ಒಂಟಿ ರೂಮ್ ಅಲ್ಲಿ ದರ್ಶನ್ ವಾಸ್ತವ್ಯ; ಮಾಧ್ಯಮದ ಮುಂದೆ ಶಿವಣ್ಣ ಕಣ್ಣೀ ರು

 | 
Hui

ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ವಿಚಾರಣಾಧೀನ ಖೈದಿಯಾಗಿ ಜೈಲು ಸೇರಿದ್ದಾರೆ. ದೇಶದೆಲ್ಲೆಡೆ ಈ ಕೊಲೆ ಪ್ರಕರಣ ಸಂಚಲನ ಮೂಡಿಸಿದೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ ರವರು ದರ್ಶನ್ ಕೊಲೆ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ.

ನಟ ದರ್ಶನ್ ಪ್ರಕರಣ ಕುರಿತಂತೆ ಮೊದಲ ಬಾರಿಗೆ ನಟ ಶಿವರಾಜ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಮನುಷ್ಯನ ಹಣೆಬರಹವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಲ್ಲಿ ತಪ್ಪು ಸರಿ ಅನ್ನಲು ನಾವ್ಯಾರೂ ಅಲ್ಲ ಎಂದಿದ್ದಾರೆ.

ರವಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಂತಹ ಘಟನೆಗಳು ಆದಾಗ ತುಂಬಾ ನೋವಾಗುತ್ತದೆ. ಯಾಕಪ್ಪಾ ಹೀಗಾಯಿತು ಎಂದು ಬೇಸರ ಆಯಿತು. ರೇಣುಕಾಸ್ವಾಮಿ ಕುಟುಂಬಕ್ಕೆ, ದರ್ಶನ್‌ ಅವರ ಕುಟುಂಬಕ್ಕೆ ನೋವಾಗುತ್ತದೆ. ಮಕ್ಕಳು ಮಹಿಳೆಯರಿಗೆ ಆತ್ಮವಿಶ್ವಾಸವೇ ಕುಗ್ಗಿ ಹೋಗುತ್ತದೆ.

ದರ್ಶನ್‌ ಮಗನ ಬಗ್ಗೆ ಬೇಸರ ಆಗುತ್ತಿದೆ. ನಾವು ಎಲ್ಲವನ್ನೂ ಎದುರಿಸಬೇಕು. ಈಗಾಗಲೇ ತನಿಖೆ ಆರಂಭವಾಗಿದೆ. ನ್ಯಾಯ ಏನಿದೆಯೋ ಅದೇ ಆಗುತ್ತದೆ ಎಂದರು. ಏನಿದೆಯೋ ಅದು ಆಗುತ್ತದೆ. ಇದೆಲ್ಲ ಹಣೆಬರಹ ನಾವೇನು ಮಾಡೋಕಾಗಲ್ಲ. ನಾವ್ ಏನ್ ಮಾಡ್ತೀವಿ ಅದು ಸರಿನಾ ಅಂತ ಯೋಚನೆ ಮಾಡಬೇಕು. 

ಈ ಘಟನೆಯಿಂದ ರೇಣುಕಾಸ್ವಾಮಿ ಫ್ಯಾಮಿಲಿಗೆ ಆಗಲಿ, ದರ್ಶನ್ ಅವರ‌ ಫ್ಯಾಮಿಲಿಗೆ ಆಗಲಿ ನೋವಾಗಿರುತ್ತೆ. ಈಗ ಮಾತಾಡಿ ಪ್ರಯೋಜನ ಇಲ್ಲ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.