ಪತ್ನಿ ಒಂದು ಮಗು ಕೊಟ್ಟಿದ್ದಕ್ಕೆ ವೇದಿಕೆ ಮೇಲೆ ಭರ್ಜರಿ ಡ್ಯಾನ್ಸ್ ಮಾಡಿದ ಡಾರ್ಲಿಂಗ್ ಕೃಷ್ಣ
Oct 23, 2024, 16:44 IST
|
ಸ್ಯಾಂಡಲ್’ವುಡ್ ನ ಖ್ಯಾತ ಜೋಡಿಗಳಾದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಂದು ತಿಂಗಳ ಹಿಂದೆ ಮುದ್ದಾದ ಹೆಣ್ಣು ಮಗುವನ್ನ ತಮ್ಮ ಜೀವನಕ್ಕೆ ಬರಮಾಡಿಕೊಂಡಿದ್ದರು. ಸದ್ಯ ಇಬ್ಬರು ತಂದೆ- ತಾಯಿಯಾಗಿರೋ ಸಂಭ್ರಮದಲ್ಲಿದ್ದಾರೆ. ಮುದ್ದಿನ ಮಗಳಿಗೆ ಪ್ರೀತಿಯಿಂದ ಪರಿ ಅಂತ ಕರೆದಿದ್ದಾರೆ.
ಸೆಪ್ಟೆಂಬರ್ ಅಲ್ಲಿ ನಟಿ ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸಂಭ್ರಮವನ್ನು ಡಾರ್ಲಿಂಗ್ ಕೃಷ್ಣ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಡೆಲಿವರಿ ಆಗಿ ಮಗಳೊಂದಿಗೆ ಮನೆಗೆ ಬಂದ ಕೃಷ್ಣಾ ಮತ್ತು ಮಿಲನಾರನ್ನು ಮನೆಮಂದಿ ಅದ್ಧೂರಿಯಾಗಿ ಸ್ವಾಗತಿಸಿದ್ದರು. ಅಷ್ಟೇ ಅಲ್ಲ, ನಂತರದ ದಿನಗಳಲ್ಲಿ ಮುದ್ದಾದ ಫ್ಯಾಮಿಲಿ ಫೋಟೊ ರಿಲೀಸ್ ಮಾಡುವ ಮೂಲಕ, ಮಗಳ ಮುಖವನ್ನು ಸಹ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.
ಇದೀಗ ಮಗುವಾಗಿ ಕೇವಲ ಒಂದು ತಿಂಗಳು ಕಳೆದಿದೆ ಅಷ್ಟೇ ನಟಿ ತಮ್ಮ ಸಿನಿಮಾ ಪ್ರಚಾರಕ್ಕೆ ರೆಡಿಯಾಗಿದ್ದಾರೆ. ಹೌದು, ಮಿಲನಾ ನಾಗರಾಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಝೀ ಕುಂಟುಂಬ ಅವಾರ್ಡ್ಸ್ ಗೆ ರೆಡಿಯಾಗಿರುವ ಫೋಟೊಗಳನ್ನ ಅಪ್ ಲೋಡ್ ಮಾಡಿದ್ದು, ತಮ್ಮ ಸಿನಿಮಾ ಪ್ರಚಾರಕ್ಕೆ ರೆಡಿಯಾಗಿರೋದಾಗಿ ತಿಳಿಸಿದ್ದಾರೆ.
ಹೌದು ಮಿಲನಾ ನಾಗರಾಜ್ ಆರಾಮ ಅರವಿಂದಾ ಸ್ವಾಮಿ ಎನ್ನುವ ಸಿನಿಮಾದಲ್ಲಿ ನಟಿಸಿದ್ದು, ಅನೀಶ್ ತೇಜೇಶ್ವರ್ ನಟಿಸಿರುವ ಈ ಸಿನಿಮಾ ನವಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಹಾಗಾಗಿ ನಟಿ ಮಗು ಹುಟ್ಟಿ ಒಂದೇ ತಿಂಗಳಲ್ಲಿ ಇದೀಗ ಸಿನಿಮಾ ಪ್ರಚಾರಕ್ಕೆ ರೆಡಿಯಾಗಿದ್ದಾರೆ. ತಿಳಿ ಗುಲಾಬಿ ಬಣ್ಣದ ಸೀರೆಯುಟ್ಟಿರುವ ಮಿಲನಾ ಬಿಳಿ ಬಣ್ಣದ ಡಿಸೈನರ್ ಬ್ಲೌಸ್ ಧರಿಸಿದ್ದು, ಮುತ್ತಿನ ಸುಂದರವಾದ ನೆಕ್ ಪೀಸ್ ಧರಿಸಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇನ್ನು ಪತಿ ಕೃಷ್ಣ ಅವರೊಂದಿಗೆ ಹಾಡಿಗೆ ಕೂಡ ಹೆಜ್ಜೆ ಹಾಕಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.