ವರಮಹಾಲಕ್ಷ್ಮಿ ದಿನದಂದೇ ಮಾಧ್ಯಮದವರ ಕ್ಷಮೆ ಕೇಳಿದ ಡಿ ಬಾಸ್

 | 
ರಿರಿ

ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ದಾಸ, ಕೆಂಚ ಹೀಗೇ ಹಲವಾರು ಹೆಸರುಗಳಿಂದ ಕರೆಯೋ ಡಿ ಬಾಸ್ ಗತ್ತು ಎಲ್ಲರಿಗೂ ಗೊತ್ತೇ ಇದೆ. ಮಾಧ್ಯಮ ಎಂದ್ರೆ ಕಿಡಿ ಕಿಡಿ ಕೆಂಡಕಾರುತ್ತಿದ್ದ ದರ್ಶನ್‌ ಈಗ ಅದೇ ಮಾಧ್ಯಮದವರ ಬಳಿ ಕ್ಷಮೆ ಕೋರಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ದಾಸನ ಈ ನಡೆ ಎಲ್ಲರಿಗೂ ಅಚ್ಚರಿ ತಂದಿದ್ದೇನೋ ಸತ್ಯ. ಇದಕ್ಕೆ ಅನೇಕರು ಸಂತಸ ಕೂಡ ವ್ಯಕ್ತಪಡಿಸಿದ್ದಾರೆ.

ಆದರೆ ಇನ್ನೊಂದೆಡೆ ಇದರ ವಿರೋಧವಾಗಿ ಅನೇಕ ಮಾತುಗಳು ಕೇಳಿಬರುತ್ತಿವೆ. ತನ್ನ ಮುಂದಿನ ಸಿನಿಮಾನೂ ನೆಲಗಚ್ಚಿ ಬಿಡುತ್ತೆ ಅನ್ನೋ ಭಯ ಕಾಡಲು ಶುರುವಾದ ಮೇಲೆ ಇದೀಗ ಎಲ್ಲಾ ವಾಹಿನಿಯ ಮುಖ್ಯಸ್ಥರನ್ನ ಕರಿಸಿ ಸ್ವಾಮಿ ತಪ್ಪಾಯ್ತು..! ಯಾವುದೋ ಕೆಟ್ಟ ಗಳಿಗೆಯಲ್ಲಿ ಹೀಗಾಯ್ತು ಅಂತ ಕ್ಷಮೆ ಕೇಳಿ ನಂತರ ವರಮಹಾಲಕ್ಷ್ಮಿ ಹಬ್ಬದ ದಿನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕೋ ಮೂಲಕ ತಮ್ಮ ಧೈರ್ಯ ಎಂತದ್ದು ಅನ್ನೋದನ್ನ ತೋರಿಸಿದ್ದಾರೆ ಎಂದು ಗಾಂಧಿನಗರದಲ್ಲಿ ಮಾತನಾಡುತ್ತಿದ್ದಾರೆ.

