ತರುಣ್ ಸುಧೀರ್ ಹೊಸ ಕಾರನ್ನು 300 ಸ್ಪೀಡ್ ನಲ್ಲಿ ಡ್ರೈವ್ ಮಾಡಿದ ದರ್ಶನ್; ಕನ್ನಡಿಗರು ಫಿದಾ

ತರುಣ್ ಸುಧೀರ್ ಯಾರಿಗೆ ತಾನೇ ಗೊತ್ತಿಲ್ಲಾ. ನಟ ಸುಧೀರ್ ಪುತ್ರ ಎಂದು ಗುರುತಿಸಿಕೊಳ್ಳದೆ ನಿರ್ದೇಶಕರಾಗಿ ಹೆಚ್ಚಿನ ಹೆಸರು ಸಂಪಾದಿಸಿದ ಇವರು ಮಹಾನಟಿ ಕಾರ್ಯಕ್ರಮಕ್ಕೂ ಜಡ್ಜ್ ಆಗಿ ಕಿರುತೆರೆಗೆ ಇತ್ತೀಚಿಗಷ್ಟೇ ಎಂಟ್ರಿ ನೀಡಿದ್ದಾರೆ. ಇನ್ನು ಇವರು ನಿರ್ದೇಶಿಸಿದ ಸಿನಿಮಾಗಳೆಲ್ಲ ಒಂದಕ್ಕಿಂತ ಒಂದು ವಿಭಿನ್ನ ಹಾಗೂ ಉತ್ತಮವಾದದು.
ಬಾಕ್ಸ್ ಆಫೀಸ್‌ನಲ್ಲಿ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿದೆ. 200 ಕೋಟಿಗೂ ಅಧಿಕ ಕಮಾಯಿ ಮಾಡಿದೆ. ಅದಾದ ಬಳಿಕ ಒಟಿಟಿಯಲ್ಲೂ ಹವಾ ಎಬ್ಬಿಸಿ, ಇನ್ನೇನು ಕಿರುತೆರೆಯಲ್ಲೂ ಸಿನಿಮಾ ಪ್ರಸಾರ ಕಾಣಲಿದೆ. ಈಗ ಇದೇ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಹೊಸ ಕಾರ್ ಖರೀದಿಸಿದ್ದಾರೆ. ದುಬಾರಿ ಬಜೆಟ್‌ನ BMW X1 ಮಾಡೆಲ್ ಕಾರು ಇದಾಗಿದ್ದು, ಅಮ್ಮನ ಕೈಯಿಂದ ಅನಾವರಣಗೊಂಡರೆ, ನಟ ದರ್ಶನ್ ಹೊಸ ಕಾರನ್ನು ಓಡಿಸಿ ಶುಭ ಕೋರಿದ್ದಾರೆ.
ಹೌದು, ಕಾಟೇರ ಸಿನಿಮಾ ಮೂಲಕ ಯಶಸ್ಸು ಪಡೆದ ನಿರ್ದೇಶಕ ತರುಣ್ ಸುಧೀರ್, ಇದೀಗ ಹೊಸ ಕಾರ್‌ನ ಓನರ್ ಆಗಿದ್ದಾರೆ. ತಮ್ಮ ಮನೆಗೆ BMW ಕಾರ್ ಕೊಂಡೊಯ್ದಿದ್ದಾರೆ. ಕಾರ್ ಶೋರೂಮ್‌ಗೆ ಅಮ್ಮನ ಜತೆ ಬಂದ ತರುಣ್, ಅಮ್ಮನ ಕೈಯಿಂದಲೇ ಕಾರ್‌ನ ಅನಾವರಣ ಮಾಡಿಸಿದ್ದಾರೆ. ಇದಷ್ಟೇ ಅಲ್ಲ ಇದೇ ಕಾರನ್ನು ಅಣ್ಣ ದರ್ಶನ್ ಅವರಿಗೂ ತೋರಿಸಿದ್ದಾರೆ. ಬಳಿಕ ಅವರ ಕಡೆಯಿಂದಲೂ ಒಂದು ರೌಂಡ್ ಕಾರ್ ಹೊಡೆಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಬೆಂಗಳೂರಿನ ಮೋಹನ್ ಬಿ ಕೆರೆಯಲ್ಲಿ ಡೆವಿಲ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ನಟ ದರ್ಶನ್ ಅವರ ಕೈಗೆ ನೋವಾಗಿದೆ. ಆ ನೋವಿನಲ್ಲಿಯೇ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರವರು. ಅದೇ ಶೂಟಿಂಗ್ ಸ್ಥಳಕ್ಕೆ ತೆರಳಿದ ತರುಣ್ ಸುಧೀರ್, ದರ್ಶನ್ ಅವರಿಗೂ ಕಾರ್ ತೋರಿಸಿದ್ದಾರೆ.
ಅಷ್ಟೇ ಅಲ್ಲ ಕೈ ನೋವಿನ ನಡುವೆಯೂ ಅಲ್ಲಿಯೇ ಒಂದು ರೌಂಡ್ ಕಾರ್ ಓಡಿಸಿದ್ದಾರೆ ದರ್ಶನ್. ಈ ವಿಡಿಯೋನ್ನು ಸ್ವತಃ ತರುಣ್ ಸುಧೀರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.