ಗೆಳತಿ ಬತ್೯ಡೇಲಿ ಕಾಣಿಸಿಕೊಂಡ ದಶ೯ನ್ ಪತ್ನಿ ವಿಜಯಲಕ್ಷ್ಮಿ, ಕೌಂಟರ್ ಕೊಟ್ಟ ರಚಿತಾ ರಾಮ್?

 | 
ಕ್
 ಸ್ಯಾಂಡಲ್​ವುಡ್ ನಟಿ ರಚಿತಾ ರಾಮ್ ಅವರ ಇನ್​ಸ್ಟಾಗ್ರಾಮ್ ಪೋಸ್ಟ್ ಒಂದು ಕುತೂಹಲ ಮೂಡಿಸಿದೆ. ನಟಿಯ ಕುರಿತು ಹಲವಾರು ವಿಚಾರಗಳು ಕೇಳಿ ಬರುತ್ತಿರುವ ಮಧ್ಯೆಯೇ ರಚಿತಾ ರಾಮ್ ಅವರು ಈ ಒಂದು ಪೋಸ್ಟ್ ಹಾಕಿದ್ದಾರೆ.ನಕಲಿ ಜನರಿಗೆ ನೋಡಿಕೊಳ್ಳಲು ಒಂದು ಇಮೇಜ್ ಇದೆ. ಆದರೆ ಅಸಲಿ ಜನರು ಯಾವುದನ್ನೂ ಕೇರ್ ಮಾಡಲ್ಲ ಎಂದು ರಚಿತಾ ರಾಮ್ ಪೋಸ್ಟ್ ಹಾಕಿದ್ದಾರೆ.
 ಬ್ಲ್ಯಾಕ್ ಬ್ಯಾಗ್ರೌಂಡ್​​ನಲ್ಲಿ ನಟಿ ಈ ಸಾಲುಗಳನ್ನು ಇಂಗ್ಲಿಷ್​​ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಈ ಮಾತು ಹೇಳಿದ್ದು ಯಾರಿಗೆ ಅಂತಾ ಯಾರು ಯಾರಿಗೆ ಗೊತ್ತಿದೆ ಲೈಕ್ ಮಾಡಿ ಎಂದು ನೆಟ್ಟಿಗರು ಕೂಡಾ ಮಾರ್ಮಿಕವಾಗಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಇದು ಯಾವುದಕ್ಕೆ ಸಂಬಂಧಿಸಿದ್ದು ಅಂತ ಯಾರೂ ಎಲ್ಲಿಯೂ ಸ್ಪಷ್ಟವಾಗಿ ಹೇಳಿಲ್ಲ. 
ಈ ಮೊದಲು ರಚಿತಾ ರಾಮ್ ಅವರು ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ್ದರು. ಆ ಬಳಿಕ ಅವರು ಕಣ್ಣೀರು ಹಾಕಿದ್ದರು. ಈ ವಿಚಾರಕ್ಕೆ ಕೆಲವರು ಅವರನ್ನು ಟೀಕೆ ಕೂಡ ಮಾಡಿದ್ದರು. ಆದರೆ ಈದೀಗ ಹಾಕಿರುವ ಪೋಸ್ಟ್ ಕೂಡಾ ದರ್ಶನ್ ಕುರಿತಾಗಿಯೇ ಅನ್ನೊದು ಹಲವರ ವಾದವಾಗಿದೆ.
ಇನ್ನು ಕೆಲವರು ವಿಜಯಲಕ್ಷ್ಮೀ ಇದೀಗ ಹುಟ್ಟು ಹಬ್ಬದ ಆಚರಣೆಗಳಲ್ಲಿ ಭಾಗವಹಿಸುತ್ತಿರುವ ಕಾರಣ ಈ ಪೋಸ್ಟ್ ಹಾಕಿದ್ದಾರೆ ಎಂಬುದು ಕೆಲ ಅಭಿಮಾನಿಗಳ ಲೆಕ್ಕಾಚಾರವಾಗಿದೆ. ಆದ್ರೆ ಮತ್ತೂ ಕೆಲವರು ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ದರ್ಶನ್ ಅವರ ಪರಿಸ್ಥಿತಿ ಹೀಗಿದ್ದರೂ ರಚಿತಾ ರಾಮ್ ಹೊಸ ಚಿತ್ರದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದಾರೆ. 
ಅದು ಜಮೀರ್ ಪುತ್ರ ಝೈದ್ ಖಾನ್ ಜೊತೆ ದೊಡ್ಡ ಬಜೆಟ್ ಸಿನಿಮಾವನ್ನು ಅವರು ಶುರು ಮಾಡುತ್ತಿದ್ದಾರೆ. ಈ ಸಮಯದಲ್ಲಿ ಸಾಕಷ್ಟು ಜನ ದರ್ಶನ್ ಕಷ್ಟದಲ್ಲಿ ಇದ್ದರೆ ನಿಮ್ಮ ದುಡಿಮೆ ನೋಡಿಕೊಳ್ಳುತ್ತಿದ್ದೀರಾ ಎಂದು ನೆಗೆಟಿವ್ ಕಾಮೆಂಟ್ ಅನ್ನು ಮಾಡುತ್ತಿದ್ದಾರೆ. ಇದಕ್ಕೆ ರಚಿತಾ ರಾಮ್ ಉತ್ತರ ಕೊಟ್ಟಿದ್ದಾರೆ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.