ಕಮಲ್ ಹಾಸನ್ ಗೆ ಬೆಂಬಲ ಸೂಚಿಸಿದ ಕೋರ್ಟ್, ಸಿಡಿದೆ ದ್ದ ರಂಗಣ್ಣ
Jun 19, 2025, 10:30 IST
|

ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ವಿಚಾರ ಕೋರ್ಟ್ನಲ್ಲಿ ಇತ್ತು. ಈಗ ಈ ಪ್ರಕರಣ ಒಂದು ಹಂತಕ್ಕೆ ಇತ್ಯರ್ಥ ಆಗಿದೆ. ‘ಥಗ್ ಲೈಫ್’ ಸಿನಿಮಾ ರಿಲೀಸ್ಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ. ಆದಾಗ್ಯೂ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗೋದು ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಆಗಿರೋದು ಹಂಚಿಕೆದಾರ ವೆಂಕಟೇಶ್ ನಿರ್ಧಾರ. ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನಂತೂ ಸಿನಿಮಾ ರಿಲೀಸ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸಿನಿಮಾ ರಿಲೀಸ್ ಅನುಮಾನ ಎನ್ನಲಾಗುತ್ತಿದೆ.
ಥಗ್ ಲೈಫ್ ಸಿನಿಮಾ ತಂಡದ ಪರವಾಗಿ ಸುಪ್ರೀಂಕೋರ್ಟ್ ಆದೇಶ ಪ್ರಕಟಿಸಿದೆ. ಯಾವ ಸಿನಿಮಾ ಪ್ರದರ್ಶಿಸಬೇಕು, ಯಾವುದನ್ನು ಪ್ರದರ್ಶಿಸಬಾರದು ಎಂಬುದನ್ನು ಗೂಂಡಾಗಳ ಗುಂಪು ನಿರ್ಧರಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಲ್ಲದೆ, ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆದ ಚಿತ್ರಗಳನ್ನು ತಡೆಯುವ ಯಾವ ಹಕ್ಕೂ ಇಲ್ಲ ಎಂದು ಕೋರ್ಟ್ ಹೇಳಿದೆ.
ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಮಾಡಲು ವೆಂಕಟೇಶ್ ಎಂಬುವವರು ಮುಂದೆ ಬಂದಿದ್ದರು. ಅವರು ಬರೋಬ್ಬರಿ 8 ಕೋಟಿ ರೂಪಾಯಿಗೆ ಹಂಚಿಕೆ ಮಾಡಲು ಒಪ್ಪಿಕೊಂಡಿದ್ದರು. ಆದರೆ, ಈಗಾಗಲೇ ಸಿನಿಮಾ ರಿಲೀಸ್ ವಿಳಂಬ ಆಗಿದೆ. ಸಿನಿಮಾ ಕೂಡ ಚೆನ್ನಾಗಿಲ್ಲ ಎನ್ನುವ ವಿಮರ್ಶೆ ಸಿಕ್ಕಿದೆ. ಹೀಗಾಗಿ, ಈ ಸಂದರ್ಭದಲ್ಲಿ ಅವರು ಸಿನಿಮಾನ ರಾಜ್ಯದಲ್ಲಿ ರಿಲೀಸ್ ಮಾಡಿದರೆ ಕೈ ಸುಟ್ಟುಕೊಳ್ಳೋದು ಪಕ್ಕಾ.
ಹೀಗಾಗಿ, ಈ ಬಗ್ಗೆ ಪ್ರತಿಕ್ರಿಯಿಸಿರೋ ಅವರು, ನಾನು ಈಗ ಸಿನಿಮಾ ರಿಲೀಸ್ ಮಾಡುವುದಿಲ್ಲ. ಈಗಾಗಲೇ ಅಡ್ವಾನ್ಸ್ ಕೊಟ್ಟು ಸಿನಿಮಾ ಖರೀದಿ ಮಾಡಿದ್ದೆ. ಆ ಹಣ ಇನ್ನೂ ನನಗೆ ವಾಪಾಸ್ ಬಂದಿಲ್ಲ. ಅದರ ಓಡಾಟದಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಸಿನಿಮಾನ ಹಂಚಿಕೆ ಮಾಡಲ್ಲ ಎಂಬುದು ಸ್ಪಷ್ಟವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023