ಪ್ರತಿಬಾರಿ ಕಷ್ಟ ಬಂದಾಗ ಧರ್ಮಸ್ಥಳಕ್ಕೆ ಹೋಗುತ್ತಿದ್ದ ದರ್ಶನ್, ಈ‌ ಬಾರಿ ಏಕಾಏಕಿ ಕೇರಳ ದೇವಾಲಯಕ್ಕೆ ಹೋಗಲು ಕಾರಣ ಇದೆಯಾ

 | 
Nx
ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ  ದರ್ಶನ್  ತೂಗುದೀಪ ಅವರು ಬಿಡುವು ಮಾಡಿಕೊಂಡು ಟೆಂಪಲ್‌ ರನ್‌ ಮಾಡುತ್ತಿದ್ದಾರೆ. ಜೈಲಿನಿಂದ ಹೊರಬಂದ ಮೇಲೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಸೇರಿ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಇದೀಗ ಅವರು ಕೇರಳ ಪ್ರಸಿದ್ಧ ದೇವಸ್ಥಾನಕ್ಕೆ ತಮ್ಮ ಕುಟುಂಬ ಸಮೇತ ತೆರಳಿರುವುದು ಅಚ್ಚರಿ ಮೂಡಿಸಿದೆ.
 ಏಕೆಂದರೆ ಇದು ಶತ್ರು ಸಂಹಾರ ಹೋಮಕ್ಕೆ ಪ್ರಸಿದ್ಧಿ ಪಡೆದಿರುವ ದೇವಸ್ಥಾನ ಎನ್ನಲಾಗಿದ್ದು, ರಾಜಕಾರಣಿಗಳು ಹೆಚ್ಚಾಗಿ ಈ ದೇವಸ್ಥಾನಕ್ಕೆ ತೆರಳಿ ತಮ್ಮ ಶತ್ರುಗಳ ಸಂಹಾರಕ್ಕೆ ವಿಶೇಷ ಹೋಮ ಮಾಡಿಸಿ ಬರುವುದರಿಂದಲೇ ಪ್ರಸಿದ್ಧಿಯಾಗಿದೆ. ಈಗ ದರ್ಶನ್‌ ಅವರು ಕೂಡ ಇಲ್ಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.ರೇಣುಕಾಸ್ವಾಮಿ ಕೊಲೆ ಕೇಸ್‌ನಿಂದ ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿದ್ದ ನಟ ದರ್ಶನ್‌ ಅವರು ಹಲವು ತಿಂಗಳ ಕಾಲ ಜೈಲು ವಾಸ, ಅನಾರೋಗ್ಯ ಸೇರಿದಂತೆ ಕುಟುಂಬ ಹಾಗೂ ಚಿತ್ರರಂಗದಿಂದಲೂ ದೂರಾಗಿದ್ದರು.
 ಬಳಿಕ ಜಾಮೀನು ವಿಚಾರವಾಗಿ ಕೋರ್ಟ್‌ ಕೇಸ್‌ ಅಲೆದಾಟ ಈಗಲೂ ಇದೆ. ಇದರ ನಡುವೆ ಆರೋಗ್ಯ ಚೇತರಿಸಿಕೊಂಡು ಸಿನಿಮಾಗಳತ್ತ ಮುಖ ಮಾಡಿರುವ ದರ್ಶನ್‌ ಅವರ ಇತ್ತೀಚಿನ ನಡೆ ಕುತೂಹಲ ಮೂಡಿಸಿತ್ತು. ತಮ್ಮ ಆಪ್ತ ಬಳಗದವರಿಂದಲೇ ತುಸು ಅಂತರ ಕಾಯ್ದುಕೊಳ್ಳುವ ಮೂಲಕ ಅಚ್ಚರಿಯೂ ಮೂಡಿಸಿದ್ದಾರೆ. ಈಗ ಶತ್ರು ಸಂಹಾರಕ್ಕೆ ಹೆಸರುವಾಸಿಯಾದ ದೇವಸ್ಥಾನಕ್ಕೆ ಕುಟುಂಬದೊಂದಿಗೆ ತೆರಳಿರುವುದು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.
ಇತ್ತೀಚೆಗೆ ತಾವು ಎದುರಿಸುತ್ತಿರುವ ಸಂಕಷ್ಟಗಳಿಂದ ಪಾರು ಮಾಡುವಂತೆ ದೇವರ ಮೊರೆ ಹೋಗಿರುವ ದರ್ಶನ್‌ ಅವರು ಸಮಯ ಸಿಕ್ಕಾಗಗೆಲ್ಲ ಟೆಂಪಲ್‌ ರನ್‌ ಮಾಡುತ್ತಲೇ ಇದ್ದಾರೆ. ಇದೀಗ ತಮ್ಮ ಶತ್ರುಗಳ ವಿನಾಶಕ್ಕೆ ಕೇರಳದ ಈ ವಿಶೇಷ ದೇವಾಲಯದ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. 
ಕೇರಳದ ಕಣ್ಣೂರಿನಲ್ಲಿರುವ ಪ್ರಸಿದ್ಧ ಶ್ರೀಮಡಾಯಿ ಕಾವು ಭಗವತಿ ದೇವಸ್ಥಾನಕ್ಕೆ ದರ್ಶನ್‌ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಕುಟುಂಬದೊಂದಿಗೆ ದರ್ಶನ್‌ ಅವರು ದೇವಸ್ಥಾನಕ್ಕೆ ತೆರಳಿರುವ ಹಾಗೂ ಮಗನಿಗೆ ಸುಮ್ಮನಿರುವಂತೆ ಸನ್ನೆ ಮಾಡಿ ಹೇಳಿದ ವಿಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.