ಸಾಧುಕೋಕಿಲಗೆ ಹತ್ತಿರನೂ ಎಂಟ್ರಿ ಕೊಡದ ದ‌ ರ್ಶನ್;

 | 
ಹಾ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರನ್ನು ಭೇಟಿಯಾಗಲು ಪ್ರತಿದಿನ ಯಾರಾದರೊಬ್ಬರು ಪರಪ್ಪನ ಅಗ್ರಹಾರ ಜೈಲಿನತ್ತ ಹೋಗುತ್ತಲೇ ಇರುತ್ತಾರೆ. ಸೋಮವಾರ ದರ್ಶನ್ ಕುಟುಂಬದವರ ಜೊತೆಗೆ ನಟ ವಿನೋದ್ ರಾಜ್ ಹೋಗಿದ್ದರು. ನಟ ಮತ್ತು ಸಂಗೀತ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ಹೋಗಿದ್ದರು. ಆದರೆ ಅವರಿಗೆ ದರ್ಶನ್‌ರನ್ನು ಭೇಟಿಯಾಗಲು ಸಾಧ್ಯವಾಗಲೇ ಇಲ್ಲ. 

ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ಬಂದ ನಟ ಸಾಧು ಕೋಕಿಲ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದರು. "ಏನೂ ಮಾತಾಡಿಲ್ಲ, ನಾನು ಅವರನ್ನು ಭೇಟಿಯಾಗಿಲ್ಲ. ದರ್ಶನ್ ಅವರನ್ನು ಭೇಟಿಯಾಗಲು ವಾರಕ್ಕೆ ಒಂದು ಅಥವಾ ಎರಡು ಅವಕಾಶ ಇದೆ. ನಾನು ಅವರನ್ನು ಭೇಟಿಯಾಗಬೇಕು ಅಂತಲೇ ಬಂದಿದ್ದೆ. ಈಗ ನಾನು ಭೇಟಿಯಾದರೆ, ಮಿಕ್ಕವರಿಗೆ ಅವರನ್ನು ಭೇಟಿ ಆಗುವ ಅವಕಾಶ ಸಿಗಲ್ಲ. ಗುರುವಾರ  ಇದೇ ಸಮಯಕ್ಕೆ ಮತ್ತೆ ಬರುತ್ತೇನೆ. ಅಂದು ಯಾರು ಬರುತ್ತಾರೋ, ನೋಡಿಕೊಂಡು, ಅವರ ಜೊತೆಗೆ ಬರುತ್ತೇನೆ ಎಂದು ಸಾಧು ಕೋಕಿಲ ಹೇಳಿದ್ದಾರೆ.

ದರ್ಶನ್ ಯಾವುದೇ ಸಿನಿಮಾಗಳಾದ್ರೂ ಸರಿಯೇ..? ಅಲ್ಲಿ ಒಂದು ಕಾಮಿಡಿ ಟ್ರ್ಯಾಕ್ ಇರ್ತಾ ಇತ್ತು. ಈ ಕಾಮಿಡಿ ಟ್ರ್ಯಾಕ್ ಅನ್ನ ಇಬ್ಬರು ನಿರ್ವಹಿಸುತ್ತಿದ್ದರು. ಆ ಇಬ್ಬರಲ್ಲಿ ಒಬ್ಬರು ಬುಲೆಟ್ ಪ್ರಕಾಶ್ ಆಗಿರುತ್ತಿದ್ದರು. ಮತ್ತೊಬ್ಬರು ಸಾಧು ಮಹಾರಾಜ್ ಅವರೇ ಇರ್ತಾ ಇದ್ದರು. ಒಂದು ರೀತಿ ದರ್ಶನ್ ಸಿನಿಮಾಗಳಲ್ಲಿ ಖಾಯಂ ಕಲಾವಿದರು ಅಂತ ಇದ್ರೆ, ಅದು ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಆಗಿದ್ದರು. ಆದರೆ, ಬುಲೆಟ್ ಪ್ರಕಾಶ್ ಇದ್ದಾಗ ದರ್ಶನ್‌ ಬಗ್ಗೆ ಏನೋ ಮಾತನಾಡಿ ಸಮಸ್ಯೆ ಮಾಡಿಕೊಂಡಿದ್ದರು. ಆದರೆ, ಸಾಧು ಕೋಕಿಲ ಆ ರೀತಿ ಅಲ್ಲ ಬಿಡಿ. ತುಂಬಾನ ಸೆನ್ಸಿಬಲ್ ಆಗಿದ್ದಾರೆ. ಸೀರಿಯೆಸ್ ಆಗಿದ್ದಾರೆ.

ದರ್ಶನ್ ಮತ್ತು ಸಾಧು ಕೋಕಿಲ ನಡುವೆ ಒಳ್ಳೆ ಸ್ನೇಹ ಕೂಡ ಇದೆ. ಯಾವುದೇ ರೀತಿಯ ತೊಂದರೆಗಳನ್ನ ಇಬ್ಬರೂ ಮಾಡಿಕೊಂಡಿಲ್ಲ. ಚೆನ್ನಾಗಿಯೇ ಇದ್ದಾರೆ. ಹಾಗೆ ದರ್ಶನ್ ಅಭಿನಯದ ಅನಾಥರು ಚಿತ್ರವನ್ನ ಸಾಧು ಕೋಕಿಲ ಡೈರೆಕ್ಷನ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಕೂಡ ಇದ್ದರು ಅನ್ನೋದು ಮತ್ತೊಂದು ವಿಷಯ ಬಿಡಿ. ಈ ರೀತಿ ನಟನೆ ಮತ್ತು ನಿರ್ದೇಶನ ಎರಡನ್ನೂ ಮಾಡ್ತಾನೇ ಸಾಧು ಕೋಕಿಲ ಹಾಗೂ ದರ್ಶನ್ ಸ್ನೇಹ ಇನ್ನು ಗಟ್ಟಿಯಾಗಿಯೇ ಇದೆ. 

ಆದರೆ, ಜೈಲಿನಲ್ಲಿರೋ ದರ್ಶನ್ ನೋಡೋ ಚಾನ್ಸ್ ಮಾತ್ರ ಸಾಧು ಕೋಕಿಲಾಗೆ ಮಿಸ್ ಆಗಿದೆ ಅಂತಲೇ ಹೇಳಬಹುದು. ದರ್ಶನ್ ಫ್ಯಾಮಿಲಿ ಭೇಟಿಗೆ ಬಂದಾಗ ಸಾಧು ಕೋಕಿಲ ಅವರು ಕೂಡಾ ಜೊತೆಗೆ ಬಂದು ಭೇಟಿ ಮಾಡುವ ಸಾಧ್ಯತೆ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.