀವನದಲ್ಲೂ ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿರುತ್ತಾರೆ. 
ನನ್ನ ಜೀವನದಲ್ಲೂ ಅಂತಹ ಘಟನೆ ನಡೆದಿದೆ. ಮತ್ತೊಬ್ಬರ ಹೆಸರು ಹಾಳು ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಿ ಎಂದು ಮೋಕ್ಷಿತಾ ತಿರುಗೇಟು ಕೊಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.