ಸಂಕ್ರಾಂತಿ ಹಬ್ಬಕ್ಕೆ ದರ್ಶನ್ ಪತ್ನಿ ಕೈಯಲ್ಲಿ ಹೆಣ್ಣುಮಗು, ಬಹುವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ವಿಜಯಲಕ್ಷ್ಮಿ

 | 
Hs

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಕ್ರಾಂತಿ  ಹಬ್ಬವನ್ನ ಅದ್ಭುತವಾಗಿಯೇ ಆಚರಿಸಿದ್ದಾರೆ. ಮೈಸೂರಿನ ತಮ್ಮ ಫಾರ್ಮ್ ಹೌಸ್‌ನಲ್ಲಿಯೇ ಎಂದಿನಂತೆ ಸಂಕ್ರಾಂತಿ ಸೆಲೆಬ್ರೇಷನ್  ಮಾಡಿದ್ದಾರೆ. ತಮ್ಮ ಸಾಕು ಪ್ರಾಣಿಗಳ ಮೈ ತೊಳೆದು ಪೂಜೆ ಮಾಡಿ ಅಲಂಕಾರ ಮಾಡಿ ಇಡೀ ದಿನ ಆ ಪ್ರಾಣಿಗಳ ಸೇವೆ ಮಾಡಿದ್ದಾರೆ. 

ಸಂಜೆ ಹೊತ್ತಿಗೆ ಎತ್ತುಗಳನ್ನ ಬಂಡಿಗೆ ಹೂಡಿ ತೋಟದ ಸುತ್ತಲ ಜಾಗದಲ್ಲಿಯೇ ಓಡಾಡಿಸಿದ್ದಾರೆ. ಇವರ ಈ ಒಂದು ಎತ್ತಿನ ಬಂಡಿ ಓಟದಲ್ಲಿ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಸಾಥ್ ಕೊಟ್ಟಿದ್ದಾರೆ. ದರ್ಶನ್ ಪುತ್ರ ವಿನೀಶ್  ಅಪ್ಪನ ಜೊತೆಗೇನೆ ಹಬ್ಬ ಮಾಡಿದ್ದಾರೆ. ದರ್ಶನ್ ಸ್ನೇಹಿತರು ಮತ್ತು ಆಪ್ತರು ಈ ಒಂದು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ. ಆದರೆ ಪತ್ನಿ ವಿಜಯಲಕ್ಷ್ಮಿ ಭಾಗವಹಿಸಿರಲಿಲ್ಲ ಅದಕ್ಕೆ ಮೂಲ ಕಾರಣವೆಂದರೆ ಅವರು ಮನೆಯಲ್ಲಿ ಹಬ್ಬ ಆಚರಿಸಿ ಕಾವ್ಯ ಗೌಡ ಸೀಮಂತಕ್ಕೆ ಹೋಗಿದ್ದಾರೆ.

ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ, ಗರ್ಭಿಣಿಯಾಗಿದ್ದು, ಸೀಮಂತ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು,  ಕಾರ್ಯಕ್ರಮದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಭಾಗಿಯಾಗಿದ್ದರು. ಕಾವ್ಯಾ ಗೌಡ ತಮ್ಮ ಎರಡನೇ ವೆಡ್ಡಿಂಗ್ ಆನಿವರ್ಸರಿಯಂದು  ತಾವು ತಾಯಿಯಾಗುತ್ತಿರೋದಾಗಿ ತಿಳಿಸಿದ್ದರು. ಇದೀಗ ಸಂಭ್ರಮದ ಸೀಮಂತ ಕಾರ್ಯ ಕೂಡ ನಡೆದಿದ್ದು, ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. 

ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ನಡೆದ ನಟಿ ಕಾವ್ಯಾ ಗೌಡ ಸೀಮಂತ  ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಗೋಲ್ಡನ್ ಬಣ್ಣದ ಸೀರೆ, ಪರ್ಪಲ್ ಬಣ್ಣದ ಬ್ಲೌಸ್‌ನಲ್ಲಿ ಕಾವ್ಯಾ ಮಿಂಚಿದರೆ, ಸೋಮಶೇಖರ್ ಗೋಲ್ಡನ್ ಬಣ್ಣದ ಪಂಚೆ ಶೆರ್ವಾನಿಯಲ್ಲಿ ಮಿಂಚಿದರು. ಸೀಮಂತ ಕಾರ್ಯಕ್ಕೆ ನಟ ದರ್ಶನ್ ತೂಗ್ ದೀಪ್ ಅವರ ಪತ್ನಿ ವಿಜಯಲಕ್ಷ್ಮೀ  ಸಹ ಹಾಜರಾಗಿ, ಸಂಭ್ರಮಿಸಿದರು.  ವಿಜಯಲಕ್ಷ್ಮೀ ಮತ್ತು ಕಾವ್ಯಾ ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.