ದರ್ಶನ್ ಬರ್ತಡೆಗೆ ದೊಡ್ಡ ಗಿಫ್ಟ್ ಕೊಟ್ಟ ಮಗ ವಿನೀಶ್, ಬೆಚ್ಚಿಬೆರೆಗಾದ ದಾಸ

 | 
Hs

ದರ್ಶನ್ ಜನ್ಮ ದಿನಕ್ಕೆ ಆರ್.ಆರ್.ನಗರದ ಮನೆಯ ಸುತ್ತ-ಮುತ್ತ ಜನ ಜಾತ್ರೇನೆ ನೆರೆದಿತ್ತು. ಇಡೀ ಏರಿಯಾ ದರ್ಶನ್ ಅಭಿಮಾನಿಗಳಿಂದಲೇ ತುಂಬಿ ಹೋಗಿತ್ತು. ಸಾವಿರಾರು ಜನ ಅಭಿಮಾನಿಗಳು ಮನೆ ಎದುರು ಜಮಾ ಆಗಿದ್ದಾರೆ.ಅಷ್ಟೊಂದು ಕ್ರೇಜ್ ಮಧ್ಯೆ ದರ್ಶನ್ ಪುತ್ರ ವಿನೀಶ್ ಕೂಡ ಸ್ಪೆಷಲ್ ಆಗಿಯೇ ಕಾಣಿಸಿಕೊಂಡ್ರು ನೋಡಿ.

ದರ್ಶನ್ ಅವರ ಏಕೈಕ ಪುತ್ರ ವಿನೀಶ್ ತೂಗುದೀಪ್ ದರ್ಶನ್ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾನೆ. ಆದರೆ ಸೈಲೆಂಟ್‌ ಅನ್ನೋದು ಕೂಡ ಅಷ್ಟೇ ವಿಶೇಷವಾದ ವಿಚಾರ ಅಂತಲೇ ಹೇಳಬಹುದು. ದರ್ಶನ್ ಫ್ಯಾನ್ಸ್ ಬಂದು ಮಾತನಾಡಿಸಿದಾಗ ಮಾಡು ಆಡೋದು ಕಡಿಮೇನೆ. ಆದರೂ ಅಭಿಮಾನಿಗಳು ವಿನೀಶ್ ಜೊತೆಗೂ ಫೋಟೋ ತೆಗೆಸಿಕೊಂಡು ಖುಷಿಪಡ್ತಾರೆ.

ಮಧ್ಯ ರಾತ್ರಿ ದರ್ಶನ್ ತಮ್ಮ ಜನ್ಮ ದಿನದ ಸಂಭ್ರಮದಲ್ಲಿಯೇ ಇದ್ದರು. ಅಭಿಮಾನಿಗಳ ಮಧ್ಯೆದಲ್ಲಿ ಪುತ್ರ ವಿನೀಶ್ ಕೂಡ ಬಂದಿದ್ದು ವಿಶೇಷವಾಗಿಯೇ ಇತ್ತು. ಅಪ್ಪನಿಗೆ ಜನ್ಮದಿನದ ವಿಶ್ ಮಾಡಿರೋದು ವಿಶೇಷ ಅನಿಸಿತು. ಆ ಕೂಡಲೇ ಪುತ್ರನ್ನ ದರ್ಶನ್ ತಬ್ಬಿಕೊಂಡು ಸಂತೋಷ ಪಟ್ರು. ದರ್ಶನ್ ತಮ್ಮ ಪುತ್ರನ ಜೊತೆಗೆ ಮಾತನಾಡಿದ್ದಾರೆ. ನಕ್ಕು ಖುಷಿಪಟ್ಟಿದ್ದಾರೆ. ಅಭಿಮಾನಿಗಳ ಮಧ್ಯದಲ್ಲಿ ವಿನೀಶ್ ಮತ್ತು ದರ್ಶನ್ ನಿಂತಿರೋದನ್ನ ಕ್ಯಾಪ್ಚರ್ ಮಾಡಲಾಗಿದೆ. ಆ ಫೋಟೋಗಳು ಇದೀಗ ಹೆಚ್ಚು ಗಮನ ಸೆಳೆಯುತ್ತಿವೆ. 

ದರ್ಶನ್ ಜನ್ಮ ದಿನಕ್ಕೆ ಕನ್ನಡದ ಯುವ ತಾರೆಯರಾದ ಯಂಗ್ ರೆಬಲ್ ಸ್ಟಾರ್ ಅಬಿಷೇಕ್ ಅಂಬರೀಶ್, ನಟ ಧನ್ವೀರ್, ವಿನೋದ್ ಪ್ರಭಾಕರ್‌ ಇವರೆಲ್ಲ ಬಂದಿದ್ರು. ರಾತ್ರಿನೇ ತಮ್ಮ ನೆಚ್ಚಿನ ನಾಯಕನಿಗೆ ಹುಟ್ಟುಹಬ್ಬದ ಶುಭಾಷಯವನ್ನ ತಿಳಿಸಿದ್ರು ಅಂತಲೂ ಹೇಳಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.