ದಶ೯ನ್ ಪತ್ನಿ ವಿಜಯಲಕ್ಷ್ಮಿ ಬತ್೯ಡೇ, ಡಿ ಬಾಸ್ ಕೊಟ್ಟ ಸಪ್ರೈಸ್ ಗಿಫ್ಟ್ ಏನು ಗೊತ್ತಾ

 | 
Hd
 ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅಭಿಮಾನಿ ಬಳಗ ಎಂಥದ್ದು ಅಂತ ಗೊತ್ತೇಯಿದೆ. ದರ್ಶನ್ ಹುಟ್ಟುಹಬ್ಬ ಬಂದ್ರೆ ಅಂದೇ ಅಭಿಮಾನಿಗಳಿಗೆ ದೀಪಾವಳಿ, ಯುಗಾದಿ ಸಂಭ್ರಮ. ಕೆಲ ದಿನಗಳ ಹಿಂದಷ್ಟೇ ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬಕ್ಕೆ ದರ್ಶನ್ ಹಾಗೂ ಅವರ ಪತ್ನಿ ವಿಭಿನ್ನವಾಗಿ ಶುಭಾಶಯ ಕೋರಿದ್ದರು.
ಇದೀಗ ಖಾಸಗಿ ಹೋಟೆಲ್ ಒಂದರಲ್ಲಿ ದರ್ಶನ್ ಅವರು ತಮ್ಮ ಪತ್ನಿಯ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಕೇವಲ ಹತ್ತಿರದ ಸಂಬಂದಿಗಳನ್ನ ಷ್ಟೇ ಕರೆದು ಅವರಿಗೆ ನಾನ್ವೆಜ್ ಊಟ ಬಡಿಸಿ ಪತ್ನಿ ವಿಜಯಲಕ್ಷ್ಮಿ ಅವರ ಹುಟ್ಟು ಹಬ್ಬವನ್ನು ಗ್ರಾಂಡ್ ಆಗಿ ಸಲೆಬ್ರೆಟ್ ಮಾಡಿದ್ದಾರೆ.
     ಇನ್ನು ಕೆಲ ದಿನಗಳ ಹಿಂದಷ್ಟೇ ನಟಿ ಪವಿತ್ರಾ ಗೌಡ ಮಗಳ ಹುಟ್ಟುಹಬ್ಬದಲ್ಲಿ ಡ್ಯಾನ್ಸ್ ಮಾಡಿ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದ ದರ್ಶನ್ ಈದೀಗ ಎಲ್ಲವನ್ನೂ ಮರೆತು ಬುಲ್ ಬುಲ್ ಮಾತಾಡಕ್ಕಿಲ್ವಾ ಎಂದು ಪತ್ನಿ ವಿಜಯ್ ಲಕ್ಷ್ಮಿ ಜೊತೆ ಹೆಜ್ಜೆ ಹಾಕಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಅಣ್ಣಾ ಅತ್ತಿಗೆ ನೂರ್ಕಾಲ ನೀವು ಹೇಗೆ ನಗುನಗುತ್ತಾ ಬದುಕಿ ಎಂದು ಹಾರೈಸಿದ್ದಾರೆ.
ಪ್ರೀತಿಯ ಪತ್ನಿ ಗೆ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರು ಐದು ಕೋಟಿ ಬೆಲೆ ಬಾಳುವ ಕಾರ್ ಅನ್ನು ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಪ್ರೀತಿಯ ಮಗ ವಿನೀಶ್ ಅಮ್ಮನನ್ನು ತಬ್ಬಿ ಮುತ್ತಿಟ್ಟು ಪ್ರೀತಿಯ ಅಮ್ಮಾ ನಿನಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ ಎನ್ನಲಾಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.