ಸುದೀಪ್ ಜೊತೆ ದರ್ಶನ್ ಎಂಟ್ರಿ; ದ್ವಾರಕೀಶ್ ದೇಹ ನೋಡಿ ದಾಸನ ಕೂಗಾಟ

 | 
Ue

ಸಾವು ಯಾರಿಗೆ ಯಾವಾಗ ಬೇಕಾದರೂ ಸಂಭವಿಸಬಹುದು. ಇದೀಗ ಕನ್ನಡದ ಕುಳ್ಳ ಎಂದೇ ಕರೆಸಿಕೊಳ್ಳುವ ದ್ವಾರಕೀಶ್ ಅವರು ಇಹಲೋಕ ತ್ಯಜಿಸಿದ್ದಾರೆ 5 ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಮಿಂಚಿದ ದ್ವಾರಕೀಶ್​ ನಿನ್ನೆ ಕಣ್ಮರೆಯಾಗಿದ್ದಾರೆ. ಅಭಿಮಾನಿಗಳನ್ನು ನಕ್ಕು-ನಲಿಸಿದ ಪ್ರಚಂಡ ಕುಳ್ಳ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಹಿರಿಯ ನಟ, ನಿರ್ಮಾಪಕನನ್ನು ಕಳೆದುಕೊಂಡ ನೋವು ಚಿತ್ರರಂಗವನ್ನು ಕಾಡ್ತಿದೆ. ದ್ವಾರಕೀಶ್ ನಿವಾಸಕ್ಕೆ ಕನ್ನಡ ಚಿತ್ರರಂಗದ ಗಣ್ಯರ ದಂಡೇ ಹರಿದು ಬರ್ತಿದೆ. ಅನೇಕ ಸೆಲೆಬ್ರಿಟಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ದ್ವಾರಕೀಶ್​ ಮನೆಗೆ ಆಗಮಿಸಿದ ದರ್ಶನ್​ ಹಿರಿಯ ನಟನ ಅಂತಿಮ ದರ್ಶನ ಪಡೆದಿದ್ದಾರೆ.

ಇತ್ತೀಚಿಗಷ್ಟೇ ನಟ ದರ್ಶನ್​ ಕೈಗೆ ಅಪರೇಷನ್ ಮಾಡಿಸಿಕೊಂಡಿದ್ದಾರೆ. ಕೈ ನೋವಿನಲ್ಲೂ ನಟ ದರ್ಶನ್, ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹಿರಿಯ ನಟನ ಮನೆಗೆ ಆಗಮಿಸಿದ್ರು. ದ್ವಾರಕೀಶ್ ಅಂತಿಮ ದರ್ಶನ ಪಡೆದ ದರ್ಶನ್​ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು.

ದ್ವಾರಕೀಶ್ ನಿಧನದಿಂದ ಕನ್ನಡ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿದೆ. ಇಡೀ ಸ್ಯಾಂಡಲ್​ವುಡ್  ಶೋಕ ಸಾಗರದಲ್ಲಿ ಮುಳುಗಿದೆ. ವಿಷ್ಣುವರ್ಧನ್ ಅವರ ಗೆಳೆತನ ಎಲ್ಲೆಡೆ ಮಾದರಿಯಾಗಿತ್ತು. ಇದೀಗ ಹಿರಿಯ ನಟನ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಹಾಕಿದ್ದಾರೆ. ಸ್ಟಾರ್​ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.