ಬಾಡಿಗೆ ಮನೆಯಲ್ಲಿ ದಿನಕಳೆಯುತ್ತಿರುವ ದ ರ್ಶನ್ ತಮ್ಮ; ಇಟ್ಟುಕೊಂಡು ಪವಿತ್ರ ಬಳಿ ಒಂದು ಕೋಟಿ ಮನೆ ಹಾಗೂ ಕಾರು ಗಿಫ್ಟ್

 | 
Jd

ನಟ ದರ್ಶನ್, ಪವಿತ್ರಾ ಗೌಡ ವಿರುದ್ಧ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪವಿದೆ. ಸದ್ಯ ಇವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹೀಗಿರುವಾಗ ದರ್ಶನ್‌ಗೆ ಸಂಬಂಧಪಟ್ಟಂತೆ ಒಂದಷ್ಟು ವಿಷಯಗಳು ಹೊರಗಡೆ ಬರುತ್ತಿವೆ. ಈಗ ದರ್ಶನ್, ದಿನಕರ್ ತೂಗುದೀಪ, ಮೀನಾ ಮಧ್ಯೆ ಮನಸ್ತಾಪ ಇರೋದು ಗೊತ್ತಾಗಿದೆ. ಅಷ್ಟೇ ಅಲ್ಲದೆ ಪವಿತ್ರಾ ಗೌಡಗೆ ಕೋಟ್ಯಂತರ ರೂಪಾಯಿ ಮನೆ, ದಿನಕರ್ ತೂಗುದೀಪಗೆ ಬಾಡಿಗೆ ಮನೆ ಅಂತ ಅನೇಕರು ಬೇಸರ ಹೊರಹಾಕಿದ್ದಾರೆ.

ಸಾರಥಿ ಸಿನಿಮಾ ಯಶಸ್ಸು ಯಾರದ್ದು ಎಂಬ ವಿಚಾರದ ಮೇಲೆ ದರ್ಶನ್‌ಗೂ, ದಿನಕರ್ ತೂಗುದೀಪ ಅವರಿಗೂ ಮನಸ್ತಾಪ ಆಗಿದೆ. ಹೀಗಾಗಿ ದರ್ಶನ್ ಅವರು ತಮ್ಮನ ಮೇಲೂ ಹಲ್ಲೆ ಮಾಡಿದ್ದರು ಎಂದು ವರದಿಯಾಗಿದೆ. ಅಂದಹಾಗೆ ಸೂಪರ್ ಹಿಟ್ ಸಾರಥಿ ಸಿನಿಮಾವನ್ನು ದಿನಕರ್ ತೂಗುದೀಪ ಅವರೇ ನಿರ್ದೇಶನ ಮಾಡಿದ್ದರು. ಇನ್ನು ತಾಯಿಯ ಜೊತೆಗೂ ದರ್ಶನ್ ಮುನಿಸಿಕೊಂಡಿದ್ದಾರಂತೆ.

ಮೀನಾ ತೂಗುದೀಪ ಅವರು ಮೈಸೂರಿನಲ್ಲಿ ಮನೆಯಲ್ಲಿ ಒಬ್ಬರೇ ಇರುತ್ತಾರೆ. ದರ್ಶನ್ ಅಲ್ಲಿಗೆ ಹೋಗದೆ ವರ್ಷಗಳಾಯ್ತಂತೆ. ಮೈಸೂರಿಗೆ ಹೋದರೂ ಕೂಡ ದರ್ಶನ್ ಅವರು ತಮ್ಮ ತೂಗುದೀಪ ಫಾರ್ಮ್‌ಹೌಸ್ ಅಥವಾ ಹೋಟೆಲ್‌ನಲ್ಲಿ ಉಳಿದುಕೊಳ್ತಾರಂತೆ.ದಿನಕರ್ ತೂಗುದೀಪ ಅವರು ಸಂದರ್ಶನವೊಂದರಲ್ಲಿ ತಾವು ಇನ್ನೂ ಬೆಂಗಳೂರಿನಲ್ಲಿ 1BHK ಹೌಸ್‌ಗೆ ಬಾಡಿಗೆ ಕೊಟ್ಟು ಜೀವನ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.

ಬೆಂಗಳೂರಿನ ಆರ್ ಆರ್ ನಗರದಲ್ಲಿ ಮೂರು ಫ್ಲೋರ್ ಇರುವ ಮನೆಯಲ್ಲಿ ಪವಿತ್ರಾ ಗೌಡ ವಾಸ ಮಾಡುತ್ತಿದ್ದಾರೆ. ಈ ಮನೆಗೆ ಅವರು ಕಾಲಿಟ್ಟು 10 ವರ್ಷಗಳು ಕಳೆದಿದೆಯಂತೆ. ಅಂದಹಾಗೆ ಅವರ ಮಗಳು ಹಾಸ್ಟೆಲ್‌ನಲ್ಲಿ ಇದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ರೆಡ್ ಕಾರ್ಪೆಟ್ ಎನ್ನುವ ಡಿಸೈನರ್ ಶಾಪ್‌ ಕೂಡ ಹೊಂದಿದ್ದಾರೆ. 

ಕೆಲ ದಿನಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ದುಬಾರಿ ಕಾರ್ ಖರೀದಿ ಮಾಡಿದ್ದರು. ಅದನ್ನು ನೋಡಿ ಪವಿತ್ರಾ ಗೌಡ ಅವರು ದರ್ಶನ್‌ಗೆ ತನಗೂ ಕಾರ್ ಬೇಕು ಅಂತ ಹಠ ಮಾಡಿದ್ದರಂತೆ. ಹಾಗಾಗಿ 1.5 ತಿಂಗಳ ಹಿಂದೆ ಪವಿತ್ರಾಗೂ ದರ್ಶನ್ ಅವರು ಕಾರ್ ಕೊಡಿಸಿದ್ದರು ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.