'ದರ್ಶನ್ ನನಿಗೆ ಬಾಸ್ ಅಲ್ಲ ಸ್ವಾಮಿ' ಇದುವರೆಗೂ ಯಾವುದೇ ಸಹಾಯ ಮಾಡಿಲ್ಲ ಆ ಮನುಷ್ಯ

 | 
H

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಒಂದೇ ತಿಂಗಳ ಕಾಲ ಸ್ಪರ್ಧಿಯಾಗಿದ್ದು, ಹೊರಬಂದಿದ್ದಾರೆ ರಕ್ಷಕ್‌. ಅಸಮರ್ಥರಾಗಿ ಬಿಗ್‌ಬಾಸ್‌ ಮನೆ ಸೇರಿದ್ದ ರಕ್ಷಕ್‌ ಒಂದೇ ವಾರದಲ್ಲಿ ಆ ಹಣೆಪಟ್ಟಿಯಿಂದ ಆಚೆ ಬಂದು, ಸಾಮಾನ್ಯ ಸ್ಪರ್ಧಿಯಂತೆ ಎಲ್ಲ ಟಾಸ್ಕ್‌ಗಳಲ್ಲೂ ಭಾಗವಹಿಸಿದ್ದರು. ಇದೀಗ ರಕ್ಷಕ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವಿಚಾರವೊಂದು ಹರಿದಾಡುತ್ತಿದೆ. ಅದೇನೆಂದರೆ ಅಪ್ಪ ಬುಲೆಟ್‌ ಪ್ರಕಾಶ್‌ ಕಟ್ಟಿಸಿದ್ದ ಮನೆ ಮಾರಿದ ವಿಚಾರ!

ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ತಮ್ಮ ನಟನೆಯಿಂದಲೇ ಗುರುತಿಸಿಕೊಂಡಿದ್ದ ಬುಲೆಟ್‌ ಪ್ರಕಾಶ್‌, ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಗಾಡ್‌ ಫಾದರ್‌ ಇಲ್ಲದೆ, ಸಾಮಾನ್ಯ ವ್ಯಕ್ತಿಯಾಗಿ ಬಂದು ಕನ್ನಡದ ಕಾಮಿಡಿ ನಟನಾಗಿ ಮಿಂಚಿ, ಎಲ್ಲರ ಜನಮಾನಸದಲ್ಲಿ ಉಳಿದಿದ್ದಾರೆ. ಹೀಗೆ ಸಿನಿಮಾರಂಗದಲ್ಲಿ ದುಡಿದು, ಅದರಿಂದ ಬಂದ ಹಣದಿಂದಲೇ ಬೆಂಗಳೂರಿನ ಹೆಬ್ಬಾಳದ ಬಳಿಕ ಸ್ವಂತ ಕನಸಿನ ಮನೆ ನನಸಾಗಿಸಿಕೊಂಡಿದ್ದರು. ಆ ಮನೆಯನ್ನೇ ಪುತ್ರ ರಕ್ಷಕ್‌ ಕೆಲ ತಿಂಗಳ ಹಿಂದೆಯೇ ಮಾರಿದ್ದಾರೆ.

ಇದೀಗ ಇದೇ ಮನೆ ಮಾರಿದ್ದು ಏಕೆ ಎಂಬುದನ್ನು ಸ್ವತಃ ರಕ್ಷಕ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಪ್ಪನ ನೆನಪು ತುಂಬ ಕಾಡುತ್ತಿತ್ತು. ಹಾಗಾಗಿ ಮನೆ ಮಾರಬೇಕಾಯಿತು. ಕಾಮೆಂಟ್‌ ಹಾಕುವವರೂ ಅನಿಸಿದ್ದೆಲ್ಲ ಹಾಕುತ್ತಾರೆ. ನಮ್ಮ ಸ್ಥಿತಿಗತಿ ಅವರಿಗೆ ಗೊತ್ತಿರುವುದಿಲ್ಲ. ನಾನು ತೆಗೆದುಕೊಂಡ ನಿರ್ಧಾರ, ನನಗಷ್ಟೇ ಅಲ್ಲದೆ, ನಮ್ಮ ಮನೆಯವರೂ ಒಪ್ಪಿದ್ದಾರೆ. ಹಾಗಾಗಿ ಈ ನಿರ್ಧಾರಕ್ಕೆ ಬಂದೆ ಎಂದಿದ್ದಾರೆ.

ನನಗೆ ಯಾರೂ ಕೂಡ ಸಹಾಯ ಮಾಡಿಲ್ಲ. ಅಪ್ಪನ ಸಾವಿನ ನಂತರ ಮನೆಯ ಜವಾಬ್ದಾರಿ ನನ್ನ ಮೇಲಿದೆ. ದರ್ಶನ್ ಸರ್ ನನ್ನ ಬಾಸ್ ಅಲ್ಲ ನಾನವರ ಶಿಷ್ಯನೂ ಅಲ್ಲ. ಆ ಮನೆಯಲ್ಲಿ ಅಪ್ಪನ ನೆನಪು ತುಂಬ ಕಾಡುತ್ತಿತ್ತು. ಹಾಗಾಗಿ ಕುಟುಂಬದ ಒಪ್ಪಿಗೆ ಮೇರೆಗೆ ಮನೆ ಮಾರಿದೆ. ಹಾಗಂತ ಆ ಮನೆ ಮಾರಿ ನಾನೇನು ಹಣ ಹಾಳು ಮಾಡಿಲ್ಲ. ಅದೇ ದುಡ್ಡಲ್ಲಿ, ಅದ್ದೂರಿಯಾಗಿ ನನ್ನ ಅಕ್ಕನ ಮದುವೆ ಮಾಡಿದ್ದೇನೆ. 

ಅದಕ್ಕೂ ಒಂದಷ್ಟು ಮಾತು ಬಂದವು, ಅವರು ದುಡ್ಡು ಕೊಟ್ಟರು, ಇವರು ಕೊಟ್ಟರು ಅಂತ.. ಯಾರೂ ದುಡ್ಡು ಕೊಟ್ಟಿಲ್ಲ. ನಮ್ಮಪ್ಪನ ಮನೆ ಮಾರಿದ್ರಲ್ಲಿಯೇ ಅಕ್ಕನ ಮದುವೆ ಮಾಡಿದ್ದೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.