ಕಾಟೇರ ಯಶಸ್ವಿ ಖುಷಿಯಲ್ಲಿ ಪತ್ನಿ ಜೊತೆ ದುಬೈಗೆ ಹಾರಿದ ದರ್ಶನ್, ರಾತ್ರಿ ಹಗಲು ಎನ್ನದೆ ಪಾರ್ಟಿ

 | 
G

ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಕಾಟೇರ ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಈಗ ಅವರು ಹೆಂಡತಿ  ವಿಜಯಲಕ್ಷ್ಮಿ ಅವರೊಂದಿಗೆ ದುಬೈ, ABROAD ಪ್ರವಾಸದಲ್ಲಿ ಹುಲಿ, ಹಾವು, ಪ್ರಾಣಿಗಳ ಜೊತೆ ಸಮಯ ಕಳೆದಿದ್ದಾರೆ. ದರ್ಶನ್ ಅವರಿಗೆ ಪ್ರಾಣಿ-ಪಕ್ಷಿ ಎಂದರೆ ತುಂಬ ಇಷ್ಟ. ಬೇರೆ ರಾಜ್ಯ, ದೇಶಕ್ಕೆ ಹೋದರೆ ದರ್ಶನ್ ಅವರು ಪ್ರಾಣಿ-ಪಕ್ಷಿಗೆ ಬೇಕಾದ ವಸ್ತುಗಳನ್ನು ಖರೀದಿಸಿ ತರುತ್ತಾರಂತೆ. ಹೀಗಂತ ಅವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಕಾಟೇರ ಸಕ್ಸಸ್ ಬೆನ್ನಲ್ಲೇ ದುಬೈನಲ್ಲಿ ದರ್ಶನ್ ತಮ್ಮ ಆಪ್ತರು ಹಾಗೂ ತಂಡದೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ದರ್ಶನ್ ಸ್ನೇಹಿತರೊಂದಿಗೆ ಬೋಟ್‌ನಲ್ಲಿ ನಿಂತು ಪೋಸ್ ಕೊಟ್ಟಿದ್ದರು. ಆದ್ರೀಗ ಸೀದಾ ದುಬೈನ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿನ ಪ್ರಾಣಿಗಳೊಂದಿಗೆ ಕೆಲ ಹೊತ್ತು ಸುತ್ತಾಡಿ ಬಂದಿದ್ದಾರೆ. ದುಬೈನ ಮೃಗಾಲಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿಯೇ ಹುಲಿಯ ಮೈ ಸವರಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿದೆ. 

ಹುಲಿ ಮೈ ಸವರುತ್ತಿರುವ ದರ್ಶನ್ ವಿಡಿಯೋಗೆ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹುಲಿ ಜೊತೆ ಜೊತೆಗೆ ದರ್ಶನ್ ಹಾವನ್ನು ಕೊರಳಿಗೆ ಸುತ್ತಿಕೊಂಡು ಪೋಸ್ ಕೊಟ್ಟಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾಕ್ಕೆ ಮಾಲಾಶ್ರೀ ಪುತ್ರಿ ಆರಾಧನಾ ಅವರು ನಾಯಕಿಯಾಗಿದ್ದಾರೆ. ಈ ಚಿತ್ರ ದರ್ಶನ್ ಅವರ ಸಿನಿ ಕರಿಯರ್‌ನಲ್ಲಿ ಅತ್ಯುತ್ತಮ ಸಿನಿಮಾ ಎಂದು ಹೇಳಲಾಗಿದೆ. ಕಾಟೇರ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ವೀಕ್ಷಕರು ಕೂಡ ಫುಲ್ ಖುಷಿಯಾಗಿದ್ದಾರೆ.

ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಫಸಲು ತೆಗೆದ ಕಾಟೇರ ಸಿನಿಮಾ, ನೂರು ಕೋಟಿಗೂ ಅಧಿಕ ಕಮಾಯಿ ಮಾಡಿದೆ. ಕರ್ನಾಟಕದಲ್ಲಷ್ಟೇ ಅಲ್ಲದೆ, ವಿದೇಶಿ ನೆಲದಲ್ಲೂ ಕಹಳೆ ಮೊಳಗಿಸುತ್ತಿದೆ. ದೂರದ ದುಬೈನಲ್ಲೂ ಅಲ್ಲಿನ ಕನ್ನಡಿಗರ ಗಮನ ಸೆಳೆದಿದೆ ಕಾಟೇರ ಸಿನಿಮಾ. ತಾವೂ ಸಹ ತಮ್ಮ ತಂಡದ ಜತೆಗೆ ದುಬೈಗೆ ತೆರಳಿ, ಸಿನಿಮಾ ಪ್ರಮೋಷನ್‌ ಮಾಡಿದ್ದಾರೆ. ದುಬೈ ಕನ್ನಡಿಗರಿಂದ ಕರುನಾಡ ಅಧಿಪತಿ ಅನ್ನೋ ಬಿರುದನ್ನೂ ಪಡೆದುಕೊಂಡಿದ್ದಾರೆ. ಇದೀಗ ಅಲ್ಲಿಂದಲೇ ಆತ್ಮೀಯರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.