ಮುದ್ದಾದ ಪತ್ನಿಗೆ ಡ್ಯಾನ್ಸ್ ಹೇಳಿಕೊಟ್ಟ ಡಾರ್ಲಿಂಗ್ ಕೃಷ್ಣ, ಎರಡನೇ ಮಗುಗೆ ಸ್ಕೆಚ್ ಎಂದ ನೆಟ್ಟಿಗರು

 | 
Bj
ಚಂದನವನದ ಕ್ಯೂಟ್‌ ಜೋಡಿಗಳಲ್ಲಿ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಜೋಡಿ ಕೂಡಾ ಒಂದು. ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕಳೆದ ವರ್ಷ ಫೆಬ್ರವರಿ 14 ಪ್ರೇಮಿಗಳ ದಿನದಂದು ಮದುವೆಯಾಗಿದ್ದರು. ಇತ್ತೀಚೆಗೆ ಈ ಜೋಡಿ ಹೊಸ ಮನೆಯ ಗೃಹಪ್ರವೇಶ ಕೂಡಾ ಮಾಡಿತ್ತು. ಇವರಿಬ್ಬರ ಪ್ರೇಮದ ಕುರುಹಾಗಿ ಮಗಳು ಕೂಡ ಬಂದಿದ್ದಾಳೆ.ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಕೂಡಾ ಆಗಿವೆ.
ಮಿಲನಾ ಹಾಗೂ ಕೃಷ್ಣ, ಸೋಷಿಯಲ್‌ ಮೀಡಿಯಾದಲ್ಲಿ ಬಹಳ ಆಕ್ಟಿವ್‌ ಇದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಫೋಟೋ, ವಿಡಿಯೋಗಳನ್ನು ಇಬ್ಬರೂ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಕೃಷ್ಣ ಎರಡು ವಿಡಿಯೋಗಳನ್ನು ಹಂಚಿಕೊಂಡಿದ್ದು, ಈ ವಿಡಿಯೋ ನೋಡಿದ ನೆಟಿಜನ್ಸ್‌, ಕ್ಯೂಟನೆಸ್‌ ಓವರ್‌ಲೋಡೆಡ್‌ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಅಂದ ಹಾಗೆ ಇದು, ಪತ್ನಿ ಮಿಲನಾಗೆ ಕೃಷ್ಣ ಡ್ಯಾನ್ಸ್‌ ಕಲಿಸುತ್ತಿರುವ ವಿಡಿಯೋ.
ಕೃಷ್ಣ, ತಾವು ನಟಿಸಿರುವ 'ಮಿ. ಬ್ಯಾಚುಲರ್‌' ಚಿತ್ರದ ಹೇ ಸುಬ್ಬಲಕ್ಷ್ಮಿ..ಹೇ ನಾಗವಲ್ಲಿ... ಹಾಡಿನ ಸ್ಟೆಪ್‌ಗಳನ್ನು ಮಿಲನಾಗೆ ಕಲಿಸುತ್ತಿದ್ದಾರೆ. ಆದರೆ ಆ ಸ್ಟೆಪ್‌ಗಳನ್ನು ಮಾಡಲು ಮಿಲನಾ ಬಹಳ ಕಷ್ಟಪಡುತ್ತಿದ್ದಾರೆ. ಆದರೂ ತಾಳ್ಮೆಯಿಂದ ಕೃಷ್ಣ, ಪ್ರೀತಿಯ ಪತ್ನಿಗೆ ಡ್ಯಾನ್ಸ್‌ ಕಲಿಸಲು ಯತ್ನಿಸುತ್ತಿದ್ದಾರೆ. ಮಿಲನಾ, ತಮ್ಮ ಪರಿಸ್ಥಿತಿಗೆ ತಾವೇ ನಗುತ್ತಿದ್ದಾರೆ. ಕೃಷ್ಣ ಹಾಗೂ ವಿಡಿಯೋ ಮಾಡುತ್ತಿರುವವರು ಕೂಡಾ ಮಿಲನಾ ಪರಿಸ್ಥಿತಿ ನೋಡಿ ನಗುತ್ತಿದ್ದಾರೆ.
ಮಿಲನಾ, ಸ್ಟೆಪ್ಸ್‌ ನೋಡಿ ಕೃಷ್ಣ, ನೀನು ಕುಂಟೆಬಿಲ್ಲೆ ಆಡ್ತಿದ್ಯಾ, ಡ್ಯಾನ್ಸ್‌ ಮಾಡ್ತಿದ್ಯಾ? ಎಂದು ನಗುತ್ತಲೇ ಕೇಳುತ್ತಾರೆ. 'ಇಂತಹ ವಿಡಿಯೋಗಳನ್ನು ಏಕೆ ಅಪ್‌ಲೋಡ್‌ ಮಾಡ್ತಿರಾ ಕೃಷ್ಣ, ನನಗೆ ಮುಜುಗರ ಆಗ್ತಿದೆ' ಎಂದು ಮಿಲನಾ ಈ ವಿಡಿಯೋಗಳಿಗೆ ಕಮೆಂಟ್‌ ಮಾಡಿದ್ದಾರೆ. 
ಮತ್ತೊಂದು ವಿಡಿಯೋದಲ್ಲಿ ಕೃಷ್ಣ, ಪಾದರಕ್ಷೆಗಳನ್ನು ಬಿಟ್ಟು ಡ್ಯಾನ್ಸ್‌ ಹೇಳಿಕೊಡುವಾಗ ಅವರ ಮುದ್ದಿನ ನಾಯಿ, ಚಪ್ಪಲಿ ಕಚ್ಚಿಕೊಂಡು ಹೋಗುವುದನ್ನೂ ನೆಟಿಜನ್ಸ್‌ ಗಮನಿಸಿದ್ದು ಆ ಶ್ವಾನದ ಬಗ್ಗೆ ಕೂಡಾ ಕಮೆಂಟ್‌ ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.