ನನ್ನ‌ ಹೆಂಡತಿ ಮುದ್ದು ರಾಕ್ಷಿಸಿ ಕಂಡ್ರಿ, ಮುಲಾಜಿಲ್ಲದೆ ಪತ್ನಿ ಬಗ್ಗೆ ದರ್ಶನ್ ಖಡಕ್ ಮಾತು

 | 
Nx
ಬದುಕಿನಲ್ಲಿ ಯಾವುದು ಕೂಡ ಇದ್ದಂತೆ ಇರುವುದಿಲ್ಲ. ಎಲ್ಲ ಬದಲಾಗುತ್ತದೆ.ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ ವಾಮನನಾಗಿ ಏಪ್ರಿಲ್ 10ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೇಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆಯ ಕನ್ನಡ ಸಿನಿಮಾಗಳಿಗೆ ನಮ್ಮ ಸೆಲೆಬ್ರಿಟಿಗಳ ಪ್ರೋತ್ಸಾಹ ಎಂದಿನಂತೆ ಸದಾ ಬೆನ್ನೆಲುಬಾಗಿ ನಿಂತರಲಿ ಎಂದು ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
 ಅಲ್ಲದೇ ವಾಮನ ಟ್ರೇಲರ್ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.ನಾನು ಧನ್ವೀರ್ ಅವರನ್ನು ಬೇರೆ ಬೇರೆ ರೀತಿ ನೋಡಿದ್ದೇನೆ. ಬಜಾರ್ ಸಿನಿಮಾದಲ್ಲಿ ಒಂದು ರೀತಿ ನೋಡಿದೆ, ಬೈಟು ಲವ್ ಚಿತ್ರದಲ್ಲಿ ಬೇರೆ ರೀತಿ ನೋಡಿದೆ. ಅವರ ಕೈವ ಸಿನಿಮಾ ನನಗೆ ತುಂಬ ಇಷ್ಟವಾಗಿತ್ತು. ಈಗ ವಾಮನ ನೋಡುತ್ತೇವೆ. ಈ ನಾಲ್ಕು ಸಿನಿಮಾಗಳಲ್ಲಿ ಖುಷಿ ವಿಷಯ ಏನೆಂದರೆ ಎಲ್ಲಿಯೂ ರಿಪೀಟ್ ಇಲ್ಲ. ನಾಲ್ಕು ಸಬ್ಜೆಕ್ಟ್ ಕೂಡ ಬೇರೆ ಬೇರೆ ರೀತಿ ಇದೆ. ಈಗ ವಾಮನ ತಾಯಿ ಸೆಂಟಿಮೆಂಟ್ ಇರುವ ಸಿನಿಮಾ. ತಾಯಿಗಾಗಿ, ಪ್ರೀತಿಗಾಗಿ ಒಬ್ಬ ಹೇಗೆಲ್ಲ ಬದಲಾಗುತ್ತಾನೆ ಎಂಬುದು ಇದರಲ್ಲಿದೆ ಎಂದಿದ್ದಾರೆ ದರ್ಶನ್.
ನನಗೆ ಈ ಸಿನಿಮಾದಲ್ಲಿ ಮುದ್ದು ರಾಕ್ಷಸಿ ಸಾಂಗ್ ಇಷ್ಟ. ಎಲ್ಲಿಂದ ಹುಡುಕಿದ್ದೀರಿ, ತುಂಬ ಚೆನ್ನಾಗಿದೆ ಅಂತ ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಮನೆಯಲ್ಲಿ ನನ್ನ ಹೆಂಡತಿ ಕೋಪ ಮಾಡಿಕೊಂಡರೆ ನಾನು ಕೂಡ ರೇಗಿಸುತ್ತೇನೆ. ಮುದ್ದು ರಾಕ್ಷಸಿ ಥರ ಇದ್ದೀಯ ಅಂತ ಹೇಳುತ್ತೇನೆ. ಇದು ಒಳ್ಳೆಯ ಮನರಂಜನೆ ಇರುವ ಸಿನಿಮಾ ಎಂದು ದರ್ಶನ್ ಅವರು ಹೇಳಿದ್ದಾರೆ.
ದಯಮಾಡಿ ಕನ್ನಡ ಸಿನಿಮಾಗಳನ್ನು ಬೆಳೆಸಿ. ಯಾಕೆಂದರೆ, ಎಲ್ಲರೂ ಎಲ್ಲ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆದರೆ ನಾವು ಕೆಲವರು ಮಾತ್ರ ಕನ್ನಡಕ್ಕೆ ಸೀಮಿತ ಎಂದುಕೊಂಡಿರುತ್ತೇವೆ. ಕನ್ನಡ ಸಿನಿಮಾ ನೋಡಲಿಲ್ಲ ಎಂದರೆ ನಾವು ಇಲ್ಲಿಂದ ಬಿಟ್ಟು ಬೇರೆ ಕಡೆಗೆ ಹೋಗಲ್ಲ. ನೀವು ಕೊಟ್ಟ ಆಶೀರ್ವಾದದಿಂದ ತೋಟ, ಹಸು ಮಾಡಿಕೊಂಡಿದ್ದೇವೆ. ಯಾವತ್ತಿದ್ದರೂ ನಾವು ಕನ್ನಡದಲ್ಲೇ ಸಿನಿಮಾ ಮಾಡುವುದು. ಈ ಚಿತ್ರರಂಗ ಬಿಟ್ಟು ನಮಗೆ ಬೇರೆ ಗೊತ್ತಿಲ್ಲ ಎಂದಿದ್ದಾರೆ ಡಿ ಬಾಸ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.