ನಿರ್ಮಾಪಕ ತರುಣ್ ಮೇಲೆ ದೂ ರು ದಾಖಲು; ನ ಟಿಯ ಮೇಲೆ ಲೈಂ ಗಿಕ ಮೋ ಸ

 | 
Gh

ಹೆಣ್ಣಿನಿಂದ ನಟ ದರ್ಶನ್ ಜೈಲು ಪಾಲಾಗಾಯ್ತು. ಈಗ ಮತ್ತೊಬ್ಬ ನಟನ ಸರದಿ. ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ರಾಜ್ ತರುಣ್ ವಿರುದ್ಧ ಅವರ ಪ್ರೇಯಸಿ ದೂರು ನೀಡಿದ್ದು, ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಕೆಲವು ಗುರುತರ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರವೇ ನಟ ರಾಜ್ ತರುಣ್ ಬಂಧನ ಆಗಲಿದೆ ಎನ್ನಲಾಗುತ್ತಿದೆ. 

ಜೊತೆಗೆ ರಾಜ್ ತರುಣ್​ರ ಹಾಲಿ ಪ್ರೇಯಸಿ ಎನ್ನಲಾಗುತ್ತಿರುವ ಹಿಮಾಚಲ ಪ್ರದೇಶ ಮೂಲದ ನಟಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಅಷ್ಟಕ್ಕೂ ಏನಿದು ಪ್ರಕರಣ ಎಂದರೆ ರಾಜ್ ತರುಣ್, ಟಾಲಿವುಡ್​ನ ಜನಪ್ರಿಯ ಯುವನಟ. ಸಾಕಷ್ಟು ರೊಮ್ಯಾಂಟಿಕ್ ಕಾಮಿಡಿ ಹಾಗೂ ಆಕ್ಷನ್ ಥ್ರಿಲ್ಲರ್ ಸಿನಿಮಾಗಳಲ್ಲಿ ರಾಜ್ ತರುಣ್ ನಟಿಸಿದ್ದಾರೆ. ರಾಜ್ ಹಲವು ವರ್ಷಗಳಿಂದಲೂ ಲಾವಣ್ಯ ಹೆಸರಿನ ಯುವತಿಯೊಟ್ಟಿಗೆ ಪ್ರೀತಿಯಲ್ಲಿದ್ದರು. ಲಾವಣ್ಯ ಅವರೇ ಹೇಳಿರುವಂತೆ 2012 ರಿಂದಲೂ ತಾವು ಪ್ರೀತಿಯಲ್ಲಿದ್ದು ಹಲವು ವರ್ಷಗಳಿಂದಲೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರಂತೆ. 

ಆದರೆ ಇತ್ತೀಚೆಗೆ ರಾಜ್, ಬೇರೊಬ್ಬ ನಟಿಗೆ ಆಕರ್ಷಿತರಾಗಿದ್ದು, ತನಗೆ ಮೋಸ ಮಾಡಿದ್ದಾರೆ ಎಂದು ಲಾವಣ್ಯ ಆರೋಪ ಮಾಡಿದ್ದಾರೆ. ಲಾವಣ್ಯ ನರಸಿಂಗಿ ಪೊಲೀಸ್ ಠಾಣೆಯಲ್ಲಿ ರಾಜ್ ತರುಣ್ ವಿರುದ್ಧ ದೂರು ನೀಡಿದ್ದು, ವಂಚನೆ, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ, ಬೆದರಿಕೆ ಇನ್ನೂ ಕೆಲವು ಆರೋಪಗಳನ್ನು ಮಾಡಿದ್ದಾರೆ. ದೂರಿನನ್ವಯ ಪೊಲೀಸರು ರಾಜ್ ತರುಣ್ ವಿರುದ್ಧ ಸೆಕ್ಷನ್ 420 , 503 , ಸೆಕ್ಷನ್ 493  ಲೈಂಗಿಕತೆಗೆ ಅಥವಾ ಬೇರೆ ಉದ್ಧೇಶಕ್ಕೆ ಬಳಸಿಕೊಳ್ಳುವುದು ಅಡಿಯಲ್ಲಿ ಕೇಸು ನಮೂದಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಲಾವಣ್ಯ ನೀಡಿರುವ ದೂರಿನನ್ವಯ, ರಾಜ್ ಹಾಗೂ ಲಾವಣ್ಯ 2012 ರಿಂದಲೂ ಪ್ರೀತಿಸುತ್ತಿದ್ದಾರೆ. ಇದೀಗ ಮುಂಬೈ ಮೂಲದ ನಟಿಯೊಟ್ಟಿಗೆ ರಾಜ್ ಪ್ರೀತಿಯಲ್ಲಿದ್ದಾರೆ. ಆ ಮುಂಬೈ ಮೂಲದ ನಟಿ ಹಾಗೂ ಆಕೆಯ ಸಹೋದರ ಲಾವಣ್ಯಗೆ ಬೆದರಿಕೆಗಳನ್ನು ಹಾಕಿದ್ದು, ರಾಜ್ ತರುಣ್ ಇಂದ ದೂರ ಇರುವಂತೆ ಒತ್ತಾಯಿಸಿದ್ದಾರೆ. ಕೆಲ ತಿಂಗಳ ಹಿಂದೆ ಸಹ ಲಾವಣ್ಯ, ರಾಜ್ ಅನ್ನು ಮದುವೆಯಾಗಲು ನಿಶ್ಚಯಿಸಿದ್ದರಂತೆ. 

ಆ ಸಮಯದಲ್ಲಿ ಆ ನಟಿಗೆ ಕರೆ ಮಾಡಿ ರಾಜ್​ ಇಂದ ದೂರ ಇರುವಂತೆ ಬೇಡಿಕೊಂಡಿದ್ದಾಗಿಯೂ ಲಾವಣ್ಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಹಾಗೂ ರಾಜ್ ತರುಣ್​ರ ಕೆಲ ಆಪ್ತ ಚಿತ್ರಗಳನ್ನು ಸಹ ನಟಿ ಪೊಲೀಸರೊಟ್ಟಿಗೆ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.