ಹೆಂಡತಿಗೆ ಮುತ್ತಿಟ್ಟು ಕೋಟಿ ಬೆಲೆಯ ಉಂಗುರ ತೊಡಿಸಿದ ದರ್ಶನ್;

 | 
He

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಕಳೆದ ಮೇ 19ರಂದು ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು ಈ ಬಗ್ಗೆ ಅವರ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು 2003ರ ಮೇ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಮೇ 19ಕ್ಕೆ 21 ವರ್ಷವಾಗಿದ್ದು ದುಬೈಗೆ ತೆರಳಿ ಇಬ್ಬರು ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. 

ಇವರ ಮದುವೆ ಧರ್ಮಸ್ಥಳದ ವಸಂತ್ ಮಹಲ್‌ನಲ್ಲಿ ನಡೆದಿತ್ತು. ಇದೀಗ ಈ ದಂಪತಿಗಳ ಬಾಂಧವ್ಯ 21ನೇ ವರ್ಷಕ್ಕೆ ಬಂದಿದೆ. ಈ ದಾಂಪತ್ಯ ಜೀವನದಲ್ಲಿ ಸುಖ ದಃಖವನ್ನ ಕಂಡಿರೋ ದರ್ಶನ್ ವಿಜಯಲಕ್ಷ್ಮಿ ತಮ್ಮ ವಿವಾಹ ವಾರ್ಷಿಕೋತ್ಸವನ್ನ ಆಚರಿಸಿಕೊಂಡಿದ್ದಾರೆ. ಆ ವಿಡಿಯೋವನ್ನ ನಟ ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚುತ್ತಿದ್ದಾರೆ.

ಇತ್ತೀಚೆಗೆ ನಟ ದರ್ಶನ್ ಕಾರ್ಯಕ್ರಮ ಒಂದರಲ್ಲಿ ಇವತ್ತು ಇವಳಿರುತ್ತಾಳೆ ನಾಳೆ ಅವಳು ಇರುತ್ತಾರೆ ಅಂತ ಡೈಲಾಗ್ ಹೊಡೆದು ಪೇಚೆಗೆ ಸಿಲುಕಿದ್ರು, ದರ್ಶನ್ ವಿರುದ್ಧ ಮಹಿಳಾ ಸಂಘಟನೆಗಳು ದೂರು ನೀಡಿದ್ರು, ಆದ್ರೆ ಈಗ ದರ್ಶನ್ ತನ್ನ ಪತ್ನಿ ಜೊತೆ ವಿವಾದ ವಾರ್ಷಿಕೋತ್ಸವ ಮಾಡಿಕೊಂಡು ಆವತ್ತು ಇವತ್ತು ಮುಂದೆಯೂ ಇವಳೇ ಇರುತ್ತಾಳೆ ಅಂತ ತೋರಿಸಿದ್ದಾರೆ. 

ತನ್ನ ಫ್ಯಾಮಿಲಿ ಸಮೇತ ದುಬೈಗೆ ಹಾರಿದ್ದ ದರ್ಶನ್ ತನ್ನ ಪ್ರೀತಿಯ ಮಡದಿಗೆ ಉಂಗುರ ಹಾಕಿ ಕೇಕ್ ತಿನ್ನಿಸಿ ವೆಡ್ಡಿಂಗ್ ಆನಿವರ್ಸರಿ ಆಚರಿಸಿದ್ದಾರೆ. ದುಬೈನಲ್ಲಿ ನಟ ದರ್ಶನ್‌ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ದರ್ಶನ್ ದುಬೈಗೆ ಹೋಗಿ ಬಂದಿದ್ರು. ಈ ಭಾರಿ ಪತ್ನಿ ಸಮೇತ ದುಬೈಗೆ ಹೋಗಿದ್ದ ದರ್ಶನ್ಗೆ ಪ್ಯಾನ್ಸ್ ಸರ್ಪ್ರೈಸ್ ಕೊಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.