ಕರ್ನಾಟಕದ ಪ್ರಖ್ಯಾತ ದೇವಾಲಯದಲ್ಲಿ ಯುಗಾದಿ ಹಬ್ಬ ಆಚರಿಸಿದ ಡಾಲಿ ಧನಂಜಯ್ ಹಾಗೂ ಪತ್ನಿ
Apr 1, 2025, 11:13 IST
|

ಇನ್ನು ಈ ಹಿನ್ನೆಲೆಯಲ್ಲಿ ನಿನ್ನೆ ಡಾಲಿ ಧನಂಜಯ ಹಾಗೂ ಪತ್ನಿ ಧನ್ಯತಾ ಪುಷ್ಪಗಿರಿ ದೇವಾಲಯಕ್ಕೆ ಭೇಟಿ ನೀಡಿದ್ದರು.ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಇದೆ. ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ದಂಪತಿ ನೆಲದ ಮೇಲೆ ಪ್ರಸಾದ ಸ್ವೀಕರಿಸಿದರು.
ಹಳೇಬೀಡಿನಲ್ಲಿರುವ ಪುಷ್ಪಗಿರಿಯು ಒಂದು ಪುಟ್ಟ ಗಿರಿಧಾಮವಾಗಿದ್ದು, ಇಲ್ಲಿ ಹೊಯ್ಸಳ ಯುಗದ ಕೆಲವು ದೇವಾಲಯಗಳಿವೆ. ಇಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಶ್ರೀ ಪಾರ್ವತಮ್ಮನವರ ಗಿರಿಜಾ ಕಲ್ಯಾಣೋತ್ಸವ ಮತ್ತು ದಿವ್ಯ ರಥೋತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತದೆ.ಬಳಿಕ ನೆಲದ ಮೇಲೆ ಕುಳಿತು ದಂಪತಿ ಪ್ರಸಾದ ಸ್ವೀಕರಿಸಿ ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಈ ವೇಳೆ ದಂಪತಿಗೆ ದೇವಾಲಯದ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಡಾ. ಧನ್ಯತಾ ಜೊತೆ ಈ ವರ್ಷ ಫೆ.16ರಂದು ಡಾಲಿ ಮೈಸೂರಿನಲ್ಲಿ ಮದುವೆಯಾದರು. ಮದುವೆ ಮತ್ತು ಆರತಕ್ಷತೆಗೆ ಸಿನಿಮಾ ರಂಗ ಮತ್ತು ರಾಜಕೀಯದ ಗಣ್ಯರು ಭಾಗವಹಿಸಿ ಶುಭಹಾರೈಸಿದ್ದರು.ಇನ್ನೂ ಅಣ್ಣ ಫ್ರಮ್ ಮೆಕ್ಸಿಕೋ, ನಾಡಪ್ರಭು ಕೆಂಪೇಗೌಡ ಸೇರಿದಂತೆ ತೆಲುಗಿನಲ್ಲೂ ಡಾಲಿಗೆ ಹಲವು ಸಿನಿಮಾಗಳಿವೆ. ಹೊಸ ಪ್ರತಿಭೆಗಳಿಗೆ ನಿರ್ಮಾಣ ಚಿತ್ರದಲ್ಲಿ ಅವಕಾಶ ಕೊಡುತ್ತಿದ್ದಾರೆ. ನಿರ್ಮಾಪಕನಾಗಿರೂ ಡಾಲಿ ತೊಡಗಿಸಿಕೊಂಡಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023