ದರ್ಶನ್ ಪವಿತ್ರ ಸಂಬಂಧ, ಟ್ವಿಟರ್ ನಲ್ಲಿ ಕಿಚ್ಚ ಸುದೀಪ್ ಕುಚಿಕು ಗೆಳೆಯನಿಗೆ ಕೌಂಟರ್

 | 
Nj

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚಿಗೆ #Ask Me Anything ಅಂತೇಳಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡುತ್ತಾರೆ. ಅಭಿಮಾನಿಗಳು ಕಿಚ್ಚನನ್ನು ಕೇಳಬೇಕು ಅಂದುಕೊಂಡಿರುವ ಪ್ರಶ್ನೆಗಳನ್ನು ಇಲ್ಲಿ ಪೋಸ್ಟ್‌ ಮಾಡುತ್ತಾರೆ, ಅದನ್ನು ರೀ-ಟ್ವೀಟ್ ಮಾಡಿಕೊಂಡು ಕಿಚ್ಚ ಉತ್ತರ ಕೊಡುತ್ತಾರೆ. ಬಿಗ್ ಬಾಸ್, ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳು, ಸಿನಿಮಾ ಶೂಟಿಂಗ್, ಅಡುಗೆ ಹೀಗೆ ಡಿಫರೆಂಟ್ ಡಿಫರೆಂಟ್ ವಿಚಾರಗಳ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳುತ್ತಾರೆ. 

ಆದರೆ ಇಂದು ಅಭಿಮಾನಿಗಳಿಬ್ಬರು ನಟ ದರ್ಶನ್ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಹೌದು! ನಟ ದರ್ಶನ್ ಮತ್ತು ಸುದೀಪ್ ಆತ್ಮೀಯ ಸ್ನೇಹಿತರು ಆಗಿದ್ದರು ಅನ್ನೋ ವಿಚಾರ ಎಲ್ಲರಿಗೂ ಗೊತ್ತಿದೆ. ಯಾವ ಕಾರಣಕ್ಕೆ ಜಗಳ ಆಯ್ತು, ಯಾವ ಕಾರಣಕ್ಕೆ ಮುಂದು ಬಿತ್ತು, ಯಾವ ಕಾರಣಕ್ಕೆ ಅಭಿಮಾನಿಗಳ ನಡುವೆ ಜಗಳ ಆಗುತ್ತಿದೆ ಎಂದು ಈ ಕ್ಷಣದವರೆಗೂ ಯಾರಿಗೂ ಕ್ಲಾರಿಟಿ ಇಲ್ಲ. ಅದರೆ ಎಂದೂ ಒಬ್ಬರನ್ನೊಬ್ಬರು ಬೈದುಕೊಂಡು ಓಡಾಡಿಲ್ಲ, ಎಂದೂ ಕೆಟ್ಟದನ್ನು ಬಯಸದೆ ಪರೋಕ್ಷವಾಗಿ ಪ್ರೀತಿ ಮತ್ತು ಸಪೋರ್ಟ್ ಮಾಡಿಕೊಂಡು ಇದ್ದಾರೆ. 

ಕರುನಾಡ ಕುವರ ವಿಷ್ಣು ಹೆಸರಿನ ಟ್ವಿಟರ್‌ ಅಕೌಂಟ್‌ ವ್ಯಕ್ತಿ ಸರ್ ನಿಮ್ದು ಮತ್ತೆ ದರ್ಶನ್ ಅವರದು ಸಮಸ್ಯೆನ ಯಾವಾಗ solve ಮಾಡ್ಕೋತೀರಾ ಇನ್ನು ಎಷ್ಟು ಟೈಮ್ ತಗೋತೀರಾ ಎಂದು ಪ್ರಶ್ನಿಸಿದ್ದರು. ಸಮಸ್ಯೆ ಏನು ಅಂತ ಇಬ್ರು ಹುಡುಕುತ್ತಾ ಇದ್ದೀವಿ ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದರು. ಸುದೀಪ್‌ ಎಂಬ ಮತ್ತೊಬ್ಬ ಅಭಿಮಾನಿ ದರ್ಶನ್‌ ಮತ್ತು ಕಿಚ್ಚ ತಬ್ಬಿಕೊಂಡಿರುವ ಫೋಟೋ ಹಂಚಿಕೊಂಡು ದಾಸ ದರ್ಶನ್‌ ಬಗ್ಗೆ ಒಂದು ಪದ ಹೇಳಿ ಎಂದು ಮನವಿ ಮಾಡಿದ್ದರು. 

ಆಗ ತಬ್ಬಿಕೊಳ್ಳುವ ಎಮೋಜಿ ಜೊತೆಯಲಿ ..i wsh him the best always ಎಂದು ಬರೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣ ತುಂಬಾ ಇವರಿಬ್ಬರ ಫೋಟೋ ಮತ್ತು ಈ ಟ್ವೀಟ್‌ಗಳು ವೈರಲ್ ಆಗುತ್ತಿದೆ. ಅಲ್ಲದೆ ಈ ಎರಡು ಟ್ವೀಟ್‌ಗಳಿಗೆ ದರ್ಶನ್‌ ಪ್ರತಿಕ್ರಿಯೆ ನೀಡಬೇಕು ಎಂದು ಆಶಿಸುತ್ತಿದ್ದಾರೆ. ಕಿಚ್ಚ ಅವರು ಎಮೋಜಿ ಮೂಲಕವೇ ಅಪ್ಪುಗೆ ಕೊಟ್ಟಿದ್ದಾರೆ. ಹಗ್ ಮಾಡುವ ಎಮೋಜಿಯನ್ನು ಹಾಕಿ ಎಂದಿಗೂ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ ಎಂದಿದ್ದು ಈ ಟ್ವೀಟ್​ಗೆ ಇಬ್ಬರು ನಟರ ಅಭಿಮಾನಿಗಳಿಂದಲೂ ಲೈಕ್ಸ್ ಬರುತ್ತಿದೆ. 

ಈ ಒಂದು ಟ್ವೀಟ್ ಸದ್ಯ ವೈರಲ್ ಆಗಿದ್ದು ದರ್ಶನ್ ಹಾಗೂ ಕಿಚ್ಚ ಅವರ ಅಭಿಮಾನಿಗಳು ಇದನ್ನು ಶೇರ್ ಮಾಡುತ್ತಲೇ ಇದ್ದಾರೆ. ಇದರಲ್ಲಿ ಇಬ್ಬರೂ ಚಾಕ್ಲೆಟ್ ಬಾಯ್ ಏಜ್​ನಲ್ಲಿ ಇರುವುದನ್ನು ಕಾಣಬಹುದು.ಕಿಚ್ಚ ಸುದೀಪ್ - ದರ್ಶನ್ ನಡುವಿನ ವೈಮನಸ್ಸು ತುಂಬಾ ಹಳೆಯದಾಗಿದೆ. ಆದರೂ ಇಬ್ಬರ ಹಳೆಯ ಫೋಟೋಸ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ನಿಮ್ಮನ್ನು ಮತ್ತೆ ಹೀಗೆ ಒಟ್ಟಿಗೆ ಕಾಣಬೇಕು ಎನ್ನುತ್ತಿರುತ್ತಾರೆ ನೆಟ್ಟಿಗರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.