ಫಾರ್ಮ್‌ ಹೌಸ್ ಕೆಲಸಗಾರರನ್ನು ಕರೆದು ಕೇಕ್ ಕಟ್ಟು ಮಾಡಿಸಿದ ದರ್ಶನ್ ಪತ್ನಿ, ಅತ್ತಿಗೆಯ ಗುಣಕ್ಕೆ ಕನ್ನಡಿಗರು ಫಿದಾ

 | 
Bs
ನಟ ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿ ಎತ್ತಿನಗಾಡಿಯಲ್ಲಿ ಸವಾರಿ ಮಾಡಿರುವ ವಿಡಿಯೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ.ಪತಿ ದರ್ಶನ್ ಜೊತೆ ಎತ್ತಿನಗಾಡಿಯಲ್ಲಿ ವಿಜಯಲಕ್ಷ್ಮಿ ರೌಂಡ್ ಹೊಡೆದಿದ್ದಾರೆ. ಎತ್ತಿನಗಾಡಿಯಲ್ಲಿ ಸವಾರಿ ಮಾಡ್ತಿರೋ ವಿಡಿಯೋವನ್ನು ಇನ್ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿ, ಸೂರ್ಯ ಮತ್ತು ಚಂದ್ರ ನಮ್ಮ ಸ್ಟಾರ್ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಮೇ 19ರಂದು ದರ್ಶನ್ ಮತ್ತು ವಿಜಯಲಕ್ಷ್ಮಿ 22ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡಿದ್ದರು. ಆ ದಿನ ರೆಸಾರ್ಟ್‌ವೊಂದರಲ್ಲಿ ಇಬ್ಬರೂ ಕೇಕ್ ಕತ್ತರಿಸಿ, ಮಸ್ತ್ ಆಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಮೇಲೆ ದರ್ಶನ್ ಹೊರಬಂದ್ಮೇಲೆ ಪತಿಯ ವ್ಯವಹಾರವನ್ನು ವಿಜಯಲಕ್ಷ್ಮಿಯವರೇ ನೋಡಿಕೊಳ್ತಿದ್ದಾರೆ. ದರ್ಶನ್‌ಗೆ ಎಲ್ಲೇ ಶೂಟಿಂಗ್ ಇದ್ರೂ ಅಥವಾ ಯಾವುದೇ ಕಾರ್ಯಕ್ರಮ ಆಗಿದ್ರೂ ಪತ್ನಿ ಜೊತೆಯಲ್ಲಿ ಇರುತ್ತಾರೆ.
ದರ್ಶನ್‌ - ವಿಜಯಲಕ್ಷ್ಮೀ ಮ್ಯಾರೇಜ್ ಆನಿವರ್ಸರಿ ಪಾರ್ಟಿಯಲ್ಲಿ ಫ್ರೆಂಡ್ಸ್ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ ಮನೆಯ ಕೆಲಸದವರ ಜೊತೆ ಆಚರಿಸಿದ್ದಾರೆ. ಪತಿಯ ಜೊತೆ ಪಾರ್ಟಿಯಲ್ಲಿ ಕೇಕ್ ಕಟ್ಟಿ ಮಾಡಿದ ಫೋಟೊವನ್ನು ವಿಜಯಲಕ್ಷ್ಮಿ ದರ್ಶನ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದರು. ಮೇ 19ಕ್ಕೆ ಸ್ಯಾಂಡಲ್ವುಡ್ನ ಈ ಜೋಡಿ ಮದುವೆಯಾಗಿ 22 ವರ್ಷ ಕಳೆದಿತ್ತು.
ಇದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಈ ಜೋಡಿ ಮೇಲೆ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇದೆಲ್ಲದರ ನಡುವೆ, ಡೆವಿಲ್ ಸಿನಿಮಾದ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ದರ್ಶನ್ ಜೊತೆ ರಚನಾ ರೈ, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ತಾರಕ್ ಡೈರೆಕ್ಟರ್ ಮಿಲನಾ ಪ್ರಕಾಶ್ ‘ಡೆವಿಲ್’ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.