ಜೈ ಲಲ್ಲಿ ಆತ್ಮಾವಲೋಕನ ಮಾಡಿಕೊಂಡ ದ ರ್ಶನ್; ಹೊರಬಂದ ಬಳಿಕ ಸಿನಿಮಾದಿಂದ ದೂರ ಉಳಿಯಲು ಪ್ರಯತ್ನ

 | 
Gh

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಅದ್ಯಾವಾಗ ಹೊರ ಬರುತ್ತಾರೋ ಗೊತ್ತಿಲ್ಲ. ತಪ್ಪತಸ್ಥನೆಂದು ಕೋರ್ಟಲ್ಲಿ ಸಾಬೀತಾದರೆ ಶಿಕ್ಷೆಯೂ ಪ್ರಕಟವಾಗುತ್ತೆ. ಆದರೂ, ಅಭಿಮಾನಿಗಳಿಗೆ ನಟ ಮರಳಿ ಬರುವ ನಿರೀಕ್ಷೆ ಬೆಟ್ಟದಷ್ಟಿದೆ. ಅದಕ್ಕಾಗಿ ನಿತ್ಯ ಪ್ರಾರ್ಥನೆಯಾಗುತ್ತಿದೆ.

 ಜೊತೆಗೆ ಇನ್ನು ಕನ್ನಡ ಚಿತ್ರರಂಗದಲ್ಲಿ ಮುಂದುವರಿಯುವುದು ಬೆಂಡವೆಂದೂ ಈ ಫ್ಯಾನ್ಸ್ ಸಲಹೆ ನೀಡಲು ಶುರು ಮಾಡಿದ್ದಾರೆ. ಅಶ್ಲೀಲ ಮೆಸೇಜ್ ಮಾಡಿದ್ದ ಕಾರಣಕ್ಕಾಗಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬರ್ಬರ ಹತ್ಯೆ ಮಾಡಿದ ಆರೋಪದ ಮೇಲೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 14 ದಿನಗಳು ಆಗಿವೆ. 

ಪ್ರೇಕ್ಷಕರನ್ನ ರಂಜಿಸಬೇಕಿದ್ದ ದರ್ಶನ್​ ಮೇಲೆ ಈಗ ಕೊಲೆ ಗಡುಕ ಅನ್ನೋ ಆರೋಪ ಬಂದಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರು ಕೊಲೆ ಕೇಸಿನಲ್ಲಿ ಆರೊಪಿಯಾಗಿ ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿ ದಿನಕಳೆಯುತ್ತಿದ್ದಾರೆ. ನಟ ದರ್ಶನ್ ಹಾಗು ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟೂ ಹದಿನೇಳು ಜನರು ಸದ್ಯ ಆರೋಪಿಗಳಾಗಿ ಜೈಲಿನಲ್ಲಿ ಇದ್ದಾರೆ. 

ದರ್ಶನ್ ಅಭಿಮಾನಿಯೊಬ್ಬರು ಮಾಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ಸದ್ಯ ಭಾರೀ ವೈರಲ್ ಆಗುತ್ತಿದೆ. ಅದನ್ನು ಓದಿದರೆ ಯಾರಿಗಾದರೂ ಒಮ್ಮೆ ಅಚ್ಚರಿ ಆಗದೇ ಇರದು. ನೀನು ತಪ್ಪು ಮಾಡಿದ್ಯಾ ಮಾಡಿಲ್ವಾ ಅನ್ನೋದನ್ನ ಕೋರ್ಟ್‌ ತೀರ್ಮಾನ ಮಾಡುತ್ತೆ. ಆದ್ರೆ ಮುಂದೆ ನಮ್ಮ ಕನ್ನಡಕ್ಕೆ ಮಾತ್ರ ಸೀಮಿತ ಅಂತ ಮಾತ್ರ ಹೇಳ್ಬೇಡ ಕಣಯ್ಯಾ.. ಇಲ್ಲಿನ ಜನಕ್ಕೆ ನಿಯತ್ತು ಇಲ್ಲ. ನಿನ್ನ ಅಭಿಮಾನಿಗಳನ್ನ ಬಿಟ್ಟರೆ ನಿನಗೆ ಒಳ್ಳೆಯದನ್ನು ಬಯಸೋರು ಯಾರೂ ಇಲ್ಲ. ನೀನೂ ಎಲ್ಲರ ತರಹ ಬೇರೆ ಭಾಷೆಗೆ ಹೋಗಿ ಅಲ್ಲೇ ಇದ್ದು ಬಿಡು ಎಂದಿದೆ. 

ನಟ ದರ್ಶನ್ ಅಪ್ಪಟ ಅಭಿಮಾನಿ ಎನ್ನುವ ವ್ಯಕ್ತಿಯೊಬ್ಬರು ಹೀಗೆ ಬರೆದಿರಬಹುದು ಎಂಬುದನ್ನು ಯಾರಾದರೂ ಊಹಿಸಬಹುದು. ಆದರೆ, ನಿರೀಕ್ಷಿತ ಎಂಬಂತೆ , ಆ ಪೋಸ್ಟ್‌ಗೆ ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಬಂದಿವೆ. ಅದರಲ್ಲಿ ಒಬ್ಬರು ಬೇರೆ ಭಾಷೆಗೆ ಕರೀಲಿಲ್ಲ, ಅದಕ್ಕೇ ಹೋಗಿಲ್ಲ..ಎಂದು ಬರೆದಿದ್ದಾರೆ. ಆದರೆ ಅದು ಸುಳ್ಳು ಸಂಗತಿ ಎನ್ನಬಹುದು. 

ಕಾರಣ, ಬೇರೆ ಭಾಷೆಯ ಚಿತ್ರರಂಗದಿಂದ ನಟ ದರ್ಶನ್ ಅವರಿಗೆ ಸಾಕಷ್ಟು ಕರೆಗಳು ಬಂದಿದ್ದರ ಬಗ್ಗೆ ಸ್ವತಃ ನಟ ದರ್ಶನ್ ಹಲವಾರು ಬಾರಿ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.