ಕಾಟೇರಾ ಸಿನಿಮಾ ರಿಲೀಸ್‌ಗೂ ಮುನ್ನ ದರ್ಶನ್‌ ಮಾಧ್ಯಮಗಳ ಜೊತೆಗಿನ ಈ ಸಂಧಾನ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕೆ ಕಾರಣವೂ ಇದೆ. ಕ್ರಾಂತಿ ಸಿನಿಮಾ ಚೆನ್ನಾಗಿದ್ದರು ಸಹ ಮಾಧ್ಯಮದ ಸಹಾಯವಿಲ್ಲದೆ ಸಿನಿಮಾ ಫ್ಲಾಫ್ ಆಯ್ತು ಎಂಬುದು ಹಲವರ ಅಭಿಪ್ರಾಯವಾಗಿದೆ. ಇದೇ ಕಾರಣಕ್ಕೆ ಈಗ ಕಾಟೇರಾ ರಿಲೀಸ್‌ಗೂ ಮುನ್ನೆವೇ ದರ್ಶನ್‌ ಈ ಮಾಧ್ಯಮದವರ ಬಳಿ ಸ್ನೇಹ ಹಸ್ತ ಚಾಚಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ರೀತಿಯಲ್ಲಿ ಕಾಮಿಡಿ ಪೀಸ್ ಆಗಿದ್ದಾರೆ ದರ್ಶನ್ ಅಂತ ಒಂದಷ್ಟು ವರ್ಗದ ಜನರು ಟ್ರೋಲ್‌ ಮಾಡುತ್ತಿದ್ದಾರೆ. ನನಗೆ ಮಾಧ್ಯಮವೇ ಬೇಡ ಅಂತ ಇದ್ದ ದರ್ಶನ್ ಗೆ ಈಗ ಜ್ಞಾನೋದಯ ಆಯ್ತಾ‌ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಭರ್ಜರಿ ಊಟದ ವ್ಯವಸ್ಥೆ ಮಾಡಿ ಕ್ಷಮೆ ಕೇಳೋ ಮಟ್ಟಕ್ಕೆ ಚಾಲೆಂಜಿಂಗ್ ಸ್ಟಾರ್ ಇಳಿಯಬಾರದಿತ್ತು ಅಂತ ಕೆಲವು ನೆಟ್ಟಿಜನ್‌ ಹೇಳುತ್ತಿದ್ದಾರೆ. ಕ್ರಾಂತಿ ಸಿನಿಮಾದಂತೆ ಕಾಟೇರಾ ಕೂಡ ಸೋಲುತ್ತೆ ಅನ್ನೋ ಭಯ ಡಿ ಬಾಸ್ ಆಂಡ್ ಟೀಮ್ ಗೆ ಶುರುವಾಗಿತ್ತು. ಅದಕ್ಕೆ ಈ ಕ್ಷಮೆಯಾಚನೆ ಮಾಡಿದ್ದಾರೆ ಎಂದು ಇನ್ನೂ ಕೆಲವರು ದಾಸನ ನಡೆಗೆ ವಿರೋಧಿಸುತ್ತಿದ್ಧಾರೆ.

ಗಾಂಧಿನಗರದಲ್ಲಿ ದರ್ಶನ್‌ ವಿಚಾರವಾಗಿ ಪರ - ವಿರೋಧದ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾ ಸೋಲುತ್ತೇ ಎಂದು ಅಂಜಿ ದರ್ಶನ್ ಸಂಪಾದಕರ ಬಳಿ ಕ್ಷಮೆ ಕೇಳಿ ಶರಣಾಗಿದ್ದಾರೆ ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. ೨೦ ವರ್ಷಗಳ ಹಿಂದೆ ಕರಿಯ ಸಿನಿಮಾ ಮಾಡಿ ದರ್ಶನ್ ವರ್ಚಸ್ಸನ್ನು ಹೆಚ್ಚಿಸಿದ ನಿರ್ದೇಶಕ ಪ್ರೇಮ ಬಗ್ಗೆ ಕೂಡ ಹಗುರವಾಗಿ ಮಾತನಾಡುವ ಮೂಲಕ ಅಂತರ ಕಾಯ್ದುಕೊಂಡಿದ್ರು ಎಂದು ಹೇಳಲಾಗ್ತಿದೆ. ಈಗ ಅವರೊಂದಿಗೆ ಕಲಿತು ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಒಂದು ಕಾಲದಲ್ಲಿ ಪುಡಾಂಗ್ ಎಂದು ನಿರ್ದೇಶಕ ಪ್ರೇಮ್ ಗೆ ಅವಮಾನ ಮಾಡಿದ್ದ ದರ್ಶನ್ ಈಗ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳುವ ಸಲುವಾಗಿ ಪ್ರೇಮ್ ಜೊತೆ ರಾಜಿಯಾಗಿದ್ದಾರೆ ಎಂದು ಗಾಂಧಿನಗರದ ಮಂದಿ ಮಾತನಾಡುತ್ತಿದ್ದಾರೆ.

ಆಗ ಪುಡಂಗ್ ಆಗಿದ್ದ ಪ್ರೇಮ್ ದರ್ಶನ್ ಪಾಲಿಗೆ ಈಗ ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ದರ್ಶನ್ ಗೆ ಕೆಟ್ಟ ಮೇಲೆ ಬುದ್ದಿ ಬಂತು ಎಂದು ಟ್ರೋಲ್‌ ಮಾಡುತ್ತಿದ್ದಾರೆ. ಆದರೆ ಕೊನೆಗೂ ಟಿವಿ ವಾಹಿನಿಗಳಲ್ಲಿ ದರ್ಶನ್ ನೋಡ್ತೀವಿಯಲ್ಲ ಎಂದು ಡಿಬಾಸ್ ಫ್ಯಾನ್ಸ್ ಸಂತಸದಲ್ಲಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.