ಬಡವರ ಮಗ ಅಂದಿದ್ದ ಡಾಲಿ ಮದುವೆಯಲ್ಲಿ ಅಭಿಮಾನಿಗಳಿಗೆ ಅವಮಾನ

 | 
ರ್
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಧನ್ಯತಾ ಮದುವೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಈಗಾಗಲೇ ವಿವಾಹ ಪೂರ್ವ ಕಾರ್ಯಗಳು, ಶಾಸ್ತ್ರಗಳು ನೆರವೇರಿದ್ದು ಕಳೆದ ದಿನ ಡಿಸೆಪ್ಶನ್‌ಗೆ ಹಲವಾರು ಸೆಲೆಬ್ರಿಟಿಗಳು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಆದರೆ ಡಾಲಿ ಡಿಸೆಪ್ಶನ್‌ಗಾಗಿ ಮಂಟಪದೊಳಗೆ ಕಾಲಿಡಲು ಮೈಸೂರು ಮಹಾರಾಜರು ಸಾಕಷ್ಟು ಹರಸಾಹಸ ಪಡಬೇಕಾಯ್ತು.
ಅಲ್ಲದೆ ಹಲವಾರು ಸೆಲೆಬ್ರಿಟಿಗಳು ಕೂಡ ಡಾಲಿ ಡಿಸೆಪ್ಶನ್‌ಗೆ ಹೋಗಲು ಕಷ್ಟಪಟ್ಟ ದೃಶ್ಯಗಳು ವೈರಲ್ ಆಗಿವೆ. ಈ ದೃಶ್ಯಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಇದು ಡಾಲಿ ಮದುವೆ ಅಲ್ಲ, ಡಾಲಿ ಜಾತ್ರೆ ಎಂದು ಜನ ಕಿಡಿ ಕಾರಿದ್ದಾರೆ. ಆದರೆ ಕೆಲ ಸೆಲೆಬ್ರಿಟಿಗಳಿಗೆ ಬೇಗನೆ ಬಿಟ್ಟು ಇನ್ನು ಸಾಮಾನ್ಯ ಜನರಿಗೆ ದೂರದಿಂದಲೇ ನೋಡಿ ಹೋಗಲು ಅನುವು ಮಾಡಿದ್ದಾರೆ.
ಹೌದು... ಡಾಲಿ ಧನಂಜಯ್ ಹಾಗೂ ಧನ್ಯತಾ ದಾಂಪತ್ಯ ಜೀವನಕ್ಕೆ ಇಂದು ಕಾಲಿಡಲಿದ್ದಾರೆ. ಕೆಲ ದಿನಗಳಿಂದ ಇವರಿಬ್ಬರ ಮದುವೆ ಶಾಸ್ತ್ರಗಳು ನಡೆಯುತ್ತಿದ್ದು ಹಲವಾರು ಸಿನಿ ತಾರೆಯರು ಆಗಮಿಸಿ ಈ ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಅಲ್ಲದೆ ಕಳೆದ ದಿನ ಕೂಡ ಹಲವಾರು ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿದ ದೃಶ್ಯಗಳು ವೈರಲ್ ಆಗಿವೆ. ಸಾಮಾನ್ಯರು ನೂಕು ನುಗ್ಗಲಿನಲ್ಲಿ ಹೋಗಿ ಬಂದಿದ್ದಾರೆ.
ಡಾಲಿ ಧನಂಜಯ್ ಡಿಸೆಪ್ಶನ್‌ಗೆ ನಟ ಶ್ರೀಮುರಳಿ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಸುತ್ತುವರೆದಿದ್ದರಿಂದ ಮುರಳಿ ಅವರು ಮಂಟಪಕ್ಕೆ ತೆರಳಲು ಹರಸಾಹಸ ಪಡಬೇಕಾಯಿತು. ಅಲ್ಲದೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಡಾಲಿ ಡಿಸೆಪ್ಶನ್‌ಗೆ ಹೋಗಲು ಕಳೆದ ದಿನ ಸಾಧ್ಯವಾಗಿಲ್ಲ. 
ಮಂಟಪಕ್ಕೆ ತೆರಳುವ ಮುನ್ನ ಜನ ಸುತ್ತುವರೆದಿದ್ದರಿಂದ ಯದುವೀರ್ ಮಂಟಪಕ್ಕೆ ತೆರಳಲು ಹರಸಾಹಸ ಪಡುವಂತಾದ ದೃಶ್ಯಗಳು ಕಂಡು ಬಂದಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.