ಸಂಕ್ರಾಂತಿ ಹಬ್ಬಕ್ಕೆ ಬೆಳ್ಳಿ ಗೊಂಬೆಯಂತೆ ರೆಡಿಯಾದ ದರ್ಶನ್ ಪತ್ನಿ, ಇವರ ಮುಂದೆ ಕನ್ನಡದ ನಟಿಯರು ಲೆಕ್ಕಕ್ಕೆ ಇಲ್ಲ

 | 
Gn

ದಾಸ ದರ್ಶನ್ ಪ್ರತಿ ವರ್ಷ ಸಂಕ್ರಾಂತಿ ಆಚರಣೆ ಮಾಡುತ್ತಾರೆ. ಸ್ಪೆಷಲ್ ಆಗಿಯೇ ಹಬ್ಬ ಮಾಡೋದನ್ನ ರೂಢಿ ಮಾಡಿಕೊಂಡಿದ್ದಾರೆ. ಮೈಸೂರಿನ ತಮ್ಮ ಫಾರ್ಮ್ ಹೌಸ್‌ನಲ್ಲಿಯೇ ಹಬ್ಬವನ್ನ ಸೆಲೆಬ್ರೇಟ್ ಮಾಡುತ್ತಾರೆ. ಅದರಂತೆ ಈ ವರ್ಷವೂ ಈ ಹಬ್ಬ ಆಚರಣೆ ಮಾಡಿದ್ದಾರೆ. ದರ್ಶನ್ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಪ್ರಾಣಿ-ಪಕ್ಷಿಗಳನ್ನು ಸಾಕಿಸಿದ್ದಾರೆ. 

ಕುದುರೆ ಜೊತೆಗೆ ಹಸುಗಳನ್ನು ಸಾಕಿಕೊಂಡಿದ್ದಾರೆ. ಎತ್ತುಗಳನ್ನ ಸಾಕಿದ್ದಾರೆ. ಇವುಗಳ ಜೊತೆಗೆ ಕಿಚ್ಚು ಹಾಯಿಸೋ ಸಂಪ್ರದಾಯವನ್ನೂ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಕಾಟೇರ ಸಕ್ಸಸ್ ಖುಷಿಯಲ್ಲಿರೋ ದರ್ಶನ್ ಈ ವರ್ಷ ಕೂಡ ಹಬ್ಬ ಆಚರಣೆ ಮಾಡಿದ್ದಾರೆ. ಪುತ್ರನ ಜೊತೆಗೂ ದರ್ಶನ್ ಈ ವರ್ಷದ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ತಮ್ಮ ಸಾಕು ಎತ್ತುಗಳು ಜೊತೆಗೆ ನಿಂತು ಫೋಟೋಗಳನ್ನು ಕೂಡ ತೆಗೆಸಿಕೊಂಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮತ್ತು ಮಗನೊಂದಿಗೆ ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ.

ಕಾಟೇರ ಸಿನಿಮಾ ಸದ್ಯ ಎಲ್ಲೆಡೆ ಚೆನ್ನಾಗಿಯೇ ಓಡುತ್ತಿದೆ. ರಾಜ್ಯದ ತುಂಬೆಲ್ಲ ಈ ಚಿತ್ರದ ಚರ್ಚೆ ಇದೆ. ಚಿತ್ರದಲ್ಲಿರೋ ಕಂಟೆಂಟ್ ಕೂಡ ಎಲ್ಲ ಕಾಲಕ್ಕೂ ಸಲ್ಲುವಂತೆ ಇದೆ. ಡೈರೆಕ್ಟರ್ ತರುಣ್ ಸುಧೀರ್ ಅಂತಹ ವಿಷಯವನ್ನೇ ಈ ಸಿನಿಮಾದಲ್ಲಿ ತೆಗೆದುಕೊಂಡು ಜನರಿಗೆ ವಿಶೇಷವಾಗಿಯೇ ಕೊಟ್ಟಿದ್ದಾರೆ. ಕಾಟೇರ ಚಿತ್ರ ಮೂರನೇ ವಾರಕ್ಕೂ ಕಾಲಿಟ್ಟು ಚೆನ್ನಾಗಿಯೇ ಓಡುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ಏನೂ ಅಂತಹ ವ್ಯತ್ಯಾಸ ಕಾಣುತ್ತಿಲ್ಲ. 

ಸಿಂಗಲ್ ಥಿಯೇಟರ್‌ ವಿಷಯದಲ್ಲಿ ಕೊಂಚ ಬದಲಾವಣೆ ಆಗಿದೆ. ಮಲ್ಟಿಪ್ಲೆಕ್ಸ್‌ನಲ್ಲಿ ಸಂಖ್ಯೆ ಮೊದಲ ವಾರ ಹೇಗಿತ್ತೋ ಹಾಗೇನೆ ಇದೆ. ಕಾಟೇರ ಸಿನಿಮಾ ಆದ್ಮೇಲೆ ದರ್ಶನ್ ಯಾವ ಸಿನಿಮಾ ಮಾಡ್ತಾರೆ ಅನ್ನುವ ಪ್ರಶ್ನೆ ಕೂಡ ಇದೆ. ಆದರೆ ಈ ಬಗ್ಗೆ ಸದ್ಯ ಏನೂ ಸುದ್ದಿ ಹೊರ ಬಂದಿಲ್ಲ. ಹಾಗೆ ದರ್ಶನ್ ಕೈಯಲ್ಲಿ ಇನ್ನೆರಡು ಪ್ರೊಜೆಕ್ಟ್‌ಗಳು ಇವೆ. ಆ ಎರಡು ಸಿನಿಮಾಗಳಲ್ಲಿ ಯಾವುದನ್ನ ಶುರು ಮಾಡ್ತಾರೆ ಅನ್ನುವ ಕುತೂಹಲ ಈಗಲೇ ಮೂಡಿದೆ. 

ದಾಸ ದರ್ಶನ್ ಒಪ್ಪಿರೋ ಸಿನಿಮಾಗಳಲ್ಲಿ ಮಿಲನಾ ಪ್ರಕಾಶ್ ಅವರ ಡೆವಿಲ್ ಚಿತ್ರ ಇದೆ. ಜೋಗಿ ಪ್ರೇಮ್ ಜೊತೆಗೆ ದರ್ಶನ್ ಸಿನಿಮಾ ಮಾಡಲಿದ್ದಾರೆ. ಇದು ಕೆವಿಎನ್ ಪ್ರೊಡಕ್ಷನ್‌ನಲ್ಲಿಯೇ ಶುರು ಆಗುತ್ತದೆ. ಉಳಿದಂತೆ ಸದ್ಯ ಕಾಟೇರ ಗೆಲುವಿನ ಖುಷಿಯಲ್ಲಿರೋ ದರ್ಶನ್, ಸಂಕ್ರಾಂತಿ ಹಬ್ಬದ  ನಂತರ ಹೇಳಬಹುದು ಎಂದು ಕಾಯುತ್ತಿದ್ದಾರೆ ಅಭಿಮಾನಿಗಳು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.