ವಿರಾಟ್ ಕೊಹ್ಲಿ ವಿರುದ್ಧ ದೂರು ದಾಖಲು; ಕಣ್ಣೀರಿ ಟ್ಟ ಅನುಷ್ಕಾ ಶರ್ಮಾ

 | 
He

ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಪಬ್ ಮೇಲೆ ಎಫ್ಐಆರ್ ದಾಖಲಾಗಿದೆ. ಒನ್ 8 ಕಮ್ಯೂನ್ ಪಬ್ ಮೇಲೆ ಕೇಸ್​ದಾಖಲಾಗಿದೆ. ಕಸ್ತೂರ್ಬಾ ರಸ್ತೆಯಲ್ಲಿ ಕೊಹ್ಲಿ ಸಹ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ಇದೆ. ರಾತ್ರಿ ಅವಧಿಗೂ ಮೀರಿ ಪಬ್ ತೆರೆದಿದ್ದ ಹಿನ್ನಲೆ ಎಫ್ಐಆರ್ ದಾಖಲಾಗಿದೆ.

ಇನ್ನು ಜುಲೈ‌ 6ರಂದು 1.20 ವರೆಗೆ ಪಬ್ ಓಪನ್ ಇತ್ತು. ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಪಬ್ ಓಪನ್ ಇರೋದಾಗಿ ಮಾಹಿತಿ ಬಂದಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಗ್ರಾಹಕರಿರುವುದು ಬೆಳಕಿಗೆ ಬಂದಿದೆ. ಅವಧಿಗೂ ಮೀರಿ ಅನಧಿಕೃತವಾಗಿ ಪಬ್ ಓಪನ್ ಇದ್ದ ಕೊಹ್ಲಿ ಸಹ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

https://www.youtube.com/live/uC0VQN6Vvlg?si=JIwUOlCVIx7iSqJq

ಚರ್ಚ್ ಸ್ಟ್ರೀಟ್‌ನ ಎಂಪೈರ್ ರೆಸ್ಟೋರೆಂಟ್ ಮತ್ತು ಬ್ರಿಗೇಡ್ ರಸ್ತೆಯಲ್ಲಿರುವ ಪ್ಯಾಂಜಿಯೋ ಬಾರ್ ಮತ್ತು ರೆಸ್ಟೋರೆಂಟ್ ನಲ್ಲೂ ಸಹ ನಿಗದಿತ ಸಮಯದ ನಂತರವೂ ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿತ್ತು. One8 ಕಮ್ಯೂನ್ ರೆಸ್ಟೋರೆಂಟ್ ಅನ್ನು ಡಿಸೆಂಬರ್ 2023 ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಇದು ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನ ಸಮೀಪದಲ್ಲಿರುವ ಕಸ್ತೂರ್ಬಾ ರಸ್ತೆಯಲ್ಲಿರುವ ರತ್ನಮ್ಸ್ ಕಾಂಪ್ಲೆಕ್ಸ್‌ನ ಆರನೇ ಮಹಡಿಯಲ್ಲಿದೆ.

ನಾವು ಮಧ್ಯರಾತ್ರಿ 1:30 ರವರೆಗೆ ತೆರೆದಿದ್ದಕ್ಕಾಗಿ ಪ್ರಕರಣಗಳನ್ನು ದಾಖಲಿಸಿದ್ದೇವೆ. ಜೋರಾಗಿ ಸಂಗೀತ ನುಡಿಸುತ್ತಿರುವ ಬಗ್ಗೆ ನಮಗೆ ದೂರುಗಳು ಬಂದಿವೆ. ಪಬ್‌ಗಳನ್ನು ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಲಾಗಿದೆ ಮತ್ತು ಅದಕ್ಕಿಂತ ಮೀರುವಂತಿಲ್ಲ ಎಂದು ಡಿಸಿಪಿ  ಬಿಕೆ ಶೇಖರ್ ಮಾಧ್ಯಮಗಳಿಗೆ ತಿಳಿಸಿದರು.

2023ರಲ್ಲಿ ಗಾರ್ಡನ್ ಸಿಟಿಯಲ್ಲಿ ಈ ಪಬ್‌ ಓಪನ್‌ ಆಗಿತ್ತು. ಇಲ್ಲಿ ಕಿಟಕಿಯ ಪಕ್ಕದ ಮೇಜಿನ ಬಳಿ ಕುಳಿತರೆ ಕ್ರಿಕೆಟ್ ಸ್ಟೇಡಿಯಂ ಭಾಗಶಃ ಗೋಚರಿಸುತ್ತದೆ. ಈ ಪಬ್‌ನ ಶಾಖೆಗಳು ಮುಂಬೈ, ಪುಣೆ ಮತ್ತು ಕೋಲ್ಕತ್ತಾದಲ್ಲಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.