ಬತ್೯ಡೇ ದಿನ ತಂಗಿ ಅಮೂಲ್ಯ ಮನೆಗೆ ಬಂದ ಡಿ ಬಾಸ್ ದಶ೯ನ್, ಮಕ್ಕಳ ಜೊತೆ ಆಟ ತುಂಟಾಟ

 | 
ಿಿಿ

ಕನ್ನಡ ಚಿತ್ರರಂಗದ ನಟ ದರ್ಶನ್‌ 47ನೇ ಹುಟ್ಟುಹಬ್ಬವನ್ನು ನಟ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಆಚರಿಸಿಕೊಂಡಿದ್ದಾರೆ.ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ಹಲವು ಸಿನಿಮಾ ಪ್ರಾಜೆಕ್ಟ್‌ಗಳ ಟೈಟಲ್ ಅನೌನ್ಸ್ ಆಗಿದೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವಿಶ್‌ಗಳು ಹರಿದಾಡುತ್ತಿದೆ. ಕನ್ನಡ ಚಿತ್ರರಂಗ ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತು ಪತಿ ಜಗದೀಶ್‌ ಕೂಡ ದರ್ಶನ್ ನಿವಾಸಕ್ಕೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ. 

ಜಗದ ಸುಖವೆಲ್ಲವೂ ಇರಲಿ ಈ ಕೈಯಲ್ಲಿ ಇರುವವರೆಗೂ ಕೊನೆಯವರೆಗೂ' ಎಂದು ನಟಿ ಅಮೂಲ್ಯ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.ಈ ವರ್ಷ ದರ್ಶನ್‌ಗೆ ವಿಶ್ ಮಾಡಲು ಅಮೂಲ್ಯ ತಮ್ಮ ಅವಳಿ ಮಕ್ಕಳಾದ ಅಥರ್ವ್‌ ಮತ್ತು ಆಧವ್‌ನ  ಕರೆದುಕೊಂಡು ಹೋಗಿದ್ದಾರೆ.ಚಿತ್ರರಂಗಕ್ಕೆ ಅಮೂಲ್ಯ ಬಾಲ ನಟಿಯಾಗಿ ಎಂಟ್ರಿ ಕೊಟ್ಟಾಗಿನಿಂದಲೂ ದರ್ಶನ್ ಜೊತೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ದರ್ಶನ್‌ರನ್ನು ಅಮೂಲ್ಯ ಅಂಕಲ್ ಎಂದು ಕರೆಯುತ್ತಾರೆ. 

ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ ಚೆಲುವಿನ ಚಿತ್ತಾರದ ಮೂಲಕ ಗೋಲ್ಡನ್ ಕ್ವೀನ್ ಪಟ್ಟ ಪಡೆದರು. ಬಾಲ್ಯದಿಂದ ದರ್ಶನ್‌ನ ಬಹಳ ಹತ್ತಿರದಿಂದ ನೋಡಿಕೊಂಡು ಬಂದಿರುವ ಅಮೂಲ್ಯ, ದರ್ಶನ್‌ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಅವರನ್ನು ನಾನು ಎಲ್ಲರ ಎದುರು ಸರ್ ಸರ್ ಎಂದು ಮಾತನಾಡಿಸುತ್ತೀನಿ ಆದರೆ ಅವರು ಎಲ್ಲೇ ಸಿಕ್ಕರೂ ನಾನು ಅಂಕಲ್ ಅಂತಾರೆ ಕರೆಯೋದು ಎಂದು ಕನ್ನಡ ಖಾಸಗಿ ಸಂದರ್ಶನದಲ್ಲಿ ಅಮೂಲ್ಯ ಹೇಳಿದ್ದಾರೆ.

ಕಾಟೇರ ಚಿತ್ರದಲ್ಲಿ ಒಂದು ಪುಟ್ಟ ಹುಡುಗಿ ಬರ್ತಾರೆ. ನಾಯಕಿಯ ಬಾಲ್ಯದ ಪಾತ್ರವನ್ನು ಚೆನ್ನಾಗಿ ತೋರಿಸಲಾಗಿದೆ. ನೋಡು ನೀನು ಹೀಗೆ ಇದ್ದಿದ್ದು ಅಂತಿದ್ದರು ದರ್ಶನ್ ಸರ್.
ಇಷ್ಟು ಚಿಕ್ಕವರಿದ್ರು ಈಗ ನೋಡಿ ಎಷ್ಟು ದೊಡ್ಡವರಾಗಿದ್ದಾರೆ ಅಂತಿದ್ರು ಸರ್. ಮೊನ್ನೆ ಕೂಡ ನನ್ನ ಮಕ್ಕಳಿಗೆ ಊಟ ಮಾಡಿಸುತ್ತಿದ್ದೆ ನೋಡಿ ಶಾಕ್ ಆದರು.ನಿನಗಾ ಇಬ್ಬರು ಮಕ್ಕಳು? ನಿನಗೆ ಇಬ್ಬರು ಮಕ್ಕಳು ಅಂತಾನೂ ನಂಬಲು ಆಗಲ್ಲ. ಮಕ್ಕಳನ್ನು ಎತ್ತಿಕೊಂಡು ಬಂದ್ರೆ ನಾನು ನೋಡ್ತಾನೆ ಕೂತಿರುತ್ತೀನಿ ಅಂತಿದ್ರು ಎಂದಿದ್ದಾರೆ .

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.