ದರ್ಶನ್ ತಾಯಿ ಮೀನಾ ಅವರು ತನ್ನ ಒಂದು ಕಿಡ್ನಿ ಕೊಟ್ಟಿದ್ದು ಯಾರಿಗೆ ಗೊ ತ್ತಾ

 | 
Uu

ದರ್ಶನ್  ತಂದೆ ತೂಗದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದ ಅಪ್ರತಿಮ ನಟರಲ್ಲಿ ಒಬ್ಬರು. ವಿಲನ್ ಆಗಿ ಪೋಷಕ ನಟನಾಗಿ ಹಲವಾರು ಸಿನಿಮಾಗಳಲ್ಲಿ ತೂಗುದೀಪ ಶ್ರೀನಿವಾಸ್ ನಟಿಸಿದ್ದಾರೆ. ಸಿನಿಮಾಗಳಲ್ಲಿ ಗಡುಸು ಧ್ವನಿಯ, ನಿಷ್ಠುರ ಮುಖಭಾವದ ವಿಲನ್ ಆಗಿದ್ದರೂ ಸಹ ನಿಜಜೀವನದಲ್ಲಿ ಅವರೊಬ್ಬ ಜಂಟಲ್​ಮ್ಯಾನ್ ಆಗಿದ್ದರು. ಅವರ ಪತ್ನಿ ಮೀನಮ್ಮನವರೂ ಸಹ ಅದ್ಭುತವಾದ ಮಹಿಳೆ.

 ಕುಟುಂಬಕ್ಕಾಗಿ ಅವರು ಮಾಡಿದ ತ್ಯಾಗಗಳು ಒಂದೆರಡಲ್ಲ. ಆದರೆ ಕಷ್ಟವೆಂಬುದು ಅವರ ಬೆನ್ನುಬಿಟ್ಟಿರಲಿಲ್ಲ. ಈಗಲೂ ಬಿಟ್ಟಿಲ್ಲ.ತೂಗುದೀಪ ಶ್ರೀನಿವಾಸ್ ಅವರಿಗೆ ಕಿಡ್ನಿ ಸಮಸ್ಯೆಯಿತ್ತು. ಎರಡು ಕಿಡ್ನಿಗಳು ವೈಫಲ್ಯವಾಗಿ ಸಾವು-ಬದುಕಿಗಾಗಿ ಹೋರಾಡುತ್ತಿದ್ದರು. ಈ ಸಂದರ್ಭದಲ್ಲಿ ಪತ್ನಿ ಮೀನಾ ತೂಗುದೀಪ ಅವರೇ ದರ್ಶನ್ ತಂದೆಗೆ ಒಂದು ಕಿಡ್ನಿ ದಾನ ಮಾಡಿ ಗಂಡನ್ನು ಉಳಿಸಿಕೊಂಡರು. ಕಿಡ್ನಿ ಕೊಟ್ಟ ಮೇಲೆ ತೂಗುದೀಪ ಶ್ರೀನಿವಾಸ ಮೊದಲಿನಂತೆ ಆಗ್ತಾರೆ ಎಂಬ ಬಹುದೊಡ್ಡ ಆಸೆ ಮನೆಯವರಲ್ಲಿತ್ತು. 

ಆ ಆಸೆ ಹೆಚ್ಚು ಕಾಲ ಉಳಿಯಲಿಲ್ಲ ಎನ್ನುವುದು ತೀರಾ ನೋವಿನ ಸಂಗತಿ. 52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಖ್ಯಾತ ಕಲಾವಿದ ಶ್ರೀನಿವಾಸ ನಿಧನರಾದರು.ತೂಗುದೀಪ ಶ್ರೀನಿವಾಸ್‌ಗೆ ತಮ್ಮ ಪತ್ನಿ ಅಂದ್ರೆ ಬಹಳ ಪ್ರೀತಿ ಅದಕ್ಕಾಗಿ ಅವರು, ಪತ್ನಿಯ ಉದ್ದನೆಯ ಕೇಶರಾಶಿಗಾಗಿ ನಿತ್ಯ ಮಲ್ಲಿಗೆ ಹೂ ತರುತ್ತಿದ್ದರು. ಶೂಟಿಂಗ್ ಮುಗಿಸಿ ಬರುವಾಗ ಪತ್ನಿಗೆ ಮಿಸ್ ಇಲ್ಲದೇ ಹೂ ತರುತ್ತಿದ್ದರಂತೆ, ಪತಿ ಹೋದ ಬಳಿಕ ತಾಯಿ ಮೀನಾ ಮಕ್ಕಳಿಗಾಗಿ ಜೀವ ಮತ್ತು ಜೀವನವನ್ನೇ ಮುಡಿಪಿಟ್ಟಿದ್ದರು. ಅಲ್ಲದೆ, ಗಂಡ ಹೋದ ಬಳಿಕ ಕೂದಲನ್ನೇ ಕತ್ತರಿಸಿ ಶಾರ್ಟ್ ಹೇರ್ ನಲ್ಲೇ ಇರುತ್ತಿದ್ದಾರೆ.

ಕೇಶವಮೂರ್ತಿಯವರ ನಿರ್ದೇಶನದ ‘ತೂಗುದೀಪ’ ಎಂಬ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಂದಿನಿಂದ ತೂಗುದೀಪ ಶ್ರೀನಿವಾಸ ಎಂಬ ಹೆಸರು ಬಂತು. ಇಂದು ಈ ಹೆಸರನ್ನು ಅವರ ಮಕ್ಕಳು ಆಕಾಶದೆತ್ತರಕ್ಕೆ ಬೆಳೆಸಿದ್ದಾರೆ ಅಂದರೆ ತಪ್ಪಾಗಲಾರದು.  ತೂಗದೀಪ ಶ್ರೀನಿವಾಸ ಅವರ ನಿಧನದ ನಂತರ ಏಕಾಂಗಿಯಾಗಿ ನಿಂತು ಕುಟುಂಬದ ಜವಾಬ್ದಾರಿ ಹೊತ್ತು ಮಕ್ಕಳನ್ನು ಸಾಕಿ ಸಲುಹಿ ಪ್ರತಿಭಾವಂತರನ್ನಾಗಿ ಮಾಡಿದ್ದಾರೆ. ಕಷ್ಟ ನಷ್ಟ ಹಾದಿಯಲ್ಲಿ ಬೆಳೆದು ಗಂಡನಂತೆ ಮಕ್ಕಳೂ ಕಲಾಸೇವೆ ಮಾಡಲಿ ಅಂತ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.