ದರ್ಶನ್ ಒಬ್ಬ ಶತ ದಡ್ಡ, ಬಿಗ್ ಬಾಸ್ ಜಗದೀಶ್ ಗರಂ

 | 
ರಗ
 ಕೊಲೆ ಕೇಸಲ್ಲಿ ಜೈಲು ಸೇರಿರುವ ನಟ ದರ್ಶನ್ ಜಾಮೀನು ಭವಿಷ್ಯ ಹೈಕೋರ್ಟ್ ನಲ್ಲಿ ಇಂದು ನಿರ್ಧಾರ ಆಗಲಿದೆ. ಜಾಮೀನಿನ ಜೊತೆಗೆ ಬೆನ್ನುನೋವಿಗೆ ಸರ್ಜರಿ ಬಗ್ಗೆಯೂ ನಿರ್ಧಾರ ಆಗುತ್ತೆ. ದರ್ಶನ್ ಪರ ವಕೀಲರು ಮೆಡಿಕಲ್ ಗ್ರೌಂಡ್ಸ್ ಇಟ್ಟುಕೊಂಡು ಜಾಮೀನಿಗೆ ಮನವಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ.
ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್ ಜೈಲು ಸೇರಿ ಬರೋಬ್ಬರಿ 5 ತಿಂಗಳಾಗುತ್ತಿದೆ. ಬಳ್ಳಾರಿ ಜೈಲಲ್ಲಿ ಪ್ರತಿಕ್ಷಣವೂ ದಾಸ ರೌರವ ನರಕ ಅನುಭವಿಸ್ತಿದ್ದಾರೆ. ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಕಾಟೇರ ಕುಳಿತುಕೊಳ್ಳಲಾಗದೇ, ನಿಂತುಕೊಳ್ಳಲು ಆಗದೇ, ಮಲಗಿಕೊಳ್ಳಲಾಗದೇ ಬೆನ್ನುನೋವಿನಿಂದ ಬಳಲಿ ಬೆಂಡಾಗಿದ್ದಾರೆ.ವಾರಕ್ಕೊಮ್ಮೆ ಪತ್ನಿ ಹಾಗೂ ಆಪ್ತರು ತಂದುಕೊಡೋ ಹಣ್ಣು, ಡ್ರೈಫ್ರೂಟ್ಸ್ ತಿಂದು ಜೈಲಿನಲ್ಲಿರೋ ದರ್ಶನ್‌, ಯಾವಾಗ ರಿಲೀಸ್ ಆಗ್ತೇನೆ ಎಂದು ಕಾಯ್ತಿದ್ದಾರೆ.
ಇಂದು ಹೈಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಕೋರ್ಟ್ ಸೂಚನೆಯಂತೆ ಜೈಲಾಧಿಕಾರಿಗಳು ದರ್ಶನ್ ಹೆಲ್ತ್‌ ರಿಪೋರ್ಟ್‌ ಸಲ್ಲಿಸಲಿದ್ದಾರೆ. ಈಗಾಗಲೇ ಕಾಟೇರನಿಗೆ ಎಂಆರ್‌ಐ ಸ್ಕ್ಯಾನ್ ಮಾಡಿರೋ ಬಿಮ್ಸ್ ವೈದ್ಯರು, ಮೆಡಿಕಲ್ ರಿಪೋರ್ಟ್‌ನ್ನ ಜೈಲಾಧಿಕಾರಿಗಳಿಗೆ ನೀಡಿದ್ದಾರೆ. 
ಇಂದು ಜೈಲಾಧಿಕಾರಿಗಳು ಕೋರ್ಟ್‌ಗೆ ದರ್ಶನ್‌ರ ಮೆಡಿಕಲ್ ಹೆಲ್ತ್‌ ರಿಪೋರ್ಟ್‌ ಸಲ್ಲಿಕೆ ಮಾಡಲಿದ್ದಾರೆ. ಇನ್ನು ನಟ ದರ್ಶನ್ ದಡ್ಡ ಎಂದು ಲಾಯರ್ ಜಗದೀಶ್ ಬೈದಿದ್ದಾರೆ. ಅವರು ಸುಮ್ಮನೆ ಕೈ ತೊಳೆದು ಕೊಳ್ಳಬಹುದುತ್ತು. ಆದರೆ ಅವರು ಮೈಮೇಲೆ ಎಳೆದುಕೊಂಡು ಜೈಲು ಸೇರಿದ್ದಾರೆ.
ಇನ್ನು ಮೂಲಗಳ ಪ್ರಕಾರ ದರ್ಶನ್ ಹೆಲ್ತ್‌ ರಿಪೋರ್ಟ್‌ನಲ್ಲಿ ಬೆನ್ನುನೋವಿನ ಸಮಸ್ಯೆ ಇರೋದು ದೃಢವಾಗಿದ್ದು, ಸರ್ಜರಿ ಬಗ್ಗೆ ಉಲ್ಲೇಖವಿಲ್ಲ ಅಂತಾ ಹೇಳಲಾಗ್ತಿದೆ. ಇದರ ನಡುವೆಯೇ ಶೀಘ್ರವೇ ದರ್ಶನ್​ಗೆ ಗುಡ್​ನ್ಯೂಸ್​ದರ್ಶನ್‌ಗೆ ಶೀಘ್ರವೇ ಗುಡ್‌ನ್ಯೂಸ್ ಸಿಗಲಿದ್ಯಂತೆ.ಎರಡು FIR ಪೈಕಿ ಒಂದರಲ್ಲಿ ದರ್ಶನ್​ಗೆ ರಿಲೀಫ್​ ಸಿಗುವ ಸಾಧ್ಯತೆ ಇದೆ.
 ರಾಜಾತಿಥ್ಯ ಕೇಸ್​ನಲ್ಲಿ ದರ್ಶನ್ ವಿರುದ್ಧ 2 FIR ದಾಖಲಾಗಿತ್ತು. ಒಂದು ರೌಡಿಶೀಟರ್ ಜೊತೆ ಕಾಫಿ, ಸಿಗರೇಟ್ ಸೇವನೆ ಹಾಗೂ ಮತ್ತೊಂದು ರೌಡಿಶೀಟರ್‌ಗೆ ವಿಡಿಯೋ ಕಾಲ್ ಕೇಸ್ ದಾಖಲಾಗಿತ್ತು ಈ ಪೈಕಿ 2ನೇ ಕೇಸ್​ನಲ್ಲಿ ದರ್ಶನ್​ಗೆ ಗುಡ್​ ನ್ಯೂಸ್​ ಸಿಗುವ ಸಾಧ್ಯತೆ ಇದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.