ಪತ್ನಿ ಜೊತೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದ ದರ್ಶನ್, ಗಂಡನಿಗೆ ದುಬಾರಿ ಗಿಫ್ಟ್ ಕೊಟ್ಟ ಹೆಂಡತಿ
Feb 17, 2025, 17:38 IST
|

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ನಿನ್ನೆಗೆ 48ನೇ ಹುಟ್ಟುಹಬ್ಬದ ಸಂಭ್ರಮ. ಸಹಜವಾಗಿ ಆಪ್ತರು, ಸಿನಿ ತಾರೆಯರು, ಅಭಿಮಾನಿಗಳು ನಟ ದರ್ಶನ್‌ಗೆ ವಿಶ್ ಮಾಡುತ್ತಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ಫ್ರೆಂಡ್ ದರ್ಶನ್‌ಗೆ ವಿಶ್ ಮಾಡಿ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ
ದರ್ಶನ್ ಹುಟ್ಟುಹಬ್ಬಕ್ಕೆ ನಟಿ ರಕ್ಷಿತಾ ಪ್ರೇಮ್ ವಿಶೇಷವಾಗಿ ಶುಭಕೋರಿದ್ದಾರೆ. ಇವತ್ತು ವಿಶೇಷ ದಿನ, ಯಾಕ್ ಗೊತ್ತಾ? ಇವತ್ತು ನನ್ನ ಬೆಸ್ಟ್ ಫ್ರೆಂಡ್ ಬರ್ತ್‌ಡೇ. ಇವರು ಯಾವಾಗಲೂ ಕಷ್ಟ-ಸುಖದಲ್ಲಿ ಒಂದೇ ರೀತಿಯಲ್ಲಿ ಜೊತೆಗಿದ್ದವರು. ಇವರು ಜೊತೆಗಿರುವ ಜೀವನ ಯಾವಾಗಲೂ ಉತ್ತಮವಾಗಿರುತ್ತದೆ. ನೀವು ನನಗೆ ಸ್ಪೆಷಲ್.
ನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಶುಭ ಹಾರೈಸುತ್ತೇನೆ. ಯಾವಾಗಲೂ ಸ್ಪೆಷಲ್ ಆಗೇ ಇರ್ತೀಯ, ಲವ್ ಯೂ’ ಎಂದು ಶುಭಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಶುಭ ಸಂದೇಶ ಹಾಗೂ ದರ್ಶನ್ ಜೊತೆಗಿನ ಫೋಟೊ ಪೋಸ್ಟ್ ಮಾಡಿರುವ ರಕ್ಷಿತಾ ಪ್ರೇಮ್ ಬರ್ತ್‌ಡೇ ವಿಶ್ ಮಾಡಿದ್ದಾರೆ. ಮೊದಲಿನಂತೆ ದರ್ಶನ್ ಅವರ ಹಚ್ಚಿಕೊಂಡು ಸ್ನೇಹವನ್ನು ಮುಂದುವರೆಸಿಕೊಂಡು ಹೋಗುತ್ತಿರುವವರಲ್ಲಿ ರಕ್ಷಿತಾ ಪ್ರೇಮ್ ಕೂಡ ಒಬ್ರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಅನೇಕರು ಜೈಲು ಪಾಲಾಗಿದ್ದರು. ಹಲವು ತಿಂಗಳು ಜೈಲುವಾಸ ಅನುಭವಿಸಿದ್ದ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತು. ಜೈಲಲ್ಲಿದ್ದಾಗ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ದರ್ಶನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಬೆನ್ನುನೋವು ಇನ್ನೂ ಇರುವ ಕಾರಣ ಈ ಬಾರಿ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದು ವೀಡಿಯೋ ಮಾಡಿ ದರ್ಶನ್ ತಿಳಿಸಿದ್ದರು. ನೀವು ಇದ್ದಲ್ಲಿಂದಲೇ ವಿಶ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.