ಎಣ್ಣೆ, ಸಿಗರೇಟ್ ಇಲ್ಲದೆ ಸಪ್ಪೆಯಾಗಿದೆ ದ ರ್ಶನ್ ಮುಖ; ವಿನೋದ್ ರಾಜ್ ಕಣ್ಣೀ ರು
Jul 25, 2024, 20:12 IST
|

ಕಷ್ಟದಲ್ಲಿ ಬೆಳೆದ ಹುಡುಗ. ಅವನ ಜೊತೆ ಇರಬೇಕು ಎಂದಿದ್ದರು. ಅಮ್ಮ ಬದುಕಿದ್ದಾಗ ಹೇಳಿದ ಮಾತು ಇದು ಎಂದು ಭೇಟಿ ಹಿಂದಿನ ಕಾರಣ ತಿಳಿಸಿದ್ದಾರೆ. ಈ ಘಟನೆ ಯಾಕೆ ಆಯ್ತು ಎಂದು ತುಂಬಾ ನೋವಾಗುತ್ತದೆ. ಸಡನ್ ಆಗಿ ನಡೆಯುವ ಘಟನೆಗಳು ಇವು. ಇದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಬರುತ್ತದೆ. ಅಚಾತುರ್ಯದಿಂದ ಆಗುವ ಘಟನೆಗಳು ಇವು ಎಂದಿದ್ದಾರೆ ವಿನೋದ್ ರಾಜ್.
ಇಂದು ದರ್ಶನ್ ಅವರನ್ನ ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ, ಹಿರಿಯ ನಟ ವಿನೋದ್ ರಾಜ್ ಹಾಗೂ ವಕೀಲರು ಪರಪ್ಪನ ಅಗ್ರಹಾರ ಜೈಲಿಗೆ ಬಂದರು. ಜೈಲಿನಲ್ಲಿ ದರ್ಶನ್ ಅವರನ್ನ ಕಂಡು ವಿನೋದ್ ರಾಜ್ ಭಾವುಕರಾಗಿದ್ದಾರೆ. ದರ್ಶನ್ ಅವರನ್ನ ಮೀಟ್ ಮಾಡಿದ್ಮೇಲೆ ಕಣ್ಣೀರು ಹಾಕುತ್ತಲೇ ಮಾಧ್ಯಮಗಳೊಂದಿಗೆ ವಿನೋದ್ ರಾಜ್ ಮಾತನಾಡಿದ್ದಾರೆ.
ಜೈಲಿನಲ್ಲಿದ್ದ ದರ್ಶನ್ ಅವರನ್ನ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿನೋದ್ ರಾಜ್, ನಾವು 5 ಜನ ಹೋಗಿದ್ವಿ. ಹೆಚ್ಚೇನೂ ಮಾತಾಡೋಕೆ ಆಗಲಿಲ್ಲ. ಕಷ್ಟ - ಸುಖ ಮಾತನಾಡಿದ್ವಿ ಅಷ್ಟೇ. ವಿಜಯಲಕ್ಷ್ಮೀ ಅವರಿಗೂ ಏನೂ ಗೊತ್ತಾಗುತ್ತಿಲ್ಲ. ವಕೀಲರು ಮಾತನಾಡಿದರು ಅಷ್ಟೇ. ಜೈಲಿನ ನಿಯಮಗಳು ಕಟ್ಟುನಿಟ್ಟಾಗಿವೆ. ಇಷ್ಟು ಕಹಿಯಾಗಿ, ಅವರನ್ನ ನಾನು ಈ ಸ್ಥಿತಿಯಲ್ಲಿ ನೋಡಬೇಕಿತ್ತಾ ಅನಿಸ್ತಾಯಿದೆ.
ನನ್ನ ಕಣ್ಣುಗಳನ್ನೇ ನಾನು ನಂಬೋಕೆ ಆಗಲಿಲ್ಲ. ಆದರೂ ನಂಬಬೇಕಾದ ಅನಿವಾರ್ಯತೆ ಆಗೋಯ್ತು. ಕಣ್ಣೀರು ಬಿಟ್ಟರೆ ಇನ್ನೇನೂ ಗೊತ್ತಿಲ್ಲ. ಎಲ್ಲಾ ಅಭಿಮಾನಿಗಳು ಸಹ ಕಣ್ಣೀರು ಹಾಕುತ್ತಿದ್ದಾರೆ. ಇದು ಬಹಳ ನೋವಿನ ಸಂಗತಿ. ಒಳ್ಳೆಯ ತೀರ್ಪು ಬಂದು ದರ್ಶನ್ ಅವರು ಇದರಿಂದ ಹೊರಬರಲಿ. ಅವರ ಸಂಸಾರ ಹಾಗೂ ಅಭಿಮಾನಿಗಳ ಜೊತೆಗೆ ಸೇರಿಕೊಳ್ಳಲಿ. ತಲೆಯೆತ್ತಿ ನಡೆಯುವಂತಹ ದರ್ಶನ್ ಆಗಲಿ.. ಎಲ್ಲರಿಗೂ ದರ್ಶನ ಕೊಡಲಿ ಅಂತ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಅಂತ್ಹೇಳಿ ಭಾವುಕರಾದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,7 Jul 2